Political News: ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್, ಈ ಹಿಂದೆ ಕರ್ನಾಟಕದಲ್ಲಿದ್ದ ಬಿಜೆಪಿ ಸರ್ಕಾರ ಇಡೀ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿತ್ತು. ಬಿಜೆಪಿಯವರು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಬಿಜೆಪಿ ಯವರು ಹೇಳಿದ್ದನ್ನೇ ನಾವು ಜಾಹಿರಾತು ನೀಡಿದ್ದೇವೆ. ಆದರೆ ಬಿಜೆಪಿಯವರು ಇದು ಸುಳ್ಳು ಜಾಹೀರಾತು ಎಂದು ಹೇಳಿ ನನ್ನ ಹಾಗೂ ಸಿಎಂ ಅವರು ಸೇರಿದಂತೆ ರಾಹುಲ್ ಗಾಂಧಿ ಅವರ ಮೇಲೂ ಖಾಸಗಿ ದೂರು ನೀಡಿದ್ದಾರೆ. ರಾಹುಲ್ ಗಾಂಧಿ ಅವರು ನ್ಯಾಯಾಲಯಕ್ಕೆ ಗೌರವ ಕೊಡುವವರಾಗಿದ್ದು, ಸದ್ಯದಲ್ಲೇ ಅವರು ನ್ಯಾಯಾಲಯದ ಮುಂದೆ ಹಾಜರಾಗಿ ಈ ಆರೋಪವನ್ನು ಎದುರಿಸಲಿದ್ದಾರೆ. ಬಿಜೆಪಿಯವರು ನಮ್ಮನ್ನು ರಾಜಕೀಯ ಮಾಡಲು ಆಹ್ವಾನಿಸುತ್ತಿದ್ದಾರೆ ನಾವು ಮಾಡಿ ತೋರಿಸುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.
ಯಾರು ಯಾರನ್ನೂ ರಕ್ಷಣೆ ಮಾಡುವುದಿಲ್ಲ, ಬಿಜೆಪಿಯವರು ಅವರ ರಾಜಕಾರಣ ಮಾಡುತ್ತಿದ್ದಾರೆ. ಹಾಗಂತ ಅವರನ್ನು ನಾನು ಪ್ರಶ್ನೆ ಮಾಡಲು ಹೋಗುವುದಿಲ್ಲ. ಬಿಜೆಪಿ ಸರ್ಕಾರದಲ್ಲೂ ಇಂತಹ ಪ್ರಕರಣಗಳು ನಡೆದಿವೆ. ಬಸವರಾಜ್ ಬೊಮ್ಮಾಯಿ ಅವರು ಸೇರಿದಂತೆ ಎಲ್ಲರಿಗೂ ಈ ಬಗ್ಗೆ ಗೊತ್ತಿದೆ. ನಾವು ಇದರ ತನಿಖೆ ಮಾಡಿಸುತ್ತೇವೆ. ನಮ್ಮ ಸರ್ಕಾರ ಪಾರದರ್ಶಕವಾಗಿ ಕೆಲಸಮಾಡುತ್ತಿದೆ. ತಪ್ಪು ಮಾಡಿದ್ದರೆ ಯಾರನ್ನು ಉಳಿಸುವ ಪ್ರಶ್ನೆಯೇ ಇಲ್ಲ. ಎಲ್ಲಾ ರೀತಿಯ ತನಿಖೆಗಳನ್ನು ನಾವು ಮಾಡುತ್ತೇವೆ. ಇದಕ್ಕೆ ಸರಿಯಾದ ದಾಖಲೆ ಇದ್ದರೆ ನಾವು ಸಹಕರಿಸುತ್ತೇವೆ. ನಮ್ಮ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಇದಕ್ಕೆ ಎರಡು, ಮೂರು ದಿನ ಕಾಲಾವಕಾಶ ಬೇಕು. ಸತ್ಯ ಏನು ಎಂಬುದನ್ನು ನಾವು ನಿರೂಪಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದೆ.
ಈ ಹಿಂದೆ ಕರ್ನಾಟಕದಲ್ಲಿದ್ದ ಬಿಜೆಪಿ ಸರ್ಕಾರ ಇಡೀ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿತ್ತು. ಬಿಜೆಪಿಯವರು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಬಿಜೆಪಿ ಯವರು ಹೇಳಿದ್ದನ್ನೇ ನಾವು ಜಾಹಿರಾತು ನೀಡಿದ್ದೇವೆ. ಆದರೆ ಬಿಜೆಪಿಯವರು ಇದು ಸುಳ್ಳು ಜಾಹೀರಾತು ಎಂದು ಹೇಳಿ… pic.twitter.com/DqRkMRfXmp
— DK Shivakumar (@DKShivakumar) June 1, 2024
ಭವಾನಿ ರೇವಣ್ಣಗೆ ಬಿಗ್ ಶಾಕ್: ನೀರಿಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಸಾಧ್ಯತೆ
Prajwal Pen drive case: ಪ್ರಜ್ವಲ್ ರೇವಣ್ಣ 6 ದಿನ ಎಸ್‌ಐಟಿ ಕಸ್ಟಡಿಗೆ