Sandalwood News: ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ನಟ ದರ್ಶನ್ ಆ್ಯಂಡ್ ಟೀಮ್ 2ನೇ ದಿನವನ್ನ ಸೆಲ್‌ನಲ್ಲಿ ಕಳೆದಿದ್ದಾರೆ. 2 ದಿನಗಳಿಂದ ಪೊಲೀಸರು ದರ್ಶನ್ ಮತ್ತು ತಂಡಕ್ಕೆ ಫುಲ್ ಡ್ರಿಲ್ ಮಾಡುತ್ತಿದ್ದಾರೆ. ಆದರೆ, ಆರೋಪಿಗಳನ್ನು ಬಂಧಿಸಿಟ್ಟಿರುವ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿ ಮುಚ್ಚಲಾಗಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸರು ಠಾಣೆಗೆ ಟೆಂಟ್ ಹಾಕಿದ್ದಾರೆ. ಇದರ ಬೆನ್ನಲ್ಲೇ ದಾಸ, ಪವಿತ್ರಾ ಮತ್ತು ಟೀಮ್ಗೆ ಪೊಲೀಸರು ರಾಜಾತಿಥ್ಯ ನೀಡುತ್ತಿದ್ದಾರಾ ಎನ್ನುವ ಅನುಮಾನ ಮೂಡಿದೆ.
ಆರೋಪಿಗಳನ್ನು ಮರೆ ಮಾಚಲು ಪೊಲೀಸರು ವಿಶೇಷ ಕಾಳಜಿ ವಹಿಸಿದ್ದರಂತೆ ಕಾಣುತ್ತಿದೆ. ಬಂಧನವಾದ ದಿನದಿಂದಲೂ ದರ್ಶನ್ ಸರಿಯಾಗಿ ಊಟ ಮಾಡದೇ ಎಣ್ಣೆ ಕೊಡಿ, ಸಿಗರೇಟು ಕೊಡಿ ಎಂದಷ್ಟೇ ಕೇಳುತ್ತಿದ್ದಾರೆ ಎಂಬುದಾಗಿಯೂ ವರದಿಯಾಗಿತ್ತು. ಮೈ ನಡುಕ ಉಂಟಾಗಿದೆ. ಸಿಗರೇಟು ಬೇಕು, ಕುಡಿಯಲು ಎಣ್ಣೆ ಬೇಕು ಎಂದು ಅವರು ಡಿಮ್ಯಾಂಡ್ ಮಾಡುತ್ತಿದ್ದಾರೆ. ತೆರೆದ ಪೊಲೀಸ್ ಠಾಣೆಯಲ್ಲಿ ಅವರಿಗೆ ಇಂಥ ‘ಅಗತ್ಯ’ ವಸ್ತುಗಳನ್ನು ಕೊಟ್ಟರೆ ಸಾರ್ವಜನಿಕರಿಗೆ ಮತ್ತು ಮಾಧ್ಯಮದವರಿಗೆ ಗೊತ್ತಾದರೆ ಸಮಸ್ಯೆಯಾಗುತ್ತದೆ ಎಂದು ಪೊಲೀಸರು ಟೆಂಟ್ನ ಐಡಿಯಾ ಮಾಡಿದ್ದಾರೆ.
