Wednesday, November 19, 2025

Latest Posts

ಜೂ.4 ರಂದು ಮತ ಎಣಿಕೆಗೆ ಸಕಲ ಸಿದ್ಧತೆ : ಡಿಸಿ ಸತ್ಯಭಾಮ

- Advertisement -

Hassan News: ಹಾಸನ: ಜೂ 4 ರಂದು ನಗರದ ಡೈರಿ ವೃತ್ತದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಸಿ ಸತ್ಯಭಾಮ ಹೇಳಿದ್ದಾರೆ.

ಡಿಸಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಜೂ.4 ರಂದು ಬೆಳಿಗ್ಗೆ 7 ಗಂಟೆಗೆ ಸಾಮಾನ್ಯ ವೀಕ್ಷಕರು ಹಾಗೂ ಅಭ್ಯರ್ಥಿಗಳ ಸಮಕ್ಷಮದಲ್ಲಿ ಭದ್ರತಾ ಕೊಠಡಿಯನ್ನು ತೆರೆದು ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಮೊದಲಿಗೆ ಅಂಚೆ ಮತಪತ್ರಗಳನ್ನು ಎಣಿಸಿ ಬಳಿಕ ವಿದ್ಯುನ್ಮಾನ ಮತಯಂತ್ರಗಳ ಮತಗಳನ್ನು ಎನಿಸಲಾಗುವುದು ಎಂದು ಮಾಹಿತಿ ನೀಡಿದರು.

ಹಾಸನ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ಗಳನ್ನು ನಿಗದಿಪಡಿಸಲಾಗಿದೆ. ಪ್ರತೀ ಸುತ್ತುವಾರು ಮತ ಎಣಿಕೆ ವಿವರವನ್ನು ಮೈಕ್ ಮೂಲಕ ಪ್ರಚುರಪಡಿಸಲಾಗುವುದು ಬಳಿಕ ಚುನಾವಣಾ ವೀಕ್ಷಕರ ಅನುಮೋದನೆ ಪಡೆದ ಬಳಿಕ ಮೇಲ್ ಮೂಲಕ ಫಲಿತಾಂಶದ ಮಾಹಿತಿ ನೀಡಲಾಗುವುದು ಎಂದರು.

ಮತ ಎಣಿಕಾ ಕೊಠಡಿ ಸಂಖ್ಯೆ 239 ರಲ್ಲಿ ನಡೆಯಲಿರುವ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 263 ಮತಗಟ್ಟೆಗಳಿದ್ದು ಒಟ್ಟು 19 ಸುತ್ತುಗಳ ಮತಎಣಿಕೆ ನಡೆಯಲಿದೆ, ಕೊಠಡಿ ಸಂಖ್ಯೆ 242 ರಲ್ಲಿ ನಡೆಯಲಿರುವ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 267 ಮತಗಟ್ಟೆಗಳಿದ್ದು ಒಟ್ಟು 20 ಸುತ್ತುಗಳ ಮತಎಣಿಕೆ ನಡೆಯಲಿದೆ, ಕೊಠಡಿ ಸಂಖ್ಯೆ 205 ರಲ್ಲಿ ನಡೆಯಲಿರುವ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 270 ಮತಗಟ್ಟೆಗಳಿದ್ದು ಒಟ್ಟು 20 ಸುತ್ತುಗಳ ಮತಎಣಿಕೆ ನಡೆಯಲಿದೆ.

