ಆಯತಪ್ಪಿ ಬೀಳುತ್ತಿದ್ದ ಪ್ರಯಾಣಿಕನ ಪ್ರಾಣ ಉಳಿಸಿದ ಕಂಡಕ್ಟರ್: ವೀಡಿಯೋ ವೈರಲ್‌

Kerala News: ಕೇರಳದಲ್ಲಿ ಚಲಿಸುತ್ತಿರುವ ಬಸ್‌ನಿಂದ ಓರ್ವ ಪ್ರಯಾಣಿಕ ಆಯತಪ್ಪಿ ಬೀಳುವಂತಾಗಿದ್ದು, ಅವರನ್ನು ಕಂಡಕ್ಟರ್‌ ಹೀರೋನಂತೆ ಕೂಲ್ ಆಗಿ ರಕ್ಷಿಸಿದ್ದಾರೆ. ಈ ದೃಶ್ಯ ಬಸ್‌ನಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಕೇರಳದಲ್ಲಿ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ಬಸ್‌ನಲ್ಲಿ ಓರ್ವ ಪ್ರಯಾಣಿಕ ಬಾಗಿಲ ಬಳಿಯೇ ನಿಂತಿರುತ್ತಾನೆ. ಡ್ರೈವರ್ ಸಡನ್ನಾಗಿ ಬ್ರೇಕ್ ಹಾಕಿದಾಗ, ಬಾಗಿಲು ಓಪೆನ್ ಆಗಿ, ಆ ಪ್ರಯಾಣಿಕ ಇನ್ನೇನು ಕೇಳಗೆ ಬೀಳಬೇಕು ಎನ್ನುವಷ್ಟರಲ್ಲಿ, ಅಲ್ಲೇ ಪಕ್ಕದಲ್ಲೇ ನಿಂತಿದ್ದ ಕಂಡಕ್ಟರ್ ಕೂಲ್ ಆಗಿ, ಆ ಪ್ರಯಾಣಿಕನ ಕೈ ಹಿಡಿದು ಒಳಗೆ ಕರೆದುಕೊಳ್ಳುತ್ತಾನೆ.

ಕಂಡಕ್ಟರ್ ಏನಾದರೂ ನಿರ್ಲಕ್ಷಿಸಿದ್ದರೆ, ಆ ವ್ಯಕ್ತಿಯ ಪ್ರಾಣಪಕ್ಷಿಯೇ ಹಾರಿಹೋಗುತ್ತಿತ್ತು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಗನ ಪಾಲಿಗೆ ಕಂಡಕ್ಟರ್ ದೇವರಾಗಿ ಬಂದಿದ್ದಾನೆ ಎಂದಿದ್ದಾರೆ. ಇಂಥ ಘಟನೆಗಳು ಪದೇ ಪದೇ ನಡೆದರೂ ಕೂಡ, ಜನ ಬಾಗಿಲ ಬಳಿ ನಿಂತಿಕೊಳ್ಳುವುದು ಬಿಡುವುದಿಲ್ಲ ಅನ್ನೋದೇ ವಿಪರ್ಯಾಸ.

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

ಅಯೋಧ್ಯೆ ಸದಾ ರಾಜನಿಗೆ ದ್ರೋಹವೇ ಆಗಿದೆ ಎಂದ ನಟ

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

About The Author