ಬಾಲ್ಯದ ಕ್ರಶ್ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಳ್ತಾರಾ ರಶ್ಮಿಕಾ ಮಂದಣ್ಣ..?

ರಶ್ಮಿಕಾ ಮಂದಣ್ಣ.. ಸದ್ಯ ಸೌತ್ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಿನ್ಸ್ ಮಹೇಶ್ ಬಾಬು, ವಿಜಯ್ ದೇವರಕೊಂಡ, ಪುನೀತ್ ರಾಜ್‌ಕುಮಾರ್ ಸೇರಿ ಹಲವು ದಿಗ್ಗಜ ನಟರೊಂದಿಗೆ ರಶ್ಮಿಕಾ ನಟಿಸಿದ್ದಾರೆ.

https://youtu.be/wWOrrprfS7w

ಆದ್ರೆ ಈಗ ರಶ್ಮಿಕಾಗೆ ತಮ್ಮ ಬಾಲ್ಯದ ಕ್ರಶ್ ದಳಪತಿ ವಿಜಯ್ ಜೊತೆ ನಟಿಸೋ ಅವಕಾಶ ಸಿಗೋ ಹಂತದಲ್ಲಿದೆ. ತುಪ್ಪಕ್ಕಿ ಸಿನಿಮಾದ ಸಿಕ್ವೇಲ್ ತಯಾರಾಗುತ್ತಿದ್ದು, ಇದರಲ್ಲಿ ವಿಜಯ್ ಜೊತೆ ರಶ್ಮಿಕಾ ನಟಿಸುತ್ತಾರೆ ಎಂದು ಹೇಳಲಾಗಿದೆ. ಅಲ್ಲದೇ ಈ ಚಿತ್ರದಲ್ಲಿ ನಟಿ ಕಾಜಲ್ ಅಗರವಾಲ್ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಎ ಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಸನ್ ಪಿಕ್ಚರ್ಸ್‌ನಡಿಯಲ್ಲಿ ಈ ಸಿನಿಮಾ ರೆಡಿಯಾಗುತ್ತಿದೆ.

About The Author