Political News: ಇಂದು ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬವಾಗಿದ್ದು, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮೊಮ್ಮಗ ನಿಖಿಲ್ ಕುಮಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.
ಮಾಜಿ ಪ್ರಧಾನಿಗಳು, ಜನತಾದಳ ( ಜಾತ್ಯತೀತ) ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮಗೆ ಇನ್ನಷ್ಟು ಕಾಲ ಆಯಸ್ಸು – ಉತ್ತಮ ಆರೋಗ್ಯವನ್ನು ದೇವರು ನೀಡಲಿ, ತಮ್ಮ ಅನುಭವ, ಮಾರ್ಗದರ್ಶನ ಮುಂದೆಯೂ ನಾಡಿಗೆ ದೊರಕಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ ಮಾಡಿದ್ದಾರೆ.
ಭಾರತ ಗಣರಾಜ್ಯದ 11ನೇ ಪ್ರಧಾನಮಂತ್ರಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು, ನನ್ನ ಪೂಜ್ಯ ತಂದೆಯವರಾದ ಶ್ರೀ ಡಾ||ಹೆಚ್.ಡಿ.ದೇವೇಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ಅವರಿಗೆ ಇನ್ನಷ್ಟು ಆಯುರಾರೋಗ್ಯ ನೀಡಲಿ ಹಾಗೂ ಅವರ ಮಾರ್ಗದರ್ಶನ, ಜನಸೇವೆ ದೀರ್ಘಕಾಲ ಮುಂದುವರಿಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದೇವೇಗೌಡರ ಪುತ್ರ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಶುಭಕೋರಿದ್ದಾರೆ.
ಈ ದೇಶ ಕಂಡ ಅಪರೂಪದ ಜನನಾಯಕ, ರೈತನಾಯಕ, ಕನ್ನಡ ನಾಡಿನ ಅಗ್ರಮಾನ್ಯ ನೇತಾರ, ಹಿರಿಯ ಮುತ್ಸದ್ದಿ, ನೀರಾವರಿ ಹರಿಕಾರ, ಮಾಜಿ ಪ್ರಧಾನಮಂತ್ರಿಗಳು, ನನ್ನ ಆದರ್ಶ ಮತ್ತು ನನ್ನ ಪ್ರೀತಿಯ ತಾತ, ಸನ್ಮಾನ್ಯ ಶ್ರೀ ದೇವೇಗೌಡರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನನ್ನಂತ ಯುವಕರಿಗೆ ಸ್ಪೂರ್ತಿ ಹಾಗೂ ಮಾರ್ಗದರ್ಶಕರಾಗಿರುವ ತಮಗೆ ಭಗವಂತ ಇನ್ನಷ್ಟು ಆಯಸ್ಸು ,ಆರೋಗ್ಯ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಿಖಿಲ್ ಕುಮಾರ್ ದೇವೇಗೌಡರಿಗೆ ವಿಶ್ ಮಾಡಿದ್ದಾರೆ.
ಮಾಜಿ ಪ್ರಧಾನಿಗಳು, ಜನತಾದಳ ( ಜಾತ್ಯತೀತ) ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ತಮಗೆ ಇನ್ನಷ್ಟು ಕಾಲ ಆಯಸ್ಸು – ಉತ್ತಮ ಆರೋಗ್ಯವನ್ನು ದೇವರು ನೀಡಲಿ, ತಮ್ಮ ಅನುಭವ, ಮಾರ್ಗದರ್ಶನ ಮುಂದೆಯೂ ನಾಡಿಗೆ ದೊರಕಲಿ ಎಂದು ಹಾರೈಸುತ್ತೇನೆ. @H_D_Devegowda pic.twitter.com/EU5qx13RQy
— Siddaramaiah (@siddaramaiah) May 18, 2024
ಈ ದೇಶ ಕಂಡ ಅಪರೂಪದ ಜನನಾಯಕ, ರೈತನಾಯಕ, ಕನ್ನಡ ನಾಡಿನ ಅಗ್ರಮಾನ್ಯ ನೇತಾರ, ಹಿರಿಯ ಮುತ್ಸದ್ದಿ, ನೀರಾವರಿ ಹರಿಕಾರ, ಮಾಜಿ ಪ್ರಧಾನಮಂತ್ರಿಗಳು, ನನ್ನ ಆದರ್ಶ ಮತ್ತು ನನ್ನ ಪ್ರೀತಿಯ ತಾತ, ಸನ್ಮಾನ್ಯ ಶ್ರೀ ದೇವೇಗೌಡರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ನನ್ನಂತ ಯುವಕರಿಗೆ ಸ್ಪೂರ್ತಿ ಹಾಗೂ ಮಾರ್ಗದರ್ಶಕರಾಗಿರುವ ತಮಗೆ ಭಗವಂತ… pic.twitter.com/OXPrHd5Uym
— Nikhil Kumar (@Nikhil_Kumar_k) May 18, 2024
ಭಾರತ ಗಣರಾಜ್ಯದ 11ನೇ ಪ್ರಧಾನಮಂತ್ರಿಗಳು, @JanataDal_S ರಾಷ್ಟ್ರೀಯ ಅಧ್ಯಕ್ಷರು, ನನ್ನ ಪೂಜ್ಯ ತಂದೆಯವರಾದ ಶ್ರೀ ಡಾ|| @H_D_Devegowda ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ಅವರಿಗೆ ಇನ್ನಷ್ಟು ಆಯುರಾರೋಗ್ಯ ನೀಡಲಿ ಹಾಗೂ ಅವರ ಮಾರ್ಗದರ್ಶನ, ಜನಸೇವೆ ದೀರ್ಘಕಾಲ ಮುಂದುವರಿಯಲಿ ಎಂದು ಪ್ರಾರ್ಥಿಸುತ್ತೇನೆ.#HDDevegowda pic.twitter.com/NmwUxhgARf— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) May 18, 2024