ಸಂಬಂಧಗಳಲ್ಲೇ ಉತ್ತಮ ಸಂಬಂಧವೆಂದರೆ ಪತಿ- ಪತ್ನಿ ಸಂಬಂಧ. ಈ ಸಂಬಂಧದಿಂದಲೇ ಒಂದು ಸುಂದರ ಕುಟುಂಬ ತಯಾರಾಗೋದು. ಆದ್ರೆ ಪತಿಯ ಏಳು ಬೀಳಿಗೆ ಪತ್ನಿಯೇ ಕಾರಣವೆನ್ನಲಾಗಿದೆ. ಪತಿಯನ್ನ ಶ್ರೀಮಂತ ಮಾಡಲು ಪತ್ನಿ ಪತಿಯ ಕಾಲು ಒತ್ತಬೇಕು.

ಹೌದು.. ಆದ್ರೆ ಇಲ್ಲಿ ಪತಿ – ಪತ್ನಿಯು ಅನೋನ್ಯವಾಗಿರಬೇಕಾಗುತ್ತದೆ. ಪರಸ್ಪರ ಹೊಂದಾಣಿಕೆ ಪ್ರೀತಿಯಿಂದ ಇರಬೇಕಾಗುತ್ತದೆ. ಪತಿಯ ಕಾಲು ಒತ್ತಿದ್ರೆ ದುಡ್ಡು ಬರತ್ತೆ ಅನ್ನೋ ದುರಾಸೆಯಿಂದಲೋ, ಅಥವಾ ನಾನ್ಯಾಕೆ ಅವರ ಸೇವೆ ಮಾಡಲಿ ಎಂಬ ಅಹಂಕಾರದಿಂದ ಹೆಂಡತಿ ಇದ್ದರೆ, ಏಳಿಗೆಯಾಗಲು ಸಾಧ್ಯವಿಲ್ಲ.
ನೀವು ಶ್ರೀವಿಷ್ಣುವಿನ ಕಾಲನ್ನ ಲಕ್ಷ್ಮಿದೇವಿ ಒತ್ತುತ್ತಿರುವ ದೃಶ್ಯವನ್ನ ಫೋಟೋದಲ್ಲೋ, ಟಿವಿಯಲ್ಲೋ ನೋಡುತ್ತೀರಿ. ಆದಿಶೇಷನ ಮೇಲೆ ಮಲಗಿರುವ ವಿಷ್ಣುವಿನ ಕಾಲನ್ನ ಲಕ್ಷ್ಮಿ ಒತ್ತುತ್ತಾಳೆ. ಹೀಗೆ ಮಾಡುವುದರಿಂದ ಧನಲಾಭವಾಗುತ್ತದೆ ಎಂದು ಹೇಳಲಾಗಿದೆ.
ಲಕ್ಷ್ಮಿಯ ಹಾಗೇ ನೀವೂ ಪತಿಯ ಸೇವೆ ಮಾಡಿದ್ದಲ್ಲಿ ನಿಮಗೆ ಧನಲಾಭವಾಗುತ್ತದೆ. ಇದರಿಂದ ಕಲಹ ಕಡಿಮೆಯಾಗಿ ಸತಿ-ಪತಿ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ. ಆದ್ರೆ ಇಲ್ಲಿ ದುರಾಸೆಗಿಂತ ಪ್ರೀತಿ ಮುಖ್ಯ. ಪುರಾಣದ ಪ್ರಕಾರ ಯಾವ ಪತ್ನಿ ಲಕ್ಷ್ಮಿಯಂತೆ ತನ್ನ ಪತಿಯ ಕಾಲು ಒತ್ತಿ ಸೇವೆ ಮಾಡುತ್ತಾಳೋ, ಅಂಥ ಮನೆಯಲ್ಲಿ ಲಕ್ಷ್ಮಿ ಸ್ಥಾಪಿತಳಾಗುತ್ತಾಳಂತೆ.
ಇನ್ನೊಂದು ವಿಶೇಷವೆಂದರೆ, ಪುರುಷನ ಮಂಡಿಯ ಭಾಗದಿಂದ ಪಾದದವರೆಗಿನ ಭಾಗವು ಶನಿದೇವನ ಸ್ಥಾನ ಹೊಂದಿದ್ದರೆ, ಸ್ತ್ರೀಯರ ಮಣಿಕಟ್ಟಿನ ಭಾಗದಿಂದ ಬೆರಳಿನ ತನಕದ ಭಾಗವು ಶುಕ್ರನ ಪ್ರಭಾವಕ್ಕೆ ಒಳಪಟ್ಟಿರುತ್ತದೆ. ಶನಿಯ ಪ್ರಭಾವ ಶುಕ್ರನ ಮೇಲೆ ಬಿದ್ದಾಗ ಧನಲಾಭವಾಗುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ಪತ್ನಿ ಪತಿಯ ಕಾಲು ಒತ್ತಬೇಕು ಎನ್ನಲಾಗಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.