National News: ಪತಿ ಪತ್ನಿ ಮಧ್ಯೆ ಜಗಳ ನಡೆಯುವುದು ಕಾಮನ್. ಸಿಟ್ಟು ಬಂದಾಗ, ಬಾಯಿ ತಪ್ಪಿ ಏನನ್ನೋ ಮಾತನಾಡಿದಾಗ, ಹೇಳಿದ ಕೆಲಸ ಮಾಡದಿದ್ದಾಗ, ಜವಾಬ್ದಾರಿ ನಿಭಾಯಿಸದಿದ್ದಾಗ, ಹೀಗೆ ಹಲವು ಸಂದರ್ಭದಲ್ಲಿ ಪತಿ ಮೇಲೆ ಪತ್ನಿಗೆ ಪತ್ನಿಯ ಮೇಲೆ ಪತಿಗೆ ಕೋಪ ಬರುತ್ತದೆ. ಜಗಳವಾಗುತ್ತದೆ. ಆ ಜಗಳವನ್ನು ಸರಿಪಡಿಸಿ, ತಾಳ್ಮೆಯಿಂದ ಇದ್ದರೆ, ಜೀವನ ಸುಗಮವಾಗುತ್ತದೆ.
ಆದರೆ ಪತಿ ತನಗಿಷ್ಟವಾದ ಸೀರೆ ತಂದುಕೊಟ್ಟಿಲ್ಲವೆಂದು ಪತಿಗೆ ಪತ್ನಿ ಡಿವೋರ್ಸ್ ನೀಡಿದರೆ, ಅದಕ್ಕೇನು ಹೇಳಬೇಕು..? ಇಂಥದ್ದೇ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಆಗ್ರಾದಲ್ಲಿ ಈ ಘಟನೆ ನಡೆದಿದ್ದು, 2022ರಲ್ಲಿ ಈ ಜೋಡಿ ವಿವಾಹವಾಗಿತ್ತು. ಆದರೆ ಕಳೆದ 6 ತಿಂಗಳಿನಿಂದ ಈ ಜೋಡಿ ಮಧ್ಯೆ ಸರಿಯಾಗಿ ಸಂಸಾರ ನಡೆಯುತ್ತಿಲ್ಲ. ಒಂದಲ್ಲ ಒಂದು ವಿಚಾರಕ್ಕೆ ಜಗಳವಾಗುತ್ತಲೇ ಇದೆ.
ಇನ್ನು ಕೆಲ ದಿನಗಳ ಹಿಂದೆ ಪತ್ನಿ ಪತಿಯ ಬಳಿ ತನಗೊಂದು ಸೀರೆ ಕೊಡಿಸಲು ಹೇಳಿದ್ದಾಳೆ. ಆದರೆ ಪತಿ ಕಾರಣಾಂತರಗಳಿಂದ ಆಕೆಗೆ ಸೀರೆ ಕೊಡಿಸಲಿಲ್ಲ. ಅಲ್ಲದೇ, ಆತ ತನ್ನ ಮೇಲೆ ಹಲ್ಲೆ ಮಾಡಿದ್ದಾನೆಂದು ಪತ್ನಿ ಆರೋಪಿಸಿದ್ದಾಳೆ. ಈ ಕಾರಣಕ್ಕೆ ಆಕೆ ಪೊಲೀಸ್ ಠಾಣೆಗೆ ಹೋಗಿ, ಪ್ರಕರಣ ದಾಖಲಿಸಿದ್ದಲ್ಲದೇ, ಡಿವೋರ್ಸ್‌ಗೆ ಅಪ್ಲೈ ಮಾಡಿದ್ದಾಳೆ.
ಇಬ್ಬರನ್ನೂ ಕೂರಿಸಿ ಮಾತನಾಡಿಸಿದ ಅಡ್ವಕೇಟ್, ಇಬ್ಬರ ಮಧ್ಯೆ ಸಂಧಾನ ಮಾಡಿಸಿ, ಒಂದಾಗುವಂತೆ ಮಾಡಿದ್ದಾರೆ. ಪತ್ನಿ ತಾನು ಡಿವೋರ್ಸ್ ವಾಪಸ್ ಪಡೆಯುವುದಾಗಿ ಹೇಳಿದ್ದಾಳೆ. ಈ ರೀತಿಯ ಸಣ್ಣ ಪುಟ್ಟ ಜಗಳ ಇತ್ತೀಚಿನ ದಿನಗಳಲ್ಲಿ ಕೋರ್ಟ್ ಮೆಟ್ಟಿಲೇರುತ್ತಿರುವುದು ಸಹಜವಾಗಿದೆ.