Health Tips: ಉಪ್ಪು ಅಂದ್ರೆ, ಆಹಾರವನ್ನು ರುಚಿಗೊಳಿಸುವ, ಮುಖ್ಯವಾದ ವಸ್ತು. ನೀವು ಯಾವುದೇ ಆಹಾರಕ್ಕೆ ಹಲವು ಮಸಾಲೆ ಪದಾರ್ಥಗಳನ್ನು ಸೇರಿಸಿದರೂ, ಉಪ್ಪು ಹಾಕದಿದ್ದಲ್ಲಿ, ಅದರ ರುಚಿಯೇ ಹಾಳಾಗಿ ಹೋಗುತ್ತದೆ. ಹಾಗಾಗಿ ಅವಶ್ಯಕತೆ ಇದ್ದಷ್ಟು ಉಪ್ಪು ಹಾಕುವುದು. ಆದರೆ ಅವಶ್ಯಕತೆ ಮೀರಿ ಉಪ್ಪು ಬಳಸಿದರೆ, ಆರೋಗ್ಯವೇ ಹಾಳಾಗಿ ಹೋಗುತ್ತದೆ. ಉಪ್ಪು ಹೆಚ್ಚು ಬಳಸಿದ ತಿಂಡಿ, ಕುರುಕಲು ತಿಂಡಿ ತಿಂದರೆ ಆರೋಗ್ಯದ ಮೇಲೆ ಎಂಥ ಕೆಟ್ಟ ಪರಿಣಾಮ ಬೀರುತ್ತದೆ ಅಂತಾ ತಿಳಿಯೋಣ ಬನ್ನಿ.
ಬಿಪಿ ಶುರುವಾಗುವುದೇ ಹೆಚ್ಚು ಉಪ್ಪು ತಿಂದಾಗ. ಏಕೆಂದರೆ, ಉಪ್ಪು ಹೆಚ್ಚು ಸೇವನೆ ಮಾಡಿದಾಗ, ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಉತ್ಪತ್ತಿಯಾಗುತ್ತದೆ. ಕಿಡ್ನಿ ಫೇಲ್, ಹಾರ್ಟ್ ಅಟ್ಯಾಕ್ ಇವೆಲ್ಲವೂ ಬರುವುದೇ ದೇಹದಲ್ಲಿ ರಕ್ತದೊತ್ತಡ ಹೆಚ್ಚಾದಾಗ. ಹಾಗಾಗಿ ಆರೋಗ್ಯಕರ ಜೀವನ ನಡೆಸಬೇಕು ಅಂದ್ರೆ, ನೀವು ಉಪ್ಪು ಮತ್ತು ಸಕ್ಕರೆಯ ಬಳಕೆ ಕಡಿಮೆ ಮಾಡಬೇಕು.
ಇನ್ನು ಹೆಚ್ಚು ಉಪ್ಪು ಸೇವಿಸುವುದರಿಂದ ಹೊಟ್ಟೆಯ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಹೊಟ್ಟೆ ಕ್ಯಾನ್ಸರ್‌ಗೆ ಮುಖ್ಯವಾದ ಕಾರಣ ಅಂದ್ರೆ, ಬೀದಿ ಬದಿ ಸಿಗುವ ತಿಂಡಿ, ಅಂಗಡಿಯಲ್ಲಿ ಸಿಗುವ ಜಂಕ್ ಫುಡ್, ಹೊಟೇಲ್ ತಿಂಡಿ, ಇಲ್ಲೆಲ್ಲ ಹೆಚ್ಚು ಉಪ್ಪು ಬಳಸಿ ಮಾಡಿದ, ಕುರುಕಲು ತಿಂಡಿ ಸಿಗುತ್ತದೆ. ಇಂಥ ತಿಂಡಿ ಅಗತ್ಯಕ್ಕಿಂತ ಹೆಚ್ಚು ತಿಂದಾಗ, ಇಂಥ ರೋಗಗಳು ಬರುತ್ತದೆ.
ಎಲ್ಲಕ್ಕಿಂತ ಮುಖ್ಯವಾದ ವಿಷಯ ಅಂದ್ರೆ, ನೀವು ಉಪ್ಪು ಬಳಸಿದ ಕುರುಕಲು ತಿಂಡಿ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಬೊಜ್ಜು ಬೆಳೆಯುತ್ತದೆ. ಬೊಜ್ಜು ಹೆಚ್ಚು ಬೆಳೆದಾಗಲೇ ಹೊಸ ಹೊಸ ಖಾಯಿಲೆಗಳು ನಮ್ಮನ್ನು ಆವರಿಸುತ್ತದೆ. ಬೊಜ್ಜು ಬೆಳೆದಾಗಲೇ, ರಕ್ತದೊತ್ತಡ ಹೆಚ್ಚಾಗುತ್ತದೆ. ಹಾಗಾಗಿಯೇ ಬೊಜ್ಜು ಇರುವವರು ಎಂದಿಗೂ ಆರೋಗ್ಯವಾಗಿ ಇರಲು ಸಾಧ್ಯವಾಗುವುದಿಲ್ಲ ಅಂತಾ ಹೇಳುವುದು.