ಟ್ರೆಡ್ಮಿಲ್ನಲ್ಲಿ ವಾಕ್ ಮಾಡುವುದರಿಂದ ಮಂಡಿ ನೋವು ಹೆಚ್ಚುತ್ತಾ..?

Health Tips: ವಯಸ್ಸಾದ ಮೇಲೆ ಅಥವಾ ದೇಹದಲ್ಲಿ ಶಕ್ತಿ ಇಲ್ಲದಿರುವಾಗ ಕಾಲು ನೋವಾಗೋದು ಸಹಜ. ಆದರೆ ಕೆಲವರು ಆರೋಗ್ಯ ಚೆನ್ನಾಗಿರಲಿ ಎಂದು ವಾಕಿಂಗ್ ಮಾಡ್ತಾರೆ. ಮತ್ತೆ ಕೆಲವರು ನಮಗೆ ವಾಕ್ ಮಾಡಲು ಸಮಯವಿಲ್ಲವೆಂದು ಟ್ರೇಡ್ ಮಿಲ್ ಬಳಸುತ್ತಾರೆ. ಆದರೆ ಟ್ರೇಡ್ಮಿಲ್ ಬಳಸುವ ಬದಲು ವಾಕ್ ಮಾಡುವುದೇ ಉತ್ತಮ ಅಂತಾರೆ ವೈದ್ಯರು. ಯಾಕೆ ಅಂತಾ ತಿಳಿಯೋಣ ಬನ್ನಿ..

ವೈದ್ಯರು ಹೇಳುವ ಪ್ರಕಾರ, ಮಂಡಿ ನೋವು, ಕಾಲು ನೋವು ಇದೆ ಎಂದು ಎಂದಿಗೂ ಟ್ರೇಡ್ ಮಿಲ್ ಬಳಸಬಾರದು. ಮತ್ತು ವಾಕಿಂಗ್, ಜಾಗಿಂಗ್ ಮಾಡುವಾಗ, ಪಾದಕ್ಕೆ ಸರಿಯಾದ ಶೂಸನ್ನೇ ಧರಿಸಬೇಕು. ಕೆಲವರು ಚಪ್ಪಲಿ ಧರಿಸಿಯೂ ವಾಕ್ ಮಾಡುತ್ತಾರೆ. ಆದರೆ ಚಪ್ಪಲಿ ಧರಿಸಿ, ವಾಕ್ ಮಾಡುವುದಕ್ಕಿಂತ ಶೂಸ್ ಧರಿಸಿ, ನಡೆಯುವುದು ಉತ್ತಮ ಅಂತಾರೆ ವೈದ್ಯರು.

ಇನ್ನು ಮಂಡಿ ನೋವು ಇದ್ದಲ್ಲಿ ಯಾಕೆ ಟ್ರೇಡ್‌ಮಿಲ್ ಬಳಸಬಾರದು ಅಂದ್ರೆ, ಇದರಿಂದ ನೋವು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದರ ಬದಲು, ನಡೆಯುವುದೇ ಆರೋಗ್ಯಕರವಾಗಿರುತ್ತದೆ. ಇದರಿಂದ ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಇದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author