Wednesday, November 19, 2025

Latest Posts

ಭಾರತದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ: ಪ್ರಧಾನಿಗೆ ಅಭಿನಂದಿಸಿದ ಸುಮಲತಾ ಅಂಬರೀಷ್

- Advertisement -
Political News: ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಲು ಹೊರಟಿದ್ದು, ಮಾಜಿ ಸಂಸದೆ ಸುಮಲತಾ ಅಂಬರೀಷ್, ಶುಭ ಕೋರಿದ್ದಾರೆ. ಅವರ ಪೋಸ್ಟ್ ಇಂತಿದೆ.
ಭಾರತದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ! 10 ವರ್ಷಗಳ ಐತಿಹಾಸಿಕ ಆಡಳಿತ, ಅಭಿವೃದ್ಧಿಯ ದಾಖಲೆಯೊಂದಿಗೆ ಭಾರತೀಯರು ಮತ್ತೊಮ್ಮೆ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಬಹುದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿ ಸತತವಾಗಿ 3ನೇ ಬಾರಿ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾಗಲಿದ್ದಾರೆ.
ಆದರಣೀಯ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ, ನೀವು ಪ್ರತಿ ಭಾರತೀಯ ಹೃದಯಕ್ಕೆ ಐಕ್ಯತೆಯ ಮತ್ತು ಹೆಮ್ಮೆಯ ಸಂಕೇತವಾಗಿದ್ದೀರಿ. ನಮ್ಮ ದೇಶ ಮತ್ತು ಜನತೆಯು ನಿಮ್ಮ ಮೇಲೆ ಇಟ್ಟಿರುವ ಅಚಲವಾದ ಬದ್ಧತೆ ನಿಮ್ಮ ಅಭಿವೃದ್ಧಿ ಕಾರ್ಯಗಳ ಪ್ರತಿಬಿಂಬವಾಗಿದೆ. ಫಲಿತಾಂಶ ಅತ್ಯುತ್ತಮವಾಗಿಲ್ಲದಿದ್ದರೂ, ಇದು ಕಾರ್ಯಕರ್ತರು ಹಾಗೂ ಮುಖಂಡರ ಮತ್ತಷ್ಟು ಶ್ರಮ ಹಾಗೂ ಅವಲೋಕನಕ್ಕೆ ನಾಂದಿಯಾಗಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ.
ನೀವು ಅನನ್ಯವಾದ ಸ್ವಾರ್ಥವಿಲ್ಲದ ತ್ಯಾಗ, ಸಾಮಾಜಿಕ ಜೀವನ ಮತ್ತು ನಿಷ್ಠೆಗೆ ಮಾದರಿಯಾಗಿದ್ದೀರಿ. ಭಾರತವನ್ನು ಅಭಿವೃದ್ಧಿಯ ಹೊಸ ದಿಕ್ಕಿನತ್ತ ಸಾಗಿಸಲು ನಿಮ್ಮ ನಾಯಕತ್ವದ ಅವಶ್ಯಕತೆ ಸದಾ ನಮಗಿದೆ.
ನಿಮ್ಮ ದೂರದರ್ಶಿ ಯೋಜನೆಗಳು ಈ ಮೂರನೇ ಅವಧಿಯಲ್ಲೂ ಮುಂದುವರಿಯಲಿ.
140 ಕೋಟಿ ಭಾರತೀಯರು ಮತ್ತು ಪ್ರಪಂಚದಾದ್ಯಂತ ಪ್ರತಿ ಭಾರತೀಯರ ಆಕಾಂಕ್ಷೆಗಳ ಸಾಕಾರಕ್ಕಾಗಿ ನೀವು ಮತ್ತೆ ಪ್ರಧಾನಮಂತ್ರಿ ಆಗಿ ಆಯ್ಕೆಯಾಗಿರುವುದಕ್ಕೆ ಹಾರ್ದಿಕ ಅಭಿನಂದನೆಗಳು. ನಿಮ್ಮ ನಾಯಕತ್ವವು ನಿರಂತರವಾಗಿ ರಾಷ್ಟ್ರಹಿತಕ್ಕಾಗಿ ದುಡಿಯಲು ಪ್ರೇರೇಪಿಸುತ್ತದೆ. ನೀವು ನಮ್ಮ ಪ್ರಧಾನಿ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ನಿಜವಾದ ನಾಯಕ ಹೇಗಿರಬೇಕು ಎಂಬುದನ್ನು ಪ್ರಪಂಚಕ್ಕೆ ಸಾಬೀತುಪಡಿಸಿದಕ್ಕೆ ಮತ್ತೊಮ್ಮೆ ಅಭಿನಂದನೆಗಳು. ಪ್ರಧಾನಿಯಾಗಿ ಐತಿಹಾಸಿಕ ತೃತೀಯ ಅವಧಿಗೆ ನಿಮಗೆ ಶುಭ ಹಾರೈಕೆಗಳು ಎಂದು ಸುಮಲತಾ ವಿಶ್ ಮಾಡಿದ್ದಾರೆ.

ತವರಲ್ಲೇ ಅಣ್ಣಾಸಾಹೇಬ್ ಜೊಲ್ಲೆಗೆ ಮುಖಭಂಗ: ಪ್ರಿಯಾಂಕಾ ಗೆಲುವಿಗೆ ಕಾಂಗ್ರೆಸ್ಸಿಗರ ಸಂಭ್ರಮ

ಈ ಗೆಲುವನ್ನು ದೇವೇಗೌಡರು ಹಾಗೂ ಪ್ರಧಾನಿ ಮೋದಿಗೆ ಅರ್ಪಿಸುತ್ತೇನೆ: ವಿ.ಸೋಮಣ್ಣ

ನನ್ನ ಗೆಲುವು ಮತದಾರ ಪ್ರಭುಗಳಿಗೆ ಸಲ್ಲಬೇಕು: ಪ್ರಹ್ಲಾದ ಜೋಶಿ

- Advertisement -

Latest Posts

Don't Miss