Political News: ಬಹುಮತ ಬರದಿದ್ದರೂ, ಮೈತ್ರಿ ಅಭ್ಯರ್ಥಿಗಳ ಸಹಾಯದಿಂದ ನರೇಂದ್ರ ಮೋದಿ ಮೂರನೇಯ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಜೂನ್ 9ರಂದು ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಮೋದಿ 8ನೇ ತಾರೀಕು 8 ಗಂಟೆಗೆ ಪ್ರಮಾಣವಚನ ಸ್ವೀಕರಿಸುತ್ತಾರೆಂದು ಹೇಳಲಾಗಿತ್ತು. ಆದರೆ, ದಿನಾಂಕ ಬದಲಾಗಿದ್ದು, ಭಾನುವಾರದ ದಿನ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ದಕ್ಷಿಣ ಏಷ್ಯಾದ ನಾಯಕರು ಮತ್ತು ಹಲವು ದೇಶದ ಪ್ರಧಾನಿಗಳು, ಅಧ್ಯಕ್ಷರನ್ನು ಆಮಂತ್ರಿಸಲಾಗಿದೆ.
2019ರ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ದು, ಅಂದು ಸುಲಭವಾಗಿ ಮೋದಿ ಪ್ರಧಾನಿಯಾಗಿದ್ದರು. ಆದರೆ ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ಸಿಗಲಿಲ್ಲ. ಹಾಗಾಗಿ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಬೆಂಬಲ ಸಿಕ್ಕ ಕಾರಣ ಬಿಜೆಪಿ ಈ ಬಾರಿ ಸರ್ಕಾರ ರಚಿಸುತ್ತಿದೆ.
ನಾನು ಕುಪ್ಪುಸ್ವಾಮಿ ಮಗ, ಕರುಣಾನಿಧಿ ಮಗ ಆಗಿದ್ದರೆ ಗೆಲ್ಲುತ್ತಿದ್ದೆ: ಸೋತರೆಂದು ಟೀಕಿಸಿದವರಿಗೆ ಅಣ್ಣಾಮಲೈ ತಿರುಗೇಟು

