Dharwad News: ಧಾರವಾಡ: ನವಲಗುಂದದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ, ರೋಡ್ ಶೋ ನಡೆಸಿ ಕ್ಯಾಂಪೇನ್ ನಡೆಸಿದ್ದರು.
ಈ ವೇಳೆ ಮಾತನಾಡಿದ ಪ್ರಹ್ಲಾದ್ ಜೋಶಿ, ದೇಶದಲ್ಲಿ ಹತ್ತು ವರ್ಷದಲ್ಲಿ ಬಹುಮುಖ್ಯ ಬದಲಾವಣೆಯಾಗಿದೆ. ದೇಶದ ಜನ ಸ್ವಾವಲಂಬಿಯಾಗಲು ಮೋದಿಯವರು ಅನೇಕ ಸ್ಕೀಮ್ ಕೊಟ್ಟಿದ್ದಾರೆ. ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆಯಡಿ ನೇರವಾಗಿ ಹಣ ಹಾಕಲು ಶುರು ಮಾಡಿದ್ದು ಮೋದಿ. ಅದಕ್ಕೆ ಯಡಿಯೂರಪ್ಪ ನಾಲ್ಕು ಸಾವಿರ ಸೇರಿಸಿದ್ದರು. ಆದರೆ ಅದನ್ನು ನಿಲ್ಲಿಸಿದ್ದ ಶ್ರೇಯಸ್ಸು ಸಿದ್ದರಾಮಯ್ಯಗೆ ಸಲ್ಲುತ್ತದೆ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಸಂತೋಷ ಲಾಡ್ ಮತ್ತು ಅನೇಕ ಶಾಸಕರು ಕಳಸಾ-ಬಂಡೂರಿ ಬಗ್ಗೆ ಭಾಷಣ ಮಾಡಿದ್ದಾರೆ. ಕಳಸಾ-ಬಂಡೂರಿ ಹೋರಾಟ ಮೊದಲು ಶುರು ಮಾಡಿದ್ದು ನಾವು. ಆ ಹೋರಾಟಕ್ಕೆ ನ್ಯಾಯ ಕೊಟ್ಟಿದ್ದು ಯಡಿಯೂರಪ್ಪ. ನ್ಯಾಯಾಧೀಕರಣಕ್ಕೆ ಮೊದಲು ಕುಡಿಯುವ ನೀರು ಕೊಡಿ ಎಂದಿದ್ವಿ. ಆದರೆ ಒಂದು ಹನಿ ನೀರೂ ಕೊಡೊಲ್ಲ ಅಂತಾ ಸೋನಿಯಾ ಗಾಂಧಿ ಹೇಳಿದ್ದರು. ಹೀಗಾಗಿ ನ್ಯಾಯಾಧೀಕರಣಕ್ಕೆ ಹೋಯ್ತು. ಆದರೂ ನ್ಯಾಯಾಧೀಶರನ್ನು ಎರಡ್ಮೂರು ವರ್ಷ ನೇಮಿಸಲಿಲ್ಲ. ಆದರೆ ಸಿಬ್ಬಂದಿ, ಕೊಠಡಿಯನ್ನೂ ಕೊಟ್ಟಿರಲಿಲ್ಲ. ನಾವು ಬಂದ ಮೇಲೆ ಸಿಬ್ಬಂದಿ, ಕೊಠಡಿ ಕೊಟ್ವಿ. ನಾವು ಬಂದ ಮೇಲೆಯೇ ಮಧ್ಯಂತರ ತೀರ್ಪು ಬಂತು ಎಂದು ಜೋಶಿ ಹೇಳಿದರು.
