Dharwad News: ಧಾರವಾಡ: ಧಾರವಾಡ ಬಿಸಿಎಂ ಹಾಸ್ಟೆಲ್‌ನ ವಿದ್ಯಾರ್ಥಿಗಳು, ತಮ್ಮ ವಾರ್ಡ್ ವಿರುದ್ಧ ರೊಚ್ಚಿಗೆದ್ದು, ಪ್ರತಿಭಟನೆ ನಡೆಸಿದ್ದಾರೆ.
ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ಸ್ನಾತಕೋತ್ತರ ವಿದ್ಯಾರ್ಥಿ ನಿಲಯದಲ್ಲಿ ಸರಿಯಾಗಿ ಊಟ ಸಿಗುತ್ತಿಲ್ಲ. ಕಳಪೆ ಊಟ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ವಾರ್ಡನ್ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ವಾರ್ಡನ್ ಪ್ರಸನ್ನ ಅಂಗಡಿ ಎಂಬುವರು ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಿದ್ದಾರೆ. ಅಲ್ಲದೇ ವಾರ್ಡನ್ ಮಾನಸಿಕ ಕಿರರುಕುಳ ನೀಡುತ್ತಿದ್ದಾರೆಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಹಾಾಸ್ಟೇಲ್‌ನಲ್ಲಿ ನೀಡುವ ಆಹಾರದಲ್ಲಿ ಯಾವುದೇ ಗುಣಮಟ್ಟವಿಲ್ಲ. ಸರಕಾರರದಿಂದ ಬರುವ ಯಾವ ಮೂಲ ಸೌಲಭ್ಯವನ್ನು ಕೂಡ ವಾರ್ಡನ್ ನೀಡುತ್ತಿಲ್ಲವೆಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ.
ವಾರ್ಡನ್ ವಿರುದ್ಧ ವಿದ್ಯಾರ್ಥಿಗಳು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ವಾರ್ಡನ್ ಕಳೆದ 15 ದಿನಗಳಿಂದ ಗೈರು ಹಾಜರ್ ಆಗಿದ್ದರು. ಸದ್ಯ ತಾಲೂಕಾ ಅಧಿಕಾರಿಗಳಿಂದ ವಾರ್ಡನ್ ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಆದರೂ ಕೂಡ ವಾರ್ಡನ್ ಕ್ಯಾರೆ ಎನ್ನದೇ, ರಜೆ ಮೇಲೆಯೇ ಇದ್ದಾರೆ. ಹೀಗಾಗಿ ವಾರ್ಡನ್ ಮತ್ತು ಹಾಸ್ಟೇಲ್ ಸಿಬ್ಬಂದಿಗಳನ್ನು ಬದಲಾವಣೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಭವಾನಿ ರೇವಣ್ಣಗೆ ಬಿಗ್ ಶಾಕ್: ನೀರಿಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಸಾಧ್ಯತೆ
Prajwal Pen drive case: ಪ್ರಜ್ವಲ್ ರೇವಣ್ಣ 6 ದಿನ ಎಸ್‌ಐಟಿ ಕಸ್ಟಡಿಗೆ

