Wednesday, November 19, 2025

Latest Posts

ಇನ್ನಾದರೂ ತನಗೆ ಅಪಚಾರವೆಸಗಿದ ಉಪ ಮುಖ್ಯಮಂತ್ರಿಯನ್ನು ಶ್ರೀ ರಾಜ ರಾಜೇಶ್ವರ ದೇವರು ಕ್ಷಮಿಸಲಿ: HDK

- Advertisement -

Political News: ಕೆಲ ದಿನಗಳ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಮೇಲೆ ವಾಮಾಚಾರ ಮಾಡಲಾಗಿದೆ. ಕೇರಳದ ದೇವಸ್ಥಾನದಲ್ಲಿ ಈ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಆದರೆ ಕೇರಳ ಸರ್ಕಾರ, ಬಲಿ ಕೊಟ್ಟು ವಾಮಾಚಾರ ಮಾಡಡಿದ ಯಾವುದೇ ಘಟನೆ ಕೇರಳದಲ್ಲಿ ನಡೆದಿಲ್ಲವೆಂದು ಸ್ಪಷ್ಟನೆ ನೀಡಿತ್ತು. ಹೀಗಾಗಿ ಉಪ ಮುಖ್ಯಮಂತ್ರಿಗಳು ಸುಮ್ಮ ಸುಮ್ಮನೇ ಕೇರಳದ ಪವಿತ್ರ ದೇವಸ್ಥಾನದ ಮೇಲೆ ಇಂಥ ಆರೋಪ ಮಾಡಿದ್ದಾರೆಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಅವರು ಮಾಡಿದ ಟ್ವೀಟ್ ಇಂತಿದೆ.

•||ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ||• ದಾಸಶ್ರೇಷ್ಠರಾದ ಶ್ರೀ ಪುರಂದರ ದಾಸರು ರಚಿಸಿರುವ ಈ ಪದ ಇಂದಿಗೂ ಎಂದಿಗೂ ಎಂದೆಂದಿಗೂ ಪ್ರಸ್ತುತ. ಅವರವರ ನಾಲಿಗೆ ಅವರವರ ಗುಣ ಹೇಳುತ್ತದೆ. ಅದರಂತೆ ನಮ್ಮ ರಾಜ್ಯದ ಸನ್ಮಾನ್ಯ ಉಪ ಮುಖ್ಯಮಂತ್ರಿ ಮಹಾಶಯರು ತಮ್ಮ ಹುದ್ದೆಯ ಘನತೆ, ಗೌರವ ಮರೆತು ಕೇರಳದ ಪರಮ ಪವಿತ್ರ ಪುಣ್ಯಕ್ಷೇತ್ರ ಶ್ರೀ ರಾಜ ರಾಜೇಶ್ವರ ದೇಗುಲದ ಪಾವಿತ್ರ್ಯತೆಗೆ ಅಪಚಾರ ಎಸಗಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಆ ರಾಜ ರಾಜೇಶ್ವರನೇ ಈ ವ್ಯಕ್ತಿಗೆ ಸದ್ಬುದ್ಧಿ ಕೊಡಲಿ.

ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ ಉರಿವ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಾಲೆಯಾಡುವಂತೆ ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದರೆ ಸುಣ್ಣದಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ! • • • ಶರಣ ನಿಂದನೆ, ದೈವ ನಿಂದನೆ ತರವಲ್ಲ ಎನ್ನುವುದು ನನ್ನ ಅಚಲ ನಂಬಿಕೆ. ಇನ್ನಾದರೂ ತನಗೆ ಅಪಚಾರವೆಸಗಿದ ಉಪ ಮುಖ್ಯಮಂತ್ರಿಯನ್ನು ಶ್ರೀ ರಾಜ ರಾಜೇಶ್ವರ ದೇವರು ಕ್ಷಮಿಸಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಲೋಕಸಭಾ ಮತ ಎಣಿಕೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ದಿವ್ಯಪ್ರಭು

ಮೂರು ಕ್ಷೇತ್ರ ಗೆಲ್ತಿವಿ. ನೀವೆಲ್ಲಾ ಕೋ ಆಪರೇಟ್ ಮಾಡಿದ್ದೀರಿ ಸಂತೋಷ: ಹೆಚ್.ಡಿ.ರೇವಣ್ಣ

ವಿನೋದ್ ಅಸೂಟಿ ಗೆಲ್ಲೋದು ಪಕ್ಕಾ: ಕವಡೆ ಶಾಸ್ತ್ರ ಕೇಳಿದ ಕೈ ಅಭ್ಯರ್ಥಿ ಅಭಿಮಾನಿ

- Advertisement -

Latest Posts

Don't Miss