National News: ಉಜ್ಜಯಿನಿ ಮಹಾಾಕಾಲೇಶ್ವರ ದೇವಸ್ಥಾನದಲ್ಲಿ ಹೋಳಿ ಹುಣ್ಣಿಮೆಯ ದಿನ, ಪೂಜೆ ನಡೆಯುವಾಗ, ಅಗ್ನಿ ಅವಘಡ ಸಂಭವಿಸಿದ್ದು, ಕೆಲವರು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ವೇಳೆ ಗಾಯಗೊಂಡಿದ್ದ ಹಿರಿಯ ಅರ್ಚಕರಾದ ಸತ್ಯನಾರಾಯಣ ಸೋನಿ(79) ಸಾವನ್ನಪ್ಪಿದ್ದಾರೆ. ಹೋಳಿ ಹಬ್ಬದ ದಿನ ಗರ್ಭಗುಡಿಯಲ್ಲಿ ಮಹಾಕಾಲನಿಗೆ ಗುಲಾಬಿ ರಂಗು ಬಳಸಿ ಪೂಜೆ ಮಾಡಲಾಗುತ್ತಿತ್ತು. ಈ ವೇಳೆ ಬೆಂಕಿ ಪಸರಿಸಿ, ಅಲ್ಲೇ ಇದ್ದ ಕೆಲ ಅರ್ಚಕರು ಮತ್ತು ಭಕ್ತರು ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಆದರೆ ಚಿಕಿತ್ಸೆ ಫಲಿಸದೇ ಸತ್ಯನಾರಾಯಣ ಸಾವನ್ನಪ್ಪಿದ್ದಾರೆ. ಇವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈ ಆಸ್ಪತ್ರೆಗೆ ದಾಖಱಲಿಸಲಾಗಿದ್ದು, ಸಕ್ಕರೆ ಖಾಯಿಲೆ ಇದ್ದ ಕಾರಣ, ಇವರು ಗುಣಮುಖರಾಗಲು ಸಾಧ್ಯವಾಗದೇ, ಸಾವನ್ನಪ್ಪಿದ್ದಾರೆ. ಸತ್ಯನಾರಾಯಣ್ ಅವರ ಸಾವಿಗೆ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಸಂತಾಪ ಸೂಚಿಸಿದ್ದಾರೆ.