Saturday, October 19, 2024

Latest Posts

ಇಂಥ ಆಹಾರಗಳನ್ನು ಸೇವಿಸಿದ್ದಲ್ಲಿ ನೀವು ಸದಾ ಯಂಗ್ ಆಗಿ ಕಾಣುತ್ತೀರಿ

- Advertisement -

Health Tips: ನೀವು ಯಂಗ್ ಆಗಿ ಕಾಣಬೇಕು ಅಂದ್ರೆ, ಈ ಕ್ರೀಮ್ ಹಚ್ಚಬೇಕು. ಈ ಲೋಶನ್ ಬಳಸಬೇಕು. ಈ ಫೇಸ್‌ವಾಶ್ ಯ್ಯೂಸ್ ಮಾಡಬೇಕು. ಈ ರೀತಿಯಾಗಿ ಬರುವ ಎಷ್ಟೋ ಆ್ಯಡ್‌ಗಳನ್ನು ನೀವು ನೋಡಿರುತ್ತೀರಿ. ಆದರೆ ನೀವು ಸರಿಯಾದ ಆಹಾರ ಸೇವಿಸದೇ ಇದ್ದಲ್ಲಿ, ನೀವು ಯಾವ ಕ್ರೀಮ್, ಲೋಶನ್, ಫೇಸ್‌ವಾಶ್ ಬಳಸಿದ್ರೂ ಏನೂ ಉಪಯೋಗವಾಗುವುದಿಲ್ಲ. ಏಕೆಂದರೆ, ನಾವು ಯಂಗ್ ಆಗಿ ಕಾಣಲು ಸಾಧ್ಯವಾಗೋದು, ನಾವು ಸೇವಿಸುವ ಆಹಾರದಿಂದ ಮಾತ್ರ. ಹಾಗಾಗಿ ನಾವಿಂದು ಯಂಗ್ ಆಗಿ ಕಾಣಲು ಯಾವ ಆಹಾರ ಸೇವಿಸಬೇಕು ಅಂತಾ ಹೇಳಲಿದ್ದೇವೆ.

ನಾವು ಯಂಗ್ ಆಗಿ ಕಾಣಬೇಕು ಅಂದ್ರೆ, ನಮ್ಮ ದಿನನಿತ್ಯದ ಆಹಾರದಲ್ಲಿ ಎಲ್ಲ ರೀತಿಯ ಆಹಾರಗಳು ಇರಬೇಕು. ಡ್ರೈಫ್ರೂಟ್ಸ್, ನಟ್ಸ್, ಹಣ್ಣು, ತರಕಾರಿ, ಸೊಪ್ಪು, ಮೊಳಕೆಕಾಳು, ಸಿರಿಧಾನ್ಯ, ಹಾಲಿನ ಉತ್ಪನ್ನ, ಇವೆಲ್ಲವೂ ನಮ್ಮ ಆಹಾರದಲ್ಲಿರಬೇಕು.

ಹೆಚ್ಚಿನ ಸೆಲೆಬ್ರಿಟಿಗಳು ತಮ್ಮ ಆಹಾರದಲ್ಲಿ ಪ್ರೊಟೀನ್ ಪಡೆಯಲು ಬೇಯಿಸಿದ ಮೊಟ್ಟೆಯ ಸೇವನೆ ಮಾಡುತ್ತಾರೆ. ದೇಹದಲ್ಲಿ ಪ್ರೊಟೀನ್ ಅಂಶ ಸರಿಯಾಗಿ ಇದ್ದರೆ, ನಮ್ಮ ಚರ್ಮ, ಕೂದಲು, ಉಗುರಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ತ್ವಚೆ ಮುಪ್ಪಾಗಿ ಕಾಣುವುದಿಲ್ಲ. ಹಾಗಾಗಿ ಮೊಟ್ಟೆ, ಚಿಕನ್, ಪನೀರ್ ಸೇರಿ ಪ್ರೊಟೀನ್ ಗುಣವುಳ್ಳ ಆಹಾರ ಸೇವನೆ ಮಾಡಬೇಕು.

ಇನ್ನು ಹಣ್ಣು, ತರಕಾರಿ ಎಷ್ಟು ಮುಖ್ಯ ಅಂತಾ ಎಲ್ಲರಿಗೂ ಗೊತ್ತೇ ಇದೆ.  ಹಲವರು ತಾವು ಯಂಗ್ ಆಗಿ ಕಾಣಬೇಕು ಎಂದು, ತಮ್ಮ ಆಹಾರದಲ್ಲಿ ಬೇಯಿಸಿದ ಪದಾರ್ಥಕ್ಕಿಂತ ಹೆಚ್ಚಾಗಿ, ಹಸಿ ತರಕಾರಿಗಳನ್ನೇ ಸೇವಿಸುತ್ತಾರೆ. 5ರಿಂದ 6 ವಿಧದ ಫ್ರೆಶ್ ಫ್ರೂಟ್ಸ್ ತಿನ್ನುತ್ತಾರೆ. ಆದರೆ ಇವೆಲ್ಲದರ ಸೇವನೆ ಸೂರ್ಯಾಸ್ತಕ್ಕಿಂತ ಮೊದಲೇ ಮಾಡುತ್ತಾರೆ. ಸೂರ್ಯಾಸ್ತದ ಬಳಿಕ, ಬೇಯಿಸಿದ ಪದಾರ್ಥಗಳನ್ನೇ ಸೇವಿಸಬೇಕು.

