Friday, December 5, 2025

Latest Posts

Dharwad News: ಲೇಔಟ್ ವಿಷಯವಾಗಿ ಟೈಲ್ಸ್ ಕೆಲಸಗಾರನ ಕೊ*ಲೆ

- Advertisement -

Dharwad News: ಧಾರವಾಡ: ಧಾರವಾಡದ ಮಣಿಕಿಲ್ಲಾದ ಡೋರಗಲ್ಲಿಯ ನಿವಾಸಿ, ಹರೀಶ್ ಶಿಂಧೆ(30)ಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಲೇಔಟ್ ವೊಂದರಲ್ಲಿ ಈ ಘಟನೆ ನಡೆದಿದೆ.

ಹರೀಶ್ ವೃತ್ತಿಯಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದ. ನಿನ್ನೆ ರಾತ್ರಿ ಮನೆಯಿಂದ ಹೊರಹೋದವನು, ಮನೆಗೆ ಬರಲೇ ಇಲ್ಲ. ಹಾಗಾಗಿ ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಹರೀಶ್ ಕೊಲೆಯಾಗಿದೆ ಎಂದು ಮನೆಯವರಿಗೆ ತಿಳಿದು ಬಂದಿದೆ. ಸ್ಥಳಕ್ಕೆ ಎಸ್ಪಿ ಗೋಪಾಲ್ ಬ್ಯಾಕೋಡ, ಎ ಎಸ್ ಪಿ ನಾರಾಯಣ ಭರಮನಿ, ಸಿಪಿಐ ಕಮತಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲೇಔಟ್ ಸಲುವಾಗಿ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

- Advertisement -

Latest Posts

Don't Miss