Hubli News: ಹುಬ್ಬಳ್ಳಿ: ನೇಹಾ ಹಾಗೂ ಅಂಜಲಿ ಹತ್ಯೆ ದೇಶದಲ್ಲಿ ಸದ್ದು ಮಾಡಿದ ಪ್ರಕರಣಗಳು ಅದರಂತೆ ನಗರದಲ್ಲಿ ಶಿಕ್ಷಕಿಯೋರ್ವಳಿಗೆ ಅದೇ ಮಾದರಿಯಲ್ಲಿ ಹತ್ಯೆ ಹತ್ಯೆ ಮಾಡುವುದಾಗಿ ಬೆದರಿಕೆ ಪತ್ರ ಬಂದಿದ್ದು, ಈ ಕುರಿತು ಕೇಶ್ವಾಪೂರ ಪೊಲೀಸ್ ಠಾಣೆಗೆ ಶಿಕ್ಷಕಿ ದೂರು ದಾಖಲಿಸಿದ್ದಾರೆ.
ಹುಬ್ಬಳ್ಳಿಯ ವೆಂಕಟೇಶ್ವರ ಕಾಲೋನಿಯಲ್ಲಿರುವ ರೋಟರಿ ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ದೀಪಾ ಅಡವಿಮಠ ಎಂಬುವವರಿಗೆ ದೀಪಾ, ನಿನ್ನ ಹತ್ಯೆ ನೇಹಾ ಹಾಗೂ ಅಂಜಲಿ ಹಾಗೇಯೇ ಕೆಲವೇ ದಿನ ಎಂದು ಬೆದರಿಕೆ ನೀಡಲಾಗಿದೆ.
ಅನಾಮಧೇಯ ಪತ್ರಕಂಡು ಆತಂಕಕ್ಕೆ ಒಳಗಾಗಿರುವ ಶಿಕ್ಷಕಿ ಕೂಡಲೇ ಕೇಶ್ವಾಪೂರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೇ 28 ರಂದು ಬೆ. ಪೋಸ್ಟ್ ಮ್ಯಾನ್ ಬಂದು ಶಿಕ್ಷಕಿಗೆ ಪತ್ರ ತಲುಪಿದೆ ಎನ್ನಲಾಗಿದ್ದು, ಕಿಡಿಗೇಡಿ ಕೃತ್ಯವಾ ಅಥವಾ ಉದ್ದೇಶಪೂರ್ವಕವಾಗಿ ಬರೆದಿರುವ ಪತ್ರವಾ ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಿಜೆಪಿಯವರು ನಮ್ಮನ್ನು ರಾಜಕೀಯ ಮಾಡಲು ಆಹ್ವಾನಿಸುತ್ತಿದ್ದಾರೆ ನಾವು ಮಾಡಿ ತೋರಿಸುತ್ತೇವೆ: ಡಿಕೆಶಿ
ಮಾನ್ಯ ಪ್ರಧಾನಿಯವರೇ, ಸಂಘದಲ್ಲಿ ಕಲಿತ ಪಾಠ ಬಿಟ್ಟು ವಾಸ್ತವಕ್ಕೆ ಕಣ್ತೆರೆಯಿರಿ: ಸಿಎಂ ಸಿದ್ದರಾಮಯ್ಯ

