Political News: ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಇಂದು ಪ್ರತಿಭಟನೆ ನಡೆಸಿದ್ದು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನೀತಿಗೆಟ್ಟ ಸರ್ಕಾರಕ್ಕೆ ಧಿಕ್ಕಾರ. ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ. ಬೆಲೆ ಏರಿಕೆ ಮಾಡಿದ ಸರ್ಕಾರಕ್ಕೆ ಧಿಕ್ಕಾರ. ಕಾಂಗ್ರೆಸ್ ತೊಲಗಿಸಿ, ಕರ್ನಾಟಕ ಉಳಿಸಿ. ಜನವಿರೋಧಿ ಸರ್ಕಾರಕ್ಕೆ ಧಿಕ್ಕಾರ. ಬಿತ್ತನೆ ಬೀಜ ಬೆಲೆ ಏರಿಕೆ ಮಾಡಿದ ಸರ್ಕಾರಕ್ಕೆ ಧಿಕ್ಕಾರ. ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ವೆರೈಟಿ ವೆರೈಟಿಯಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಸಿಟಿ ರವಿ, ಆರ್. ಅಶೋಕ್, ಭೈರತಿ ಬಸವರಾಜ, ಸಿ. ಕೆ. ರಾಮಮೂರ್ತಿ, ಎನ್ಮ ರವಿಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಭೈರತಿ ಬಸವರಾಜ್, ಕಣ್ಣಿಗೆ ಮಣ್ಣೆರೆಚುವ ಗ್ಯಾರಂಟಿ ಯೋಜನೆ ಜಾರಿ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಕರೆಂಟ್ , ನೀರು ಸೇರಿದಂತೆ ಹಲವು ದರ ಏರಿಕೆ ಮಾಡಿದ್ದಾರೆ. ಬೆಲೆ ಏರಿಕೆ ವಿರುದ್ಧ ನಾವು ನಿರಂತರ ಪ್ರತಿಭಟನೆ ಮಾಡುತ್ತೇವೆ. ನಮ್ಮ ಕಾರ್ಯಕರ್ತರ ಮೇಲೆ ಅನಾವಶ್ಯಕವಾಗಿ ಕೇಸ್ ಹಾಕಲಾಗ್ತಿದೆ. ಬಿಬಿಎಂಪಿ ಚುನಾವಣೆಯಲ್ಲಿ ನಾವು ಮತ್ತೆ ಗದ್ದುಗೆ ಹಿಡಿಯುತ್ತೇವೆ. ನಾವು ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡುತ್ತೇವೆ. ಕೂಡಲೇ ಬೆಲೆ ಏರಿಕೆ ಇಳಿಸಬೇಕು. ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಕೈ ಜೋಡಿಸಿ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಜನ ಕುಡಿಯಲು ನೀರಿಲ್ಲದೆ ಕಂಗಾಲಾಗಿದ್ದಾರೆ. ಸರ್ಕಾರದ ಕಿವಿ ಹಿಂಡುವ ಕೆಲಸ ನಿರಂತರವಾಗಿ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಈ ವೇಳೆ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ 13 ತಿಂಗಳು ಹಿಂದೆ ಅಧಿಕಾರಕ್ಕೆ ಬಂದ್ರು. ನಾವು ಅಧಿಕಾರಕ್ಕೆ ಬಂದ್ರೆ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡ್ತಿವಿ ಅಂತಾ. ಮೂರು ಬಾರಿ ಬೆಲೆ ಏರಿಕೆ ಮಾಡಿದ್ದಾರೆ. ರಾಜ್ಯದ ಜನ್ರಾನ್ನಾ ಬಕ್ರಾ ಮಾಡಲು ಬಕರೀದ್ ಹಿಂದಿನ ದರ ಏರಿಕೆ ಮಾಡಿದ್ದಾರೆ. ಬಕ್ರೀದ್ ಹಬ್ಬದಲ್ಲಿ ಕುರಿ ಬಲಿ ಕೊಡುವ ಥರಾ ರಾಜ್ಯದ ಜನ್ರನ್ನಾ ಬಕ್ರಾ ಮಾಡ್ತಿದಾರೆ. ಸ್ಟಾಂಪ್, ವೆಹಿಕಲ್ ರಿಜಿಸ್ಟ್ಟೇಷನ್, ಇನ್ ಕಂ, ಡೆಥ್, ಬರ್ಥ್, ಆರ್. ಟಿ. ಸಿ ಬೆಲೆ ಏರಿಕೆ ಮಾಡಿದ್ದಾರೆ. ಹಾಲಿನ ದರ ಏರಿಕೆ ಮಾಡಿದ್ರು, ರೈತರ ಸಬ್ಸಿಡಿ ಕಡಿತ ಮಾಡಿದ್ರು. ಆಲ್ಕೋಹಾಲ್ ದರ ಏರಿಕೆ ಮಾಡಿದ್ರು. ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಪೆಟ್ರೋಲ್, ಡಿಸೇಲ್ ಹೆಚ್ಚಳ ಆದ್ರೆ ಎಲ್ಲಾ ಹೆಚ್ಚಳ ಆಗುತ್ತೆ ಅಂತಾ. ಅಧಿಕಾರಕ್ಕೆ ಬಂದ ಬಳಿಕ ಊಸುರುವಳ್ಳಿ ರೀತಿ ಬಣ್ಣ ಬದಲಾಯಿಸಿದ್ರೆ. ಊಸೂರುವಳ್ಳಿ ಸಿದ್ದರಾಮಯ್ಯ ಮಧ್ಯೆ ಸ್ಪರ್ಧೆ ಏರ್ಪಡಿಸಿದ್ರೆ ಗೆಲ್ಲೋದು ಸಿದ್ದರಾಮಯ್ಯ, ಕಾಂಗ್ರೆಸ್ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ನೀವು ಜಿಎಸ್ ಟಿ ಜೊತೆ ವೈಎಸ್ ಟಿ ತಂದ್ರಿ. ವೈಎಸ್ ಟಿ ಜೊತೆ ಡಿ.ಕೆ. ಟ್ಯಾಕ್ಸ್ ಕೂಡ ಇದೆ. ಈ ಸರ್ಕಾರಕ್ಕೆ ನೀರು ಕೊಡುವ ಯೋಗ್ಯತೆ ಇಲ್ಲಾ. ಕೆಆರ್ ಪುರಂ, ಬಿಟಿಎಂಲೇಔಟ್ , ಆರ್. ಆರ್ನಗರಕ್ಕೆ ನೀರು ಬರ್ತಿದ್ಯಾ..? ಬಂಢತನದಿಂದ ಸಮರ್ಥನೆ ಮಾಡಿಕೊಳ್ತಿದಾರೆ. ಇದು ನಾಲಿಗೇನಾ..? ಇದು ಯಕ್ಕಡಗಿಂತ ಕಡೆ ಅಂತಾ ಜನಾ ಹೇಳ್ತಿದಾರೆ. ನಾನು ಹೇಳ್ತಿಲ್ಲಾ, ಜನಾ ಹೇಳ್ತಿದಾರೆ. ಕಷ್ಟದಿಂದ ನರಳ್ತಾ ಇರುವ ಜನ್ರ ಬದುಕಿಗೆ ಬರೆ ಎಳಿತಿದೀರಾ ನೀವು. ತೆಲಂಗಾಣ, ಹಿಮಾಚಲ ಪ್ರದೇಶ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಇದೆ. ಮೂರುಕಡೆ ಅಧಿಕಾರ, ಮೂರುಕಡೆ ಮಾವು. ಸಿದ್ದರಾಮಯ್ಯ ಬಕ್ರೀದ್ ದಿನ ಟೋಪಿ ಹಾಕ್ತಾರೆ ಅಂದ್ಕೊಂಡಿದ್ವಿ. ಆದ್ರೆ ರಾಜ್ಯದ ಜನರಿಗೆ ಟೋಪಿ ಹಾಕ್ತಿದಾರೆ ಎಂದು ಸಿದ್ದರಾಮಯ್ಯ ವಿರುದ್ಧ ರವಿ ವಾಗ್ದಾಳಿ ನಡೆಸಿದ್ದಾರೆ.
ಓ ಸರ್ಕಾರ ತೂತು. ತೆರಿಗೆ ದುಡ್ಡು ಟಕಾಟಕ್ ಆಗಿ ಡೆಲ್ಲಿಗೆ ಹೋಗ್ತಾ ಇದೆ. ಟಕಾಟಕ್ ಆಗಿ ರಾಹುಲ್ಲಾಗೆ ಕಳಸ್ತಿದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಚುನಾವಣೆಗೆ ಖರ್ಚು ಮಾಡಿದೆ. ದಲಿತ ವರ್ಗಕ್ಕೆ ಕಾಂಗ್ರೆಸ್ ಮೋಸ ಮಾಡಿದೆ. ಈ ಸರ್ಕಾರವನ್ನು ಕ್ಷಮಿಸಬೇಕಾ? ನಮ್ಮ ಹೋರಾಟದ ಸಾಂಕೇತಿತ ಹೋರಾಟ ಮಾತ್ರವಲ್ಲ. ಬೆಲೆ ಇಳಿಸಬೇಕು, ಇಲ್ಲಾ ಅವ್ರೆ ಇಳಿಬೇಕು. ಇಳಿದೇ ಇದ್ರೆ ಹೇಂಗೆ ಇಳಿಸಬೇಕು ನಮ್ಗೆ ಗೊತ್ತಿದೆ. ರಾಜ್ಯದ ಜನರಿಗೆ ಗೊತ್ತಿದೆ. ಇದ್ದಷ್ಟು ದಿನ ನುಂಗುವ ಕೆಲ್ಸಾ ಮಾಡ್ತಿದಾರೆ. ನುಂಗಣ್ಣ, ನುಂಗಣ್ಣ ಕೆಲ್ಸಾ ಮಾಡ್ತಿದಾರೆ. ವಿಧಾನಸೌಧದ ಒಳಗೆ , ಹೊರಗೆ ಹೋರಾಟ ಮಾಡ್ತಿವಿ ಎಂದು ಸಿ.ಟಿ.ರವಿ ಹೇಳಿದ್ದಾರೆ.



