Utthara Kannada News: ಬಡಗುತಿಟ್ಟು ಯಕ್ಷಗಾನದ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ(67) ನಿಧನರಾಗಿದ್ದಾರೆ. 46 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ಕಲಾ ಸೇವೆ ಸಲ್ಲಿಸಿದ್ದ ಸುಬ್ರಹ್ಮಣ್ಯ ಧಾರೇಶ್ವರ ಅವರು, ಇಂದು ಬೆಳಿಗ್ಗೆ 4.30ರ ಸುಮಾರಿಗೆ ಬೆಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ದೈವಾಧೀನರಾಗಿದ್ದಾರೆ.
ಯಕ್ಷರಂಗಕ್ಕೆ ಕಾಲಿಟ್ಟಾಗ ಅಮೃತೇಶ್ವರಿ ಮೇಳದಲ್ಲಿದ್ದ ಭಾಗವತರು, ಬಳಿಕ ಹೀರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳದಲ್ಲೂ ಭಾಗವತರಾಗಿ ಕಲಾ ಸೇವೆ ಸಲ್ಲಿಸಿದ್ದಾರೆ. ಇದಾದ ಬಳಿಕ 28 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ಕಂಠದಾನ ಮಾಡಿದ್ದಾರೆ. ಈ ಮೊದಲು ಭಾಗವತಿಕೆಯೊಂದಿಗೆ ಸಂಗೀತ ಕಾರ್ಯಕ್ರಮವನ್ನು ಕೂಡ ಸುಬ್ರಹ್ಮಣ್ಯ ಧಾರೇಶ್ವರ ಅವರು ನೀಡುತ್ತಿದ್ದರು. ಭಾಗವತರ ನಿಧನಕ್ಕೆ ಯಕ್ಷರಂಗ ಸಂತಾಪ ಸೂಚಿಸಿದೆ.
ಹಿಜಬ್ ಧರಿಸಿದ ಮಹಿಳೆಯನ್ನು ಭಾರತದ ಪ್ರಧಾನಿಯನ್ನಾಗಿ ನೋಡಬಯಸುತ್ತೇನೆ: ಒವೈಸಿ
ನಾಲಾಯಕ್ ಪದ ಬಳಕೆ: ವಿಯಜೇಂದ್ರ ವಿರುದ್ಧ ಮರಾಠ ಸಮೂದಾಯದಿಂದ ಪ್ರತಿಭಟನೆ