ಸ್ಟ್ರಾಬೇರಿ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಸ್ಟ್ರಾಬೇರಿ ಐಸ್‌ಕ್ರೀಮ್, ಸ್ಟ್ರಾಬೇರಿ ಚಾಕ್ಲೇಟ್ಸ್, ಕ್ಯಾಂಡೀಗಳು ಹೆಚ್ಚಿನವರ ಫೇವರಿಟ್ ತಿನಿಸಾಗಿದೆ. ಆದ್ರೆ ಅಂಗಡಿಲಿ ಸಿಗೋ ಸ್ಟ್ರಾಬೇರಿ ಹಣ್ಣನ್ನ ತಿನ್ನೋ ಬದಲು ನಾವೇ ಮನೆಯಲ್ಲೇ ಗಿಡ ನೆಟ್ಟು ಸ್ಟ್ರಾಬೇರಿ ಬೆಳೆಯಬಹುದು. ಹಾಗಾದ್ರೆ ಈ ಹಣ್ಣನ್ನ ಬೆಳೆಯೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ.
ಟೆರೆಸ್ ಗಾರ್ಡೆನಿಂಗ್‌ನಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಇದ್ದರೆ, ನೀವು ಸ್ಟ್ರಾಬೇರಿಯನ್ನ ಈಸಿಯಾಗಿ ಬೆಳಿಯಬಹುದು. ಸ್ಟ್ಪಾಬೇರಿ ಗಿಡ ಬೆಳೆಯಲು 4ರಿಂದ 5 ಸ್ಟ್ರಾಬೇರಿ ಹಣ್ಣು, 60% ತೆಂಗಿನ ನಾರಿನ ಪುಡಿ, 40% ಸಾವಯವ ಮಿಶ್ರಗೊಬ್ಬರ, ನೀಮ್ ಕೇಕ್, ಒಂದು ಪಾಟ್, 5-6 ಚಿಕ್ಕ ಚಿಕ್ಕ ಪೇಪರ್ ಟೀ ಕಪ್ ಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ನೀವು ನೀಮ್ ಕೇಕ್ ಪರ್ಚೇಸ್ ಮಾಡಬಹುದು.
ಹಣ್ಣಿನ ಬೀಜಗಳನ್ನ ತೆಗೆದು, ಒಂದು ಸ್ಪೂನ್ ಸ್ಟ್ರಾಬೇರಿ ಬೀಜಗಳನ್ನು ಸಂಗ್ರಹಿಸಿ ಇರಿಸಿ. ನಂತರ ಪಾಟ್‌ನಲ್ಲಿ 60% ತೆಂಗಿನ ನಾರಿನ ಪುಡಿ, 40% ಸಾವಯವ ಮಿಶ್ರಗೊಬ್ಬರ, ನೀಮ್ ಕೇಕ್ ಹಾಕಿ ಮಿಕ್ಸ್ ಮಾಡಿ.
ಪೇಪರ್ ಟೀ ಕಪ್‌ಗಳಲ್ಲಿ ಈ ಮಣ್ಣಿನ ಮಿಶ್ರಣ ಹಾಕಿ, ಅದರ ಮಧ್ಯದಲ್ಲಿ ಸ್ಟ್ರಾಬೇರಿ ಬೀಜಗಳನ್ನ ಹಾಕಿ, ನೀರು ಹಾಕಿ. ಇದೇ ರೀತಿ ಪ್ರತಿದಿನ ನೀರು ಹಾಕಿ ಬೆಳೆಸಿ. ಕೆಲ ದಿನಗಳ ಬಳಿಕ ಕಪ್‌ಗಳಲ್ಲಿ ಸ್ಟ್ರಾಬೇರಿ ಚಿಕ್ಕ ಚಿಕ್ಕ ಗಿಡಗಳು ಬೆಳೆದಿರುವುದನ್ನ ನೀವು ಕಾಣಬಹುದು.
ಈಗ ನೀವು ಪರ್ಫೆಕ್ಟ್ ಸ್ಟ್ರಾಬೇರಿ ಪಾಟನ್ನ ಸಿದ್ದ ಮಾಡಿಕೊಳ್ಳಬೇಕು. ಅದಕ್ಕಾಗಿ ಒಂದು ಮೀಡಿಯಂ ಸೈಜ್‌ನ ಪಾಟ್ ತೆಗೆದುಕೊಂಡು, ಅದರಲ್ಲಿ ಮೊದಲೇ ಮಾಡಿರಿಸಿದ್ದ ಮಿಶ್ರಗೊಬ್ಬರ ಹಾಕಿ. ಈ ಕಪ್‌ನಲ್ಲಿ ಬೆಳೆದ ಗಿಡಗಳನ್ನ ಕಪ್‌ನಿಂದ ಮಣ್ಣಿನ ಸಮೇತ ತೆಗೆದು ಮೀಡಿಯಂ ಸೈಜ್ ಪಾಟ್‌ನಲ್ಲಿರುವ ಮಿಶ್ರಗೊಬ್ಬರದ ನಡುವೆ ಇರಿಸಿ.
ಈ ಪಾಟನ್ನ ನಿಮ್ಮ ಟೆರೆಸ್‌ನಲ್ಲಿರಿಸಿ, ಆದ್ರೆ ಇದಕ್ಕೆ ಸೂರ್ಯ ಶಾಖ ತಾಗದಂತೆ ನೋಡಿಕೊಳ್ಳಿ. ಹಾಗಂತ ತಂಪಾದ ಜಾಗದಲ್ಲೂ ಇರಿಸಿಕೂಡದು. ತಂಪು ಮತ್ತು ಶಾಖ ಎರಡೂ ಸಮವಾಗಿರುವ ಜಾಗದಲ್ಲಿ ಸ್ಟ್ರಾಬೇರಿ ಪಾಟ್ ಇರಿಸಿ. ಪ್ರತಿದಿನ ತಪ್ಪದೇ ನೀರುಣಿಸಿ. ಕೆಲ ತಿಂಗಳಲ್ಲೇ ಉತ್ತಮ ಫಲಿತಾಂಶ ಕಾಣಸಿಗುತ್ತದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.