Wednesday, September 17, 2025

Latest Posts

Sandalwood News: ಯೋಗಾ ಹೇಳಿಕೊಟ್ಟ ಮಾಲಾಶ್ರೀ ಪುತ್ರಿ, ನಟಿ ಆರಾಧನಾ ರಾಮ್

- Advertisement -

Sandalwood News: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ‘ಕಾಟೇರ’ ಸಿನಿಮಾ ನಟಿ ಆರಾಧಾನಾ ರಾಮ್ ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ದರು.

ಇಂದಿರಾ ನಗರದ ಕ್ಲಬ್‌ನಲ್ಲಿ ಅಥಾಯೋಗ್ ಲಿವಿಂಗ್ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಆರಾಧನಾ, ಎಲ್ಲರ ಜೊತೆಯಾಗಿ ಯೋಗ ಮಾಡಿದರು. ಸುಮಾರು ಒಂದು‌ ಗಂಟೆಗಳ‌ ಕಾಲ ಆರಾಧಾನಾ ಯೋಗ‌ ಮಾಡಿದ್ದು ವಿಶೇಷ.

ಇದೇ ಸಮಯದಲ್ಲಿ ‘ಯೋಗ ಕೇವಲ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಶಾಂತಿ ನೀಡುತ್ತೆ ಪ್ರತಿಯೊಬ್ಬರು ಯೋಗ ಮಾಡಬೇಕು’ ಎಂದು ಕರೆ ನೀಡಿದರು.

ಮಾಲಾಶ್ರೀ ಹಾಗು‌ ನಿರ್ಮಾಪಕ ರಾಮು ಅವರ ಪುತ್ರಿ ಆರಾಧನಾ ಅವರು ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತನ್ನ ತಾಯಿ ಮಾಲಾಶ್ರಿ ಅವರಂತೆಯೇ ತಾನೂ ಕನ್ನಡ ಸಿನಿಮಾರಂಗದಲ್ಲಿ ಗಟ್ಟಿಯಾಗಿ ನೆಲೆಯೂರಬೇಕು ಎಂಬ ಅದಮ್ಯ ಬಯಕೆ ಆರಾಧನಾ ಅವರದ್ದು.

- Advertisement -

Latest Posts

Don't Miss