ಬಿಳಿ ಅನ್ನದ ಸೇವನೆಯ ಬದಲು, ಕೆಂಪಕ್ಕಿ, ಕುಚಲಕ್ಕಿ, ರಾಜಮುಡಿ ಅಕ್ಕಿಯಂಥ ಧಾನ್ಯ ಬಳಸಿದರೆ ಉತ್ತಮ. ಆಯಾ ಜಾಗಗಳಲ್ಲಿ ಬೇರೆ ಬೇರೆ ಧಾನ್ಯಗಳು ಮಹತ್ವ ಪಡೆದುಕೊಂಡಿರುತ್ತದೆ. ಅಲ್ಲಿ ಅಂಥ ಧಾನ್ಯಗಳನ್ನೇ ಹೆಚ್ಚು ಬಳಸಬೇಕು. ಆಗಲೇ ನಾವು ಆರೋಗ್ಯವಾಗಿ, ಯಂಗ್ ಆಗಿ ಕಾಣಲು ಸಾಧ್ಯವಾಗೋದು. ಉದಾಹರಣೆಗೆ, ಮಂಗಳೂರು ಜನ ಕುಚಲಕ್ಕಿ ಬಳಸುತ್ತಾರೆ. ಮಂಡ್ಯ ಕಡೆ ಜನ ರಾಗಿ ಬಳಸುತ್ತಾರೆ. ಪಂಜಾಬಿಗಳಿಗೆ ಗೋಧಿ ಮುಖ್ಯ ಧಾನ್ಯ. ಹೀಗೆ ಆಯಾ ವಾತಾವರಣಕ್ಕೆ ತಕ್ಕ ಧಾನ್ಯ ಬಳಸಿ.

ಸೊಪ್ಪು, ನೆನೆಸಿಟ್ಟ ಮೊಳಕೆ ಕಾಳಿನ ಸೇವನೆಯಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ನೀವು ಯಂಗ್ ಆಗಿ, ಆರೋಗ್ಯವಾಗಿರಲು ಶಕ್ತಿ ಮುಖ್ಯವಾಗಿರುತ್ತದೆ. ಸೊಪ್ಪು, ತರಕಾರಿ, ಹಣ್ಣು, ಮೊಳಕೆ ಕಾಳುಗಳ ಸೇವನೆಯಿಂದ ನೀವು ಆ ಪ್ರೋಟೀನ್ ಅಂಶ ಪಡೆಯಬಹುದು. ಆದರೆ ಯಾವುದೇ ಸೊಪ್ಪು, ತರಕಾರಿ, ಹಣ್ಣು ತಿನ್ನುವುದಿದ್ದರೂ ಅದನ್ನು ಚೆನ್ನಾಗಿ ತೊಳೆದು ತಿನ್ನುವುದು ಮುಖ್ಯ.

ಇನ್ನು ನೆನೆಸಿಟ್ಟ ಡ್ರೈಫ್ರೂಟ್ಸ್ ಸೇವನೆ ಮಾಡಬೇಕು. ಬಾದಾಮ್, ಅಖ್ರೋಟ್, ಅಂಜೂರ, ಒಣದ್ರಾಕ್ಷಿ, ಕಾಜು, ಖರ್ಜೂರ ಇವೆಲ್ಲವನ್ನೂ ನಾವು ನೀರಿನಲ್ಲಿ ನೆನೆಸಿಟ್ಟು ಸೇವಿಸಬಹುದು. ಪಿಸ್ತಾ, ಕಲ್ಲಂಗಡಿ ಬೀಜ, ಕುಂಬಳಕಾಯಿ ಬೀಜ ಇವೆಲ್ಲವನ್ನೂ ನಾವು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇವೆಲ್ಲದರ ಜೊತೆಗೆ, ಸಾಧ್ಯವಾದಷ್ಟು ನೀರಿನ ಸೇವನೆ ಮುಖ್ಯ. ಜೊತೆಗೆ ಜಂಕ್ ಫುಡ್, ಮಸಾಲೆ ಪದಾರ್ಥ, ಕರಿದ ಪದಾರ್ಥ, ಟೀ, ಕಾಫಿ ಸೇವನೆ ತ್ಯಜಿಸಿದರೆ, ನೀವು ಯಂಗ್ ಆಗಿ ಕಾಣುವುದರಲ್ಲಿ ಡೌಟೇ ಇಲ್ಲ.

ಫಾಸ್ಟ್ಫುಡ್ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ ಎಷ್ಟು ಡೇಂಜರ್ ಗೊತ್ತಾ..?

Health Tips: ಪೇನ್ ಕಿಲ್ಲರ್ ತೆಗೆದುಕೊಳ್ಳುವ ಮುನ್ನ ಎಚ್ಚರವಿರಲಿ.. ಇದೇ ಚಟವಾಗದಿರಲಿ..

Summer Special: ಹವ್ಯಕ ಶೈಲಿಯ ಮಾವಿನ ಹಣ್ಣಿನ ಸಾಸಿವೆ

- Advertisement -

Latest Posts

Don't Miss