ಮಾಧ್ಯಮಗಳಿಗೆ ದರ್ಶನ್ ಸೇರಿ ಇತರೇ ಆರೋಪಿಗಳು ಕಾಣಿಸದಂತೆ ಪೊಲೀಸ್ ಠಾಣೆಯ ಸುತ್ತಲು ಶಾಮಿಯಾನ ಅಳಡಿಸಿದ್ದಾರೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ಕಾಂಪೌಂಡ್ ಸುತ್ತಲು ಪೊಲೀಸರು ಪರದೆ ಕಟ್ಟಿಸಿದ್ದಾರೆ. ಹೊರಗಡೆಯಿಂದ ಯಾವುದೇ ಸಣ್ಣ ದೃಶ್ಯಾವಳಿಯೂ ಸಿಗದಂತೆ ಪೊಲೀಸರು ಶಾಮಿಯಾನ ಹಾಗೂ ಪರದೆ ಹಾಕಿಸಿದ್ದಾರೆ. ಅಲ್ಲದೇ, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಬಳಿ 144 ಸೆಕ್ಷನ್ ಜಾರಿ ಮಾಡಿ ಪೊಲೀಸ್ ಕಮೀಷನರ್ ದಯಾನಂದ ಆದೇಶ ಹೊರಡಿಸಿದ್ದಾರೆ. ಠಾಣೆ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಜೂನ್ 13 ರಿಂದ ಜೂನ್ 17 ವರೆಗೆ ಜಾರಿ ವರೆಗೂ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಬಂಧನ ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸೇವೆಗೆ ಪೊಲೀಸ್ ಠಾಣೆಯಲ್ಲಿ ಅಡಚಣೆಯಾಗಿದೆ. ಕೊಲೆ ಆರೋಪಿಗಳನ್ನ ಠಾಣೆಯಲ್ಲಿಟ್ಟಿರುವ ಕಾರಣ ಯಾವ ಸಾರ್ವಜನಿಕರಿಗೂ ಪೊಲೀಸ್ ಠಾಣೆಗೆ ಪ್ರವೇಶವಿಲ್ಲ. ಸೆಲೆಬ್ರಿಟಿ ಆರೋಪಿಗಳನ್ನು ರಕ್ಷಿಸಲು ಪೊಲೀಸ್ ಠಾಣೆ ಒಳಗೆ ಸಾರ್ವಜನಿಕರಿಗೆ ನಿರ್ಬಂಧ ಹಾಕಲಾಗಿದೆ. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು, ದರ್ಶನ್ ಕೇಸ್ ಹೊರಗೆ ಬಂದ ತಕ್ಷಣ, ಹೊರಗೆ ತಂದು ಹಿಂದೆ ಯಾರೆಲ್ಲಾ ಇದ್ದಾರೆ ಅವರ ಬಂಧನ ಮಾಡಲಾಗಿದೆ. ಕುಟುಂಬಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ ಸಂತೋಷ. ಆದರೆ ಸ್ಟೇಷನ್ ಬಳಿ 144 ಹಾಕೋದು, ಶಾಮಿಯಾನ ಹಾಕೋದು, ಮಾಧ್ಯಮದವರಿಗೆ ನಿರ್ಬಂಧ ಹೇರೋದು ಸರಿಯಲ್ಲ. ಏನಾದ್ರು ತೊಂದರೆ ಆದರೆ ದೂರು ಕೊಡೋಕೆ ಅಲ್ಲಿಗೆ ಹೋಗಬೇಕು. ಇದರಲ್ಲಿ ಸತ್ಯಾಸತ್ಯತೆ ಹೊರಗೆ ಬರಬೇಕು. ಮುಚ್ಚಿಡೋ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.
ಇನ್ನೂ ಪ್ರಕರಣದ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ. ಕೇಸ್ ಪ್ರಾರಂಭದಿಂದ ಕಾಮಾಕ್ಷಿಪಾಳ್ಯದ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರು ತನಿಖಾಧಿಕಾರಿ ಆಗಿದ್ದರು. ಆದರೆ ಗಿರೀಶ್ ನಾಯ್ಕ್ ಅವರ ಬದಲಿಗೆ ಇಂದಿನಿಂದ ಎಸಿಪಿ ಚಂದನ್ ತನಿಖಾಧಿಕಾರಿಯಾಗಿ ನೇಮಕವಾಗಿದ್ದಾರೆ. ಇನ್ಮುಂದೆ ಎಸಿಪಿ ಚಂದನ್ ಅವರ ಸೂಚನೆಯಲ್ಲೇ ರೇಣುಕಾಸ್ವಾಮಿ ಕೊಲೆ ಕೇಸ್ ಮುಂದೆ ಸಾಗಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರದೋಶ್ ಎಂದು ಗುರುತಿಲಾಗಿದ್ದು, ಈತ ಕೂಡ ಸ್ಯಾಂಡಲ್ ವುಡ್ ನಟನಾಗಿದ್ದಾನೆ. ಕನ್ನಡದ ಕೆಲ ಚಿತ್ರಗಳಲ್ಲಿ ಅಭಿನಯ ಮಾಡಿರುವ ಈತ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ A14 ಆರೋಪಿಯಾಗಿದ್ದಾನೆ.
ಯಡಿಯೂರಪ್ಪ ಬಂಧನ? ಪೋಕೋ ಕೇಸ್‌ನಲ್ಲಿ ಬಿಎಸ್ವೈ ಬಂಧನಕ್ಕೆ ಸಿದ್ಧತೆ..!

