ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿದ ಬಗ್ಗೆ ಸ್ಪಷ್ಟನೆ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್

Hassan News: ಹಾಸನ : ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಪಟೇಲ್ ಇಂದು ಮತಯಾಚಿಸಿದರು. ಜಿಲ್ಲಾ ವಕೀಲರ ಸಂಘದಲ್ಲಿ ಮತಯಾಚನೆ ಮಾಡಿದ ಶ್ರೇಯಸ್‌ಪಟೇಲ್, ವಕೀಲರನ್ನು ಭೇಟಿ ಮಾಡಿ, ತನಗೆ ಮತ ನೀಡುವಂತೆ ಕೇಳಿದ್ದಾರೆ.

ಬಳಿಕ ಮಾತನಾಡಿದ ಶ್ರೇಯಸ್, ಹೋದ ಕಡೆಯಲ್ಲೆಲ್ಲಾ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಬದಲಾವಣೆ ತನ್ನಿ ಎಂದು ಎಲ್ಲರಲ್ಲಿ ಮನವಿ ಮಾಡಿದ್ದೇನೆ. ಒಮ್ಮೆ ನನಗೆ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ ನಾವು ಗೆಲ್ತೀವಿ. ಏ.15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಡೂರಿಗೆ ಬರ್ತಾರೆ. ಏ.18 ರಂದು ಸಿಎಂ, ಡಿಎಸಿಎಂ ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಕಲಗೂಡು ಸೇರಿದಂತೆ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡ್ತಾರೆ. ಒಂದೊಂದೆಡೆ ರೋಡ್ ಶೋ, ಮತ್ತೊಂದೆಡೆ ಬಹಿರಂಗ ಸಭೆ ಇರುತ್ತೆ. ಒಂದೇ ದಿನದಲ್ಲಿ ಏಳು ವಿಧಾನಸಭಾ ಕ್ಷೇತ್ರ ಮುಗಿಸುತ್ತಾರೆ. ನಮಗೆ ಒಂದು ದಿನ ಚುನಾವಣೆ ಪ್ರಚಾರಕ್ಕೆ ಬಂದರೆ ಸಾಕು. ಇದಕ್ಕಿಂತ ಮುಂಚೆ ಹತ್ತಾರು ಬಾರಿ ಬಂದಿದ್ದಾರೆ ಎಂದು ಶ್ರೇಯಸ್ ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರು ಭೇಟಿ ವಿಚಾರದ ಬಗ್ಗೆ ಮಾತನಾಡಿದ ಶ್ರೇಯಸ್, ಪ್ರತಿ ತಿಂಗಳು ಅಮವಾಸ್ಯೆ ಪೂಜೆಗೆ ದೊಡ್ಡಗದ್ದವಳ್ಳಿ ದೇವಸ್ಥಾನಕ್ಕೆ ಹೋಗ್ತಿನಿ. ಪಕ್ಷಾತೀತವಾಗಿ ಎರಡು, ಮೂರು ಸಾವಿರ ಜನ ಇದ್ದರು. ಅವತ್ತು ಬೆಳಿಗ್ಗೆ ಹೋದಾಗ ಕೊಇನ್ಸಿಡೆನ್ಸ್ ಅವರು ಬಂದರು. ನಾನು ಸಹಾಯ ಮಾಡಿ ಎಂದು ಮತಯಾಚಿಸಿದೆ. ಅವರು ನಗತ್ತಲೇ ಹೋದರು. ಗುಂಪಿನಲ್ಲಿದ್ದಾಗ ಒಂದು ಫೋಟೋ ತೆಗೆದುಕೊಂಡರು. ಅದು ಬಿಟ್ಟರೆ ನಾನು ಹೋಗಿದ್ದು ಅವರು ಅಲ್ಲಿ ಇದ್ದದ್ದು ನೂರಕ್ಕೆ ನೂರು ಪರ್ಸೆಂಟ್ ಕೊಇನ್ಸಿಡೆನ್ಸ್. ನಾನು ಬಿಜೆಪಿಯ ಯಾರನ್ನು ಭೇಟಿ ಮಾಡಿಲ್ಲ, ಅದೆಲ್ಲಾ ಸುಳ್ಳು. ನಾನು ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷದವರನ್ನು ಭೇಟಿ ಮಾಡಿದ್ದೀನಿ. ಸುಮ್ನೆ ವೈಯುಕ್ತಿಕವಾಗಿ ಯಾರ ಮೇಲೂ ಮಾತನಾಡಬಾರದು, ಆ ರೀತಿ ಏನು ಇಲ್ಲ ಎಂದು ಶ್ರೇಯಸ್ ಸ್ಪಷ್ಟನೆ ನೀಡಿದ್ದಾರೆ.

ಫೇಕ್‌ ಫ್ಯಾಕ್ಟರಿಯನ್ನು ಕಾನೂನಿನ ಮೂಲಕ ಬೇರು ಸಹಿತ ಕಿತ್ತೆಸೆಯುತ್ತೇವೆ: ಸಿಎಂ ಸಿದ್ದರಾಮಯ್ಯ

ಮೊದಲ ಬಾರಿಗೆ ಮೈತ್ರಿ ಅಭ್ಯರ್ಥಿ ಪರ ಮತಯಾಚಿಸಿದ ಪ್ರೀತಂಗೌಡ, ಆದರೆ..

ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದ ಮೈತ್ರಿ ನಾಯಕರು..

About The Author