Monday, December 23, 2024

Latest Posts

Sandalwood News: ನನ್ನ ಯಾವ ಗೋಳಿನ ಕಥೆಯೂ ಇಲ್ಲ: ಕವಿರಾಜ್

- Advertisement -

Sandalwood News: ಸ್ಯಾಂಡಲ್‌ವುಡ್‌ನ ಗೀತರಚನೆಕಾರ ಕವಿರಾಜ್, ಕರ್ನಾಟಕ ಟಿವಿ ಜೊತೆ ಒಂದಷ್ಟು ವಿಷಯಗಳನ್ನು ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಕವಿರಾಜ್, ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ನಡೆಯುತ್ತಿರುವ ಘಟನೆಗಳು, ತಕಮ್ಮ ಜೀವನದ ಕೆಲ ಘಟನೆಗಳು ಮತ್ತು ಗೌರಿ ಸಿನಿಮಾದ ಕೆಲವೊಂದು ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಕವಿರಾಜ್ ಈಗಾಗಲೇ 2,500ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ 20 ಸಿನಿಮಾದಲ್ಲಿ ಪೇಮೆಂಟ್ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದು ಬಿಟ್ಟರೆ, ಬೇರೆ ಗೋಳಿನ ಕಥೆ ಇಲ್ಲವೆಂದು ಕವಿರಾಜ್ ಹೇಳಿದ್ದಾರೆ.

35 ವರ್ಷದ ತನಕ ಕವಿರಾಜ್ ಅವರ ಜೀವನ ಹೇಗಿತ್ತೆಂದರೆ, ರಾತ್ರಿ 2,3 ಗಂಟೆಗೆ ಮನೆಗೆ ಬರುವುದು. ಮತ್ತೆ ಬೆಳಿಗ್ಗೆ 7 ಗಂಟೆಗೆ ಎದ್ದು, ಆಫೀಸಿಗೆ ಹೋಗುವುದು. ಈ ರೀತಿಯಾದಾಗ, ಒಮ್ಮೆ ನನಗೆ 35 ವರ್ಷ ವಯಸ್ಸಾಗಿದೆ. ನಾನು ನನ್ನ ಕೆಲಸದಲ್ಲೇ ಮುಳುಗಿ ಹೋಗಿದ್ದೇನೆ. ಮದುವೆಯಾಗಿಲ್ಲ. ನನ್ನ ಸ್ನೇಹಿತರು ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಜೀವನ ಜೀವಿಸುತ್ತಿದ್ದಾರೆ ಎಂದು ಅರಿವಾಯಿತು.

ಬಳಿಕ ಹಾಡುಗಳನ್ನು ಆಯ್ಕೆ ಮಾಡಿ ಬರೆಯಲು ಪ್ರಾರಂಭಿಸಿದರು. ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕವಿರಾಜ್, ಒಂದು ಮಗುವಿನ ತಂದೆಯಾಗಿ, ಸುಖ ಸಂಸಾರ ನಡೆಸುತ್ತಿದ್ದಾರೆ. ಸಂಪೂರ್ಣ ಸಂದರ್ಶನ ನೋಡಲು ವೀಡಿಯೋ ನೋಡಿ.

- Advertisement -

Latest Posts

Don't Miss