ಮತ ಎಣಿಕಾ ಕೊಠಡಿ ಸಂಖ್ಯೆ 221 ರಲ್ಲಿ ನಡೆಯಲಿರುವ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 275 ಮತಗಟ್ಟೆಗಳಿದ್ದು ಒಟ್ಟು 20 ಸುತ್ತುಗಳ ಮತಎಣಿಕೆ ನಡೆಯಲಿದೆ, ಕೊಠಡಿ ಸಂಖ್ಯೆ 228 ರಲ್ಲಿ ನಡೆಯಲಿರುವ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 325 ಮತಗಟ್ಟೆಗಳಿದ್ದು ಒಟ್ಟು 24 ಸುತ್ತುಗಳ ಮತಎಣಿಕೆ ನಡೆಯಲಿದೆ, ಕೊಠಡಿ ಸಂಖ್ಯೆ 252 ರಲ್ಲಿ ನಡೆಯಲಿರುವ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 283 ಮತಗಟ್ಟೆಗಳಿದ್ದು ಒಟ್ಟು 21 ಸುತ್ತುಗಳ ಮತಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕೊಠಡಿ ಸಂಖ್ಯೆ 230 ರಲ್ಲಿ ನಡೆಯಲಿರುವ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 285 ಮತಗಟ್ಟೆಗಳಿದ್ದು ಒಟ್ಟು 21 ಸುತ್ತುಗಳ ಮತಎಣಿಕೆ ನಡೆಯಲಿದೆ, ಕೊಠಡಿ ಸಂಖ್ಯೆ 232 ರಲ್ಲಿ ನಡೆಯಲಿರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 253 ಮತಗಟ್ಟೆಗಳಿದ್ದು ಒಟ್ಟು 19 ಸುತ್ತುಗಳ ಮತಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮತ ಎಣಿಕಾ ಕೆಂದ್ರಕ್ಕೆ ಕಡ್ಡಾಯವಾಗಿ ಮೊಬೈಲ್, ನೀರಿನ ಬಾಟಲ್, ಬೆಂಕಿ ಪೊಟ್ಟಣ, ಲೈಟರ್. ಧೂಮಪಾನ. ಹರಿತವಾದ ಆಯುಧಗಳನ್ನು ನಿಷೇಧಿಸಲಾಗಿದೆ. ಜೊತೆಗೆ ಮತಯಂತ್ರಗಳನ್ನು ಭೌತಿಕವಾಗಿ ಮುಟ್ಟಲು ಏಜೆಂಟರುಗಳಿಗೆ ಅವಕಾಶ ಇರುವುದಿಲ್ಲ. ಜೊತೆಗೆ ಚುನಾವಣಾ ಏಜೆಂಟರುಗಳಿಗೆ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ಬಣ್ಣದ ಗುರುತಿನ ಚೀಟಿಗಳನ್ನು ಕೌಂಟಿಗ್ ಏಜೆಂಟರುಗಳಿಗೆ ನೀಡಲಾಗುವುದು ಎಂದರು.

ಮತ ಎಣಿಕೆ ಸುತ್ತ ಹಾಗೂ ಒಳಗೆ ಮತ್ತು ಮತ ಎಣಿಕೆ ಪ್ರತೀ ಟೇಬಲ್ ಗಳಲ್ಲಿ ಪ್ರತೀಕವಾಗಿ ಸಿಸಿ ಕ್ಯಾಮರಾ ಅಳವಡಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು, ಮತ ಎಣಿಕೆ ಮುಕ್ತಾಯ ಅದ ಬಳಿಕ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿ ಪ್ಯಾಟ್ ಸ್ಲಿಪ್ ಗಳನ್ನು ರ್ಯಾಂಡಮ್ ಆಗಿ ಎಣಿಕೆ ಮಾಡಲಾಗುವುದು ಎಂದರು.

ಸುದ್ದಿಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ, ಎಸ್ಪಿ ಮೊಹಮ್ಮದ್ ಸುಜಿತ ಇದ್ದರು.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಿಂಹ ಘರ್ಜನೆ ಮಾಡುತ್ತಿರುವ ನೂತನ ಡಿ.ಸಿ.ಪಿ.ಕುಶಾಲ್ ಚೌಕ್ಸೆ

ಜೂನ್ 2ರಿಂದ ಜೂನ್ 5ರವರೆಗೆ ಕೃ.ವಿ.ವಿ ಮತ ಎಣಿಕೆ ಕೇಂದ್ರದ ಸುತ್ತ ಪ್ರತಿಬಂಧಕಾಜ್ಞೆ ಜಾರಿ

ಎಲ್ಲರೆದುರು ನಟಿಯನ್ನು ತಳ್ಳಿದ ನಟ ಬಾಲಯ್ಯ. ವೀಡಿಯೋ ವೈರಲ್

- Advertisement -

Latest Posts

Don't Miss