Wednesday, November 19, 2025

Latest Posts

ಮೂರುಘಾಶರಣರ ಪೋಕ್ಸೋ ಪ್ರಕರಣದ ಸಂತ್ರಸ್ತರಿಗೆ ಜೀವ ಬೆದರಿಕೆಗೆ ಹುಬ್ಬಳ್ಳಿಯಲ್ಲಿ ಆಕ್ರೋಶ

- Advertisement -

Dharwad News: ಮೂರುಘಾಶರಣರ ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತರಿಗೆ ಜೀವ ಬೆದರಿಕೆ, ದೈಹಿಕ ಹಲ್ಲೆ, ವಿಷಪ್ರಾಸನ ಹಾಕಿ ಸಾಕ್ಷಿ ನಾಶಕ್ಕೆ ಮುಂದಾಗಿರು ನಡೆಯನ್ನು ಖಂಡಿಸಿ‌ ಹಾಗೂ ಬೆದರಿಕೆ ಹಾಕಿದವರ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ಹುಬ್ಬಳ್ಳಿಯಲ್ಲಿ ದಲಿತ ಸಂಘಟನೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಿನಿವಿಧಾನಸೌಧ ಮುಂಭಾಗದಲ್ಲಿ ಸಮತಾ ಸೇನೆ ಸೇರಿ ವಿವಿಧ ದಲಿತ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ‌ ನಡೆಸಿ, ಸಂತ್ರಸ್ತೆರಿಗೆ ಜೀವ ಬೆದರಿಕೆ ಮಾಡಿದವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿ ತಹಶೀಲ್ದಾರ ಮೂಲಕ ಗೃಹ ಸಚಿವರಿಗಿ ಸೇರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮುರುಘಾಶರಣರ ಪ್ರಕರಣದಲ್ಲಿ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ದೊರೆಯುತ್ತಿಲ್ಲ. ಆರೋಪಿ ಜೈಲುಪಾಲಾಗಿದ್ದರೂ ಆರೋಪಿಯ ಹಿಂಬಾಲಕರು ಸಂತ್ರಸ್ತೆಯೋರ್ವಳ ಚಿಕ್ಕಪ್ಪನ ಮೂಲಕವೇ ಸಂತ್ರಸ್ತೆಗೆ ಜೀವ ಬೆದರಿಕೆ ಹಾಕುವ ಮೂಲಕ ಸಂತ್ರಸ್ತ ಬಾಲಕಿಗೆ ಮಾನಸಿಕ, ದೈಹಿಕ ಹಿಂಸೆ ನೀಡಲಾಗುತ್ತಿದೆ. ಈ ಮೂಲಕ ಪೋಕ್ಸೋ ಪ್ರಕರಣ ವಾಪಾಸ್ ಪಡೆಯುವ ಹುನ್ನಾರಕ್ಕೆ ಆರೋಪಿಯ ಹಿಂಬಾಲಕರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸಂತ್ರಸ್ತೆ ಹಾಗೂ ಸಂತ್ರಸ್ತ ಸಹೋದರ ಮತ್ತೆ ದೂರು ನೀಡಿದ್ದು ತಕ್ಷಣ ಸಂತ್ರಸ್ತೆ ರಕ್ಷಣೆಗೆ ಸರ್ಕಾರ ಮುಂದಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ‌

ಡಾ. ಎಂ. ಮೋಹನ ಆಳ್ವ -72: ಮೆ.31ರಂದು ಕಾರ್ಕಳ ಜ್ಞಾನಸುಧಾದಲ್ಲಿ ಸವ್ಯಸಾಚಿ ಸಂಭ್ರಮ

ಮಂಡ್ಯದಲ್ಲಿ ಡಾ.ಅಂಬರೀಷ್ ಫೌಂಡೇಷನ್ ಆರಂಭ: ವಿದ್ಯಾರ್ಥಿಗಳನ್ನು ದತ್ತು ಪಡೆದ ಸುಮಲತಾ

Udupi News: ದೈವದ ನುಡಿದಂತೆ ನಡೆಯಿತು ಘಟನೆ: ಕೊ* ಆರೋಪಿ ಅರೆಸ್ಟ್

- Advertisement -

Latest Posts

Don't Miss