Health Tips: ಆಹಾರ ಸೇವನೆ ಮಾಡುವಾಗ, ನಮಗೆ ಏನೂ ಆಗದೇ, ನಾವು ಆರಾಮವಾಗಿ ಆಹಾರ ಸೇವನೆ ಮಾಡಿದರೆ, ನಾವು ಆರೋಗ್ಯವಾಗಿದ್ದೇವೆ ಎಂದರ್ಥ. ಆದರೆ ನಾವು ಆಹಾರ ಸೇವನೆ ಮಾಡುವಾಗ, ನಮ್ಮ ಗಂಟಲಲ್ಲಿ ಅಥವಾ ಎದೆಯ ಭಾಗದಲ್ಲಿ ಆಹಾರ ಸಿಲುಕಿದ ಹಾಗೆ ಅನ್ನಿಸಿದರೆ, ನಮ್ಮ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಲೇ ಅರ್ಥ. ಹಾಗಾದ್ರೆ ಇದರ ಅರ್ಥವೇನು ಅಂತಾ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ನಾವು ಆಹಾರ ಸೇವಿಸುವಾಗ, ಗಂಟಲಲ್ಲಿ ಅಥವಾ ಎದೆಯ ಭಾಗದಲ್ಲಿ ಆಹಾರ ಸಿಲುಕಿದ ಹಾಗೆ ಅನ್ನಿಸಿದರೆ, ಅನ್ನನಾಳದ ಕ್ಯಾನ್ಸರ್ ಇರುವ ಎಲ್ಲ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಸಮಸ್ಯೆ ಇದ್ದರೆ, ಒಮ್ಮೆ ವೈದ್ಯರ ಬಳಿಕ ಪರೀಕ್ಷಿಸಿಕೊಳ್ಳುವುದು ಉತ್ತಮ.
ಇನ್ನು ಈ ಅನ್ನನಾಳದ ಕ್ಯಾನ್ಸರ್ ಬರಲು ಕಾರಣವೇನು ಅಂದ್ರೆ, ಅತೀ ಖಾರವಾದ ಆಹಾರ ಮತ್ತು ಅತೀ ಬಿಸಿ ಬಿಸಿಯಾದ ಆಹಾರವನ್ನು ಸೇವಿಸುವುದರಿಂದ ಅನ್ನನಾಳದ ಕ್ಯಾನ್ಸರ್ ಬರುತ್ತದೆ. ಅಷ್ಟೇ ಅಲ್ಲದೇ, ಮದ್ಯಪಾನ, ಧೂಮಪಾನ ಸೇರಿ ಹಲವು ಚಟವಿದ್ದವರಿಗೆ ಕ್ಯಾನ್ಸರ್ ಬರುತ್ತದೆ. ಅಥವಾ ಧೂಳು ತುಂಬಿದ ವಾತಾವರಣದಲ್ಲಿ ನೆಲೆಸುವುದರಿಂದ ಅಥವಾ ಹೆಚ್ಚು ಓಡಾಡುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇನ್ನು ನೀವು ಡಯಟ್ ಮಾಡದೇ, ಊಟ ಬಿಡದೇ, ವಾಕಿಂಗ್, ಜಾಗಿಂಗ್ ಮಾಡಲಾರದೇ, ದೇಹದ ತೂಕ ಇಳಿಯುತ್ತಿದೆ ಎಂದರೆ, ಅದು ಕ್ಯಾನ್ಸರ್‌ನ ಲಕ್ಷಣ ಎಂದರ್ಥ. ಹೀಗಾಗಿದ್ದಲ್ಲಿ, ಒಮ್ಮೆ ವೈದ್ಯರ ಬಳಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.