Movie News: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಜೈಲಿಗೆ ಹೋಗಿ ಬರೋಬ್ಬರಿ ಒಂದು ತಿಂಗಳು ಉರುಳಿ ಹೋಗಿದೆ. ನಾಲ್ಕು ಗೋಡೆ ಮಧ್ಯೆ ಇರುವ ದರ್ಶನ್ ಅವರಿಗೆ ಈಗಾಗಲೇ ಪಶ್ಚಾತ್ತಾಪ ಕೂಡ ಆಗಿದೆ.
ಅಷ್ಟೇ ಅಲ್ಲ, ಹತ್ಯೆಗೆ ಭಾಗಿಯಾಗಿದ್ದ ವಿನಯ್ ಮತ್ತು ಗ್ಯಾಂಗ್ ಇದೀಗ ದರ್ಶನ್ ಅವರನ್ನು ಕ್ಷಮಿಸಿಬಿಡಿ ಬಾಸ್ ಎಂದಿದೆ. ಇದಕ್ಕೆ ಕಾರಣ, ಅವರಿಗೆ ಆದಂತಹ ತಪ್ಪಿನ ಅರಿವು. ಹೌದು, ಜೈಲಿನಲ್ಲಿರುವ ಅವರೆಲ್ಲರಿಗೂ ಈಗ ಪಶ್ಚಾತ್ತಾಪವಾಗಿದೆ. ಹೀಗಾಗಿ ಎಲ್ಲರೂ ದರ್ಶನ್ ಅವರ ಬಳಿ ಬಂದು ನಮ್ಮನ್ನು ಕ್ಷಮಿಸಿ ಬಿಡಿ ಬಾಸ್, ಇದೆಲ್ಲವೂ ನಮ್ಮಿಂದನೇ ಆಗಿದ್ದು. ಏನೋ ಆಗಬೇಕಾದ್ದು ಇನ್ನೇನೋ ಆಗಿಬಿಟ್ಟಿದೆ. ನಮ್ಮಿಂದ ನೀವು ಇಂತಹ ಸ್ಥಿತಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಂಬರ್ಥದಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಈ ವೇಳೆ ದರ್ಶನ್ ಕೂಡ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಎಲ್ಲರೂ ನಮ್ಮನ್ನು ಕ್ಷಮಿಸಿಬಿಡಿ ಅಂದಿದ್ದಕ್ಕೆ ದರ್ಶನ್ ಕೂಡ, ಮುಂದೇನಾಗುತ್ತೆ ನೋಡೋಣ ಎಂದಷ್ಟೇ ಹೇಳಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ದರ್ಶನ್ ಅವರಿಗೂ ತಪ್ಪಿನ ಅರಿವಾದಂತಾಗಿದೆ. ಸದ್ಯ ಜೈಲಿನಲ್ಲಿರುವ ಎಲ್ಲರೂ ಈ ರೀತಿಯ ತಪ್ಪು ಆಗಬಾರದಿತ್ತು. ಆಗಿಬಿಟ್ಟಿದೆ ಎಂದೆನಿಸಿದೆ.
ಯಾರೇ ಇರಲಿ, ನಾಲ್ಕು ಗೋಡೆ ನಡುವೆ ಒಬ್ಬಂಟಿಯಾಗಿಬಿಟ್ಟರೆ, ಹಳೆಯದೆಲ್ಲಾ ಕಾಡತೊಡಗುತ್ತದೆ. ಜೈಲಲ್ಲಿರುವ ಎಲ್ಲರಿಗೂ ತಾವು ಮಾಡಿದ ತಪ್ಪಿನ ಅರಿವು ಕೂಡ ಆಗಿದೆ. ಹೀಗಾಗಿ ದರ್ಶನ್ ಅವರ ಮುಂದೆ ಬಂದು ಎಲ್ಲರೂ ಕ್ಷಮಿಸಿ ಬಿಡಿ ಬಾಸ್ ಎಂದಿದ್ದಾರೆ ಅವರು.