Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಹತ್ತು ವರ್ಷ ಅಧಿಕಾರ ನಡೆಸಿದ ಮೋದಿಯವರ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ತೆಗೆದುಕೊಂಡು ಬಂದು ಮತ ಕೇಳಬೇಕಿತ್ತು. ಬಾಯಿ ಬಿಟ್ಟರೇ ಸುಳ್ಳು, ಇದೇ ಸುಳ್ಳುಗಳ ಮೇಲೆ ಮತ ಕೇಳುತ್ತಿದ್ದಾರೆ ಎಂದು ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಮೀಸಲಾತಿ ಬಗ್ಗೆ ತಿರುಚಿ ಹೇಳಿಕೆ ಕೊಟ್ಟಿದ್ದಾರೆ. ಹಿಂದೂ ಮುಸ್ಲಿಂ ಬೆಂಕಿ ಹಚ್ಚಿ ಬಿಜೆಪಿ ಚುನಾವಣೆ ಮಾಡುತ್ತಿದೆ. ಮಹಿಳೆಯರ ಮಾಂಗಲ್ಯವನ್ನ ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ ಸುಳ್ಳು ಭಾಷಣ ಮಾಡುತ್ತಿದ್ದಾರೆ. ಕುಸ್ತಿಪಟುಗಳು ಆರು ತಿಂಗಳು ಕಾಲ ಪ್ರತಿಭಟನೆ ಮಾಡಿದಾಗ ಅದನ್ನ ಬಿಜೆಪಿ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಬೇಟಿ ಬಚಾವೋ ಬೇಟಿ ಪಡಾವೋ ಎಲ್ಲಿ ಇದೆ. ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಪ್ರಜ್ವಲ್ ರೇವಣ್ಣವರ ವಿಷಯದಲ್ಲಿ ಬಿಜೆಪಿ ಏನ್ ಮಾಡುತ್ತಿದೆ. ನಿನ್ನೆ ಮೋದಿಯವರು, ಇಂದು ಅಮಿತ್ ಷಾ ಅವರು ಕರ್ನಾಟಕದಲ್ಲಿದ್ದಾರೆ ಈ ಪ್ರಕರಣವನ್ನ ಅವರು ಏಕೆ ಖಂಡಿಸುತ್ತಿಲ್ಲ ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.
ರಣಹದ್ದಿನ ಹಾಗೆ ನೇಹಾಳ ವಿಷಯದಲ್ಲಿ ರಾಜಕೀಯ ಲಾಭ ತೆಗೆದುಕೊಳ್ಳುತ್ತಿವೆ. ನೇಹಾ ಹತ್ಯೆ ವಿಷಯದಲ್ಲಿ ಇವರಿಗೆ ಮತಗಳು ಬರ್ತಾವೆ, ಈಗಾಗಿ ರಾಜಕಾರಣ ಮಾಡ್ತಿವೆ. ತಮ್ಮ ಅನುಕೂಲಕರವಾದ್ರೆ ಮಾತ್ರ ಪ್ರತಿಭಟನೆ, ತುಮಕೂರಿನಲ್ಲಿ ನಡೆದ ಮುಸ್ಲಿಂ ಯುವತಿಯ ಕೊಲೆ ಬಗ್ಗೆ ಏಕೆ ಬಿಜೆಪಿಯವರು ಹೋರಾಟ ಮಾಡಲಿಲ್ಲ. ಬಿಜೆಪಿ ಗಿಲ್ಟಿ ಪಾರ್ಟಿ, ನಿಮ್ಮ ಡೊಂಗಿತನ. ಬಿಜೆಪಿಯವರಿಗೆ ಮಾನವೀಯತೆ ಇಲ್ಲ ಎಂದು ಗುಂಡೂರಾವ್ ಆಕ್ರೋಶ ಹೊರಹಾಕಿದ್ದಾರೆ.
ಬಸವರಾಜ ಬೊಮ್ಮಾಯಿ ಫೇಕ್ ವಿಡಿಯೋ ಎಂದು ಹೇಳುತ್ತಿದ್ದಾರೆ. ಪ್ರಜ್ವಲ್ ರೇವಣ್ಣನ ಪ್ರಕರಣದಲ್ಲಿ ಜೋಶಿಯವರ ನಿಲವು ಏನು..? ಮೋದಿ ಮತ್ತು ಷಾ ಅವರಿಗೆ ಮೊದಲೇ ಈ ವಿಷಯ ಗೊತ್ತಿತ್ತು. ಗೊತ್ತಿದ್ದರೂ ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ, ಅವರ ಪರವಾಗಿ ಮೋದಿ ಬಂದು ಪ್ರಚಾರ ಮಾಡಿದ್ರು. ಅಮಿತ್ ಷಾ ನೇಹಾಳ ಮನೆಗೆ ಭೇಟಿ ಕೊಟ್ಟರೇ ಅದು ರಾಜಕೀಯ ಲಾಭಕ್ಕಾಗಿ, ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಉತ್ತಮ ಬೆಂಬಲ ಸಿಗುತ್ತಿದೆ. ನೇಹಾ ಹಿರೇಮಠ ಮನೆಗೆ ಭೇಟಿ ಏಕೆ ಡೊಂಗಿತನ ಮಾಡ್ತಿರಿ ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.
ಪ್ರಹ್ಲಾದ ಜೋಶಿ ಪ್ರಬುದ್ಧರಂದು ಅಂದುಕೊಂಡಿದ್ದಾರೆ ಮನಸ್ಸೊ ಇಚ್ಛೆ ಹೇಳಿಕೆ ನೀಡುತ್ತಾ ಹೊರಟಿದ್ದಾರೆ. ಅಧಿಕಾರದ ಪ್ರಬುದ್ಧತೆಯನ್ನ ಅಧಿಕಾರದ ಅಹಮ್ಮಿನಲ್ಲಿ ಕಳೆದುಕೊಂಡಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಣ್ಣು ಮುಚ್ಚಿಗೊಂಡು ಬಿಜೆಪಿಯವರು ಗೆಲ್ಲುತ್ತೆವೆಂದು ಅಂದಕೊಂಡಿದ್ದರು. ಈಗ ಇಲ್ಲಿ ಬಿಜೆಪಿಯವರು ಹರಸಾಹಸ ಪಡಬೇಕಿದೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ದೇಶದ ಜನ ಸ್ವಾವಲಂಬಿಯಾಗಲು ಮೋದಿಯವರು ಅನೇಕ ಸ್ಕೀಮ್ ಕೊಟ್ಟಿದ್ದಾರೆ: ಪ್ರಹ್ಲಾದ್ ಜೋಶಿ
ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಸಂತ್ರಸ್ತೆಯ ಅತ್ತೆಯಿಂದ ಸ್ಪೋಟಕ ಹೇಳಿಕೆ..