Tuesday, January 14, 2025

Latest Posts

ಜನರಿಗೆ ತೊಂದರೆ ಆಗುವ ರೀತಿ ಯಾವುದೇ ತೆರಿಗೆ ಹೆಚ್ಚಳ ಮಾಡಲ್ಲ: ಸಿಎಂ ಸಿದ್ದರಾಮಯ್ಯ

- Advertisement -

Political News: ಇಂದು ಬಿಜೆಪಿ ನಾಯಕರು, ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈಗ ನಮ್ಮ‌ ಸರ್ಕಾರಕ್ಕೆ ಪಾಪರ್ ಅಂತ ಹೇಳುತ್ತಿದೆ. ಪಾಪರ್ ಅಂದ್ರೆ ಅಶೋಕ್ ಗೆ ಏನ್ ಅಂತ ಗೊತ್ತಾ? ನಾವೇನು ಸಂಬಳ ನಿಲ್ಲಿಸಿದ್ದೀವಾ? ಬಡವರು, ರೈತರು ಬಗ್ಗೆ ‌ಬಿಜೆಪಿವರಿಗೆ ಕಾಳಜಿ‌ಇದ್ಯಾ? ಬಿಜೆಪಿ ‌ಅವರು ಇವರ ವಿರುದ್ದವಾಗಿದೆ. ನಾವು ಗ್ಯಾರಂಟಿ ಕೊಟ್ಟಿರೋದು ಎಲ್ಲಾ ಜಾತಿಯ‌ಬಡವರು ಹಾಗೂ ರೈತರಿಗೆ. ಬಸ್ ನಲ್ಲಿ‌ಓಡಾಡಿದ್ರೆ ಆರ್ಥಿಕ ವಾಗಿ ಶಕ್ತಿ ಬರುತ್ತೆ. ಎರಡು ಸಾವಿರ ಹಣ,‌ಫ್ರೀ‌ ಕರೆಂಟ್ ಕೊಟ್ಟರೆ ಸಹಾಯವಾಗ್ತಿದೆ. ಬಿಜೆಪಿ‌ಯವರು ಎಂಪಿ ಇದ್ದರೂ‌ ಕೂಡ ಯಾರೂ ಮಾತಾಡಿಲಿಲ್ಲ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಾವು ಮೂರು ರೂಪಾಯಿ ಏರಿಸಿದಮೇಲೆ ೧೦೨.೮೫ ಆಗಿದೆ. ಹೊಸೂರಿನಲ್ಲಿ ೧೦೨, ಕೇರಳದಲ್ಲಿ ೧೦೬, ಆಂದ್ರದಲ್ಲಿ ೧೦೯ ರೂಪಾಯಿ. ತೆಲಂಗಾಣದಲ್ಲಿ ೧೦೬ ಹಾಗೂ ಮಹಾರಾಷ್ಟ್ರದಲ್ಲಿ ೧೦೪ ರೂಪಾಯಿ ಪೆಟ್ರೋಲ್ ದರ ಇದೆ. ಆದ್ರೆ ಬಿಜೆಪಿ ಸರ್ಕಾರ ಇರೋ ರಾಜ್ಯದಲ್ಲಿ ಪೆಟ್ರೋಲ್ ದರ ಕಡಿಮೆ‌ ಇದೆ, ಯಾಕಂದ್ರೆ ಅಲ್ಲಿ ಟ್ರಾನ್ಸ್ ಪೋರ್ಟ್ ಖರ್ಚು ಇಲ್ಲ.

ಆದ್ರೆ ಇದೇ ರಾಜ್ಯದಲ್ಲಿ ಡಿಸೇಲ್ ಬೆಲೆ ಹೆಚ್ಚಾಗಿಯೇ ಇದೆ.ಹೀಗಾಗಿ ಪಕ್ಕದ ರಾಜ್ಯಕ್ಕೆ ಹೋಲಿಸಿದ್ರೆ ನಮ್ಮ‌ ರಾಜ್ಯದಲ್ಲಿ ‌ಕಡಿಮೆ ಇದೆ. ನಮ್ಮ ರಾಜ್ಯದಲ್ಲಿ ಆದಾಯ ಹೆಚ್ಚಿಗೆ ಮಾಡೋಕೆ ಇರೋದೇ ತೈಲ ದರ ಒಂದೇ.  ರಾಜಸ್ಥಾನದಲ್ಲಿ ೧೦೪, ಮಧ್ಯಪ್ರದೇಶದಲ್ಲಿ ೧೦೬ ರೂಪಾಯಿ ಪೆಟ್ರೋಲ್ ಇದೆ. ನಮ್ಮ‌ ರಾಜ್ಯಕ್ಕಿಂತ ಮೇಲಿರುವ ರಾಜ್ಯದಲ್ಲಿ ಡಿಸೇಲ್ ಬೆಲೆ ಹೆಚ್ಚಾಗಿದೆ. ಇವರಿಗೆ ‌ಕರ್ನಾಟಕಕ್ಕೆ ಅನ್ಯಾಯ ಆಗ್ತಿದ್ರೂ ಕೂಡ ಒಂದು ದಿನ‌ ಧ್ವನಿ ‌ಎತ್ತಲಿಲ್ಲ. ಬಡವರ ‌ಹೊಟ್ಟೆ ಮೇಲೆ ಕಲ್ಲು‌ ಹಾಕೋದೆ ಇವರ ಕೆಲಸ. ಸ್ವಲ್ಪ ‌ರಿಸೋರ್ಸ್ ಬಳಸಿ ಅಭಿವೃದ್ಧಿ ಮಾಡೋಕೆ‌ ಮುಂದಾಗ್ತಿದ್ದೇವೆ. ಹೀಗಾಗಿ ತೈಲ ದರ ಹೆಚ್ಚು ಮಾಡಿದ್ದೇವೆ ಎಂದು ಸಿಎಂ ಹೇಳಿದ್ದಾರೆ.