ಆಗ ಇಲ್ಲಿನ ಶಾಸಕರು ಗೆಜೆಟ್ ನೊಟೀಫಿಕೇಷನ್ ಆಗೊಲ್ಲ ಎಂದಿದ್ದರು. ಆದರೆ ಗೆಜೆಟ್ ನೋಟಿಫಿಕೇಷನ್ ಸಹ ಆಯ್ತು. ಪರಿಸರ ಇಲಾಖೆ ಅನುಮತಿ ಕೊಡಿಸಿದ್ದೇವೆ. ವಿಸ್ತೃತ ಯೋಜನೆ ವರದಿ ಬೊಮ್ಮಾಯಿ ಅವಧಿಯಲ್ಲಿ ಕಳುಹಿಸಲಾಗಿತ್ತು. ಡಿಪಿಆರ್ ಅನುಮತ ಕೊಡಿಸೋದು ಮಹತ್ವದ ಘಟ್ಟ. ಡಿಪಿಆರ್ ಗೆ ಅನುಮತಿಯನ್ನೂ ಕೊಡಿಸಲಾಗಿದೆ. ಈಗ ಫಾರೆಸ್ಟ್ ಕ್ಲಿಯರೆನ್ಸ್ ಮಾತ್ರ ಬಾಕಿ ಉಳಿದಿದೆ. ಹಸಿರು ಉಳಿಯಬೇಕಂತಾ. ಸಂರಕ್ಷಣೆಗೆ ಕಾನೂನುಗಳಿವೆ. ಹೊಲದಲ್ಲಿ ಒಂದು ಗಿಡ ಕಡೆಯೋದು ಕಷ್ಟ ಇದೆ. ಆದರೆ 55 ಹೆಕ್ಟೇರ್ ಫಾರೆಸ್ಟ್ ಕಡೆಯ ಬೇಕಿದೆ. ಆ ಅರಣ್ಯ ಹುಲಿಗಳಿವೆ. ಹೀಗಾಗಿ ವನ್ಯಜೀವಿ ಮಂಡಳಿಗೆ ಹೋಗಿದೆ. ಈ ಮಂಡಳಿ ಹುಲಿ ಪ್ರಾಧಿಕಾರಕ್ಕೆ ಹೋಗಿದೆ. ಹುಲಿ ಗೆ ಸಂಬಂಧಿಸಿದ ಸಮಸ್ಯೆ ಕ್ರಿಯರ್ ಮಾಡುತ್ತೇವೆ. ಫಾರೆಸ್ಟ್ ಕ್ಲಿಯರೆನ್ಸ್ ಕೊಡಿಸೋ ಜವಾಬ್ದಾರಿ ನಮ್ಮದು.
ಕಳಸಾ-ಬಂಡೂರಿ ಫಾರೆಸ್ಟ್ ಕ್ಲಿಯರೆನ್ಸ್ ಗೆ ರಾಜ್ಯ ಸರ್ಕಾರ ಸರಿಯಾದ ಮಾಹಿತಿ ಕೊಟ್ಟಿಲ್ಲ. ಆದರೆ ನಾವೇ ಮಾಹಿತಿ ತರಿಸಿಕೊಂಡು ಕಾರ್ಯ ಮಾಡಿದ್ದೇವೆ. ಕಳಸಾದ್ದು ಮಾತ್ರ ಪ್ರೊಜೆಕ್ಟ್ ಬಂದಿದೆ. ಆದರೆ ಬಂಡೂರಿ ಪ್ರೊಜೆಕ್ಟ್ ಕೇಂದ್ರಕ್ಕೆ ಕಳುಹಿಸಿಯೇ ಇಲ್ಲ. ನಾವು ಕಟ್ಟಿಸಿದ್ದ ಕಾಲುವೆಗೆ ತಡೆಗೋಡೆ ಕಟ್ಟಿಸಿದ ಪಾಪಿಗಳು ಕಾಂಗ್ರೆಸ್‌ಗರು. ಇಲ್ಲಿ ಹೋರಾಟ ನಡೆದಿತ್ತು. ನಮ್ಮ ವಿರುದ್ಧವೂ ಘೋಷಣೆ ಹಾಕಿದ್ದರು. ಆದರೂ ನಾವು ಸಂಯಮದಿಂದ ರೈತರ ಮಾತು ಕೇಳಿದ್ವಿ. ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ ಪಾಪಿಗಳು ಕಾಂಗ್ರೆಸ್ಸಿಗರು ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಸಂತ್ರಸ್ತೆಯ ಅತ್ತೆಯಿಂದ ಸ್ಪೋಟಕ ಹೇಳಿಕೆ..
ನೆಚ್ಚಿನ ಸಾಕು ನಾಯಿ ಸಾವನ್ನಪ್ಪಿದ್ದಕ್ಕೆ ಆತ್ಮಹ*ತ್ಯೆಗೆ ಶರಣಾದ ಬಾಲಕಿ