Dharwad News: ಧಾರವಾಡ: ಧಾರವಾಡ ಲೋಕಸಭಾ ಚುನಾವಣೆ ಮತ ಎಣಿಕೆ ಹಿನ್ನೆಲೆ, ಮತ ಎಣಿಕೆ ಕುರಿತಾಗಿ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಧಾರವಾಡ ಕೃಷಿ ಕೃಷಿ ವಿವಿಯಲ್ಲಿ ಮತ ಎಣಿಕೆ ನಡೆಯಲಿದೆ. ಮತದಾನದ ಬಳಿಕ ಕೃಷಿ ವಿವಿ ಸ್ಟ್ರಾಂಗ್ ರೂಮ್‌ನಲ್ಲಿ ಮತ ಯಂತ್ರಗಳನ್ನಿಡಲಾಗಿದೆ. ಜೂನ್ 4 ರಂದು ನಡೆಯುವ ಮತ ಎಣಿಕೆಗೆ ತಯಾರಿ ಮಾಡಿದ್ದೇವೆ. 2019 ಕ್ಕಿಂತ ಈ ಸಲ ಶೇ. 4 ರಷ್ಟು ಮತದಾನ ಹೆಚ್ಚಾಗಿದೆ. 2019ರಲ್ಲಿ ಶೇ. 70.12 ರಷ್ಟು ಮತದಾನವಾಗಿತ್ತು. ಈ ಸಲ ಶೇ. 74.37 ಮತದಾನವಾಗಿದೆ. ಒಟ್ಟು 14 ಸ್ಟ್ರಾಂಗ್ ರೂಮ್ ಇವೆ.
8 ವಿಧಾನಸಭಾ ಕ್ಷೇತ್ರದ ಮತ ಎಣಿಕೆ ತಲಾ 14 ಟೇಬಲ್ ಗಳಲ್ಲಿ ನಡೆಯಲಿದೆ. ಒಟ್ಟು 112 ಟೇಬಲ್ ಗಳಲ್ಲಿ ಮತ ಎಣಿಕೆ ಆಗಲಿದೆ. ಒಟ್ಟು 20 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಅಂಚೆ ಮತ ಎಣಿಕೆ ಆರು ಟೇಬಲ್ ಗಳಲ್ಲಿ ನಡೆಯಲಿದೆ. ಮತ ಎಣಿಕೆಗೆ 432 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತದ ಭದ್ರತೆ ಒದಗಿಸಲಾಗಿದೆ. ಮತ ಎಣಿಕೆಗೆ 650 ಭದ್ರತಾ ಸಿಬ್ಬಂದಿ ನೇಮಿಸಿದ್ದೇವೆ. ಇದರಲ್ಲಿ CRPF, KSRP, CAR, ಹೋಮ್ ಗಾರ್ಡ್ಸ್ ಮತ್ತು ಸ್ಥಳೀಯ ಪೊಲೀಸರು ಸೇರಿದ್ದಾರೆ ಎಂದು ದಿವ್ಯಪ್ರಭು ಹೇಳಿದ್ದಾರೆ.
ಭವಾನಿ ರೇವಣ್ಣಗೆ ಬಿಗ್ ಶಾಕ್: ನೀರಿಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಸಾಧ್ಯತೆ
Prajwal Pen drive case: ಪ್ರಜ್ವಲ್ ರೇವಣ್ಣ 6 ದಿನ ಎಸ್‌ಐಟಿ ಕಸ್ಟಡಿಗೆ