ಕೇಂದ್ರ ಸರ್ಕಾರ ಅನ್ಯಾಯ ‌ಮಾಡ್ತಿದೆ. ನಮ್ಮ ತೆರಿಗೆ ನಮ್ಮ ಹಕ್ಕು ಅನ್ನೋ ಹೋರಾಟದಲ್ಲಿ ಸಾಥ್ ಕೊಟ್ಟಿಲ್ಲ. ಇವರಿಗೆ ಈಶ್ಯೂ ಇರಲಿಲ್ಲ, ಹೀಗಾಗಿ ನಮ್ಮ ವಿರುದ್ದ ಹೋರಾಟ ಮಾಡ್ತಿದ್ದಾರೆ. ಅವರಿಗೆ ದೇಶದ ಎಕಾನಮಿ ಗೊತ್ತಿಲ್ಲ. ಕೇಂದ್ರದ ಮಂತ್ರಿಯಾಗಿ ದಂಗೆ ಏಳಿ ಎಂದು ಕುಮಾರಸ್ವಾಮಿ ‌ಹೇಳ್ತಾರೆ. ಈಗ ಮೈತ್ರಿ ಮಾಡಿಕೊಂಡಿದ್ದಾರೆ, ಅದಕ್ಕೂ ಮುನ್ನ ಮಾತಾಡಿದ್ರಾ? ಗ್ಯಾರಂಟಿ ಯೋಜನೆಗಳಿಗೆ ಎಷ್ಟು ದುಡ್ಡು‌ಖರ್ಚು ಆಗುತ್ತೆ‌ಗೊತ್ತಾ? ೬೦ ಸಾವಿರ ಕೋಟಿ ಹಣ ಗ್ಯಾರಂಟಿ ಗೆ ಬೇಕು. ಗ್ಯಾರಂಟಿ ಯೋಜನೆ ಯನ್ನ ಶ್ರೀಮಂತರಿಗೆ ಕೊಟ್ಟಿದ್ದೇವಾ? ರೈತರ ಸಾಲ ಮನ್ನಾ ಮಾಡಿ ಅಂದ್ರೆ ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಕ್ಪ್ರಹಾರ ನಡೆಸಿದ್ದಾರೆ.

ಬಿಜೆಪಿವರಿಗೆ ನೈತಿಕತೆ ಇಲ್ಲ, ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ. ಮೋದಿಯವರು ಬೆಲೆ ಜಾಸ್ತಿ ಮಾಡಿದ್ರು ಕಡಿಮೆ ಮಾಡಿ ಅಂತ ಮಾತಾಡಿಲ್ಲ. ಯಾವ ನೈತಿಕತೆ ಇದೆ ಬಿಜೆಪಿಗೆ. ನಮಗೆ ಸೀಟು ಕಡಿಮೆ ಆಯ್ತು ಅಂತಾರೆ. ನಮಗೆ ವ್ಯೂಟ್ ಹೆಚ್ಚಾಗಿದೆ. ನಮಗೆ 9 ಸೀಟು ಬಂದಿದೆ. ಒಂದ ರಿಂದ 9 ಸೀಟು ಬಂದಿದೆ. ಮೈತ್ರಿ ಮಾಡ್ಕೊಂಡು 45% ಮತ ಗಳಿಕೆ ಆಗಿದೆ. ಸುಮಾರು 13% ಮತ ಪ್ರಮಾಣ ಹೆಚ್ಚಾಗಿ ಬಂದಿದೆ. ನಾವು ಎಲ್ಲಿ ಸೋತಿದ್ದೀವಿ? ಬಿಜೆಪಿ ಕೇಂದ್ರದಲ್ಲಿ 303 ಇತ್ತು ಈಗ ಎಷ್ಟು ಸೀಟು‌ ಬಂದಿದೆ 240 ಸೀಟಿಗೆ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪೆಟ್ರೋಲ್ ಡೀಸೆಲ್ ಏರಿಕೆ ನಂತರ ಮತ್ತೆ ಯಾವುದು ಏರಿಕೆ ಮಾಡ್ತಾರೆ ಎಂಬ ಅಂತಕ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಜನರಿಗೆ ತೊಂದರೆ ಆಗುವ ರೀತಿ ಯಾವುದೇ ತೆರಿಗೆ ಹೆಚ್ಚಳ ಮಾಡಲ್ಲ. ಬಸ್ ಟಿಕೆಟ್ ದರ ಏರಿಕೆಯಾಗುತ್ತಾ ಎಂಬ ವಿಚಾರ.ಲಾಸ್ಟ್ ಯಾವಾಗ ಟಿಕೆಟ್ ದರ ಏರಿಕೆ ಯಾಗಿದೆ ನಿಂಗೆ ಗೊತ್ತಾ?  ಈಗ ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಲ್ಲ. ನಾನು ಇನ್ನೂ ಇಲಾಖೆಯ ಜೊತೆ ಚರ್ಚೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

Latest Posts

Don't Miss