Wednesday, September 11, 2024

Latest Posts

ಬಿಪಿ, ಶುಗರ್ ಇರುವವರು ಈ ಆಹಾರಗಳನ್ನು ಸೇವಿಸಲೇಬೇಡಿ

- Advertisement -

Health tips: ಬಿಪಿ, ಶುಗರ್ ಅನ್ನು ರೋಗ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿರಬಹುದು. ಆದರೆ, ಅದನ್ನು ಅನುಭವಿಸುವವರ ನೋವು ಕಾಮನ್ ಆಗಿಲ್ಲ. ಬಿಪಿ ನೆತ್ತಿಗೇರಿ, ಸಡನ್ ಆಗಿ ಸಾವೇ ಸಂಭವಿಸಬಹುದು. ಅಥವಾ ಪಾರ್ಶ್ವವಾಯು ಬರಬಹುದು. ಹಾರ್ಟ್ ಅಟ್ಯಾಕ್ ಆಗಬಹುದು. ಹಾಗಾಗಿ ಬಿಪಿ, ಶುಗರ್ ಸಮಸ್ಯೆಯನ್ನು ಎಂದಿಗೂ ಸಾಮಾನ್ಯವೆಂದು ಭಾವಿಸಬೇಡಿ. ಹಾಗಾಗಿ ನಾವಿಂದು ಬಿಪಿ, ಶುಗರ್ ಇರುವವರು ಯಾವ ಆಹಾರವನ್ನು ಸೇವಿಸಬಾರದು ಅಂತಾ ಹೇಳಲಿದ್ದೇವೆ.

ಮೈದಾ ಸೇವನೆ ಮಾಡಬೇಡಿ. ಮೈದಾ ಬರೀ ಬಿಪಿ ಇದ್ದವರು ಮಾತ್ರವಲ್ಲ. ಯಾರೂ ಕೂಡ ಬಳಸಬಾರದು. ಯಾಕಂದ್ರೆ ಇದು ಬಿಪಿ, ಶುಗರ್‌, ಹಾರ್ಟ್ ಪ್ರಾಬ್ಲಮ್ ಜೊತೆ, ಕ್ಯಾನ್ಸರ್ ರೋಗ ಬರಲೂ ಕಾರಣವಾಗಬಹುದು. ಹಾಗಾಗಿ ಮೈದಾ ಸೇವನೆ ಕಡಿಮೆ ಮಾಡಿ. ಬಳಸದೇ ಇದ್ದರೂ ಉತ್ತಮ. ಮೈದಾದಿಂದ ಮಾಡಿದ ಕುರುಕಲು ತಿಂಡಿ, ಬ್ರೆಡ್ ಇದ್ಯಾವುದನ್ನೂ ಬಿಪಿ ಇದ್ದವರು ಸೇವಿಸಬಾರದು.

ಇನ್ನು ವೈಟ್ ರೈಸ್ ಸೇವನೆ ಕಡಿಮೆ ಮಾಡಿದರೆ ಒಳ್ಳೆಯದು. ಕುಚಲಕ್ಕಿ ಅನ್ನ, ಕೆಂಪಕ್ಕಿ ಅನ್ನ ಉಂಡರೆ ಉತ್ತಮ. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಬಿಳಿ ಅಕ್ಕಿ ಸೇವನೆಯಿಂದ ಶುಗರ್, ಬಿಪಿ ಲೆವಲ್ ಹೆಚ್ಚಾಗುತ್ತದೆ. ಆದರೆ ನೀವು ಕುಕ್ಕರ್‌ನಲ್ಲಿ ಅನ್ನ ಮಾಡುವ ಬದಲು, ಪಾತ್ರೆಯಲ್ಲಿ ಅನ್ನ ಮಾಡಿ, ಅದರ ಗಂಜಿ ಬಸಿದರೆ, ನಿಮಗೆ ಸ್ವಲ್ಪವಾದರೂ ಆರೋಗ್ಯವಾದ ಅನ್ನ ಸಿಗುತ್ತದೆ.

ಇನ್ನು ಬಿಪಿ ಇದ್ದವರು ಸೈಂಧವ ಲವಣ ಬಳಸುವುದು ಉತ್ತಮ. ಇದು ಬಿಳಿ ಉಪ್ಪಿಗಿಂತಲೂ ಹೆಚ್ಚು ಆರೋಗ್ಯಕರವಾಗಿರುತ್ತದೆ. ಆದರೆ ಕೆಲವರಿಗೆ ಸೈಂಧವ ಲವಣ ಬಳಸಿದರೆ, ಆರೋಗ್ಯ ಏರುಪೇರಾಗುತ್ತದೆ. ಅಂಥವರು ವೈದ್ಯರ ಬಳಿ ಸಲಹೆ  ಪಡೆದು, ಸೈಂಧವ ಲವಣ ಬಳಸುವುದು ಉತ್ತಮ.

- Advertisement -

Latest Posts

Don't Miss