Mangaluru: ಮಂಗಳೂರಿನಲ್ಲಿ ಮಾಡುವ ಭೂತಕೋಲ ಮತ್ತು ತುಳುವರು ನಂಬುವ ದೈವಗಳು ತನ್ನದೇ ಮಹತ್ವವನ್ನು ಹೊಂದಿದೆ. ಭೂತ ಕೋಲ, ದೈವ ನರ್ತನ ನೋಡುವಾಗ ಒಮ್ಮೊಮ್ಮೆ ಭಕ್ತಿ ಬರುವುದು ಸಹಜ. ಆದರೆ ಆ ರೀತಿಯಾಗಿ, ಭೂತ ಮಾಡಿದಂತೆ ಮಾಡುವುದು ಆ ದೈವಗಳಿಗೆ ಮತ್ತು ಅದನ್ನು ನಂಬುವವರಿಗೆ ಮಾಡುವ ಅವಮಾನ.
ಇಂಥದ್ದೇ ಸಂಗತಿಯೊಂದು ಖಾಸಗಿ ಕಾರ್ಯಕ್ರಮದಲ್ಲಿ ನಡೆದಿದ್ದು, ಈ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಬಳಿಕ ಓರ್ವ ವ್ಯಕ್ತಿ ಈ ಕಾರ್ಯಕ್ರಮ ನಡೆಸಿದ ಮಹಿಳೆಗೆ ಕಾಲ್ ಮಾಡಿ, ಈ ರೀತಿ ನೃತ್ಯ ಮಾಡಿರುವ ಬಗ್ಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ತುಳುನಾಡಿನ ಕಡೆ ಶ್ರಾವಣ ಮಾಸವನ್ನು ಆಟಿ ಮಾಸವೆಂದು ಆಚರಿಸುತ್ತಾರೆ. ಹಾಗಾಗಿ ಆಟಿ ಕೂಟವೆಂಬ ಕಾರ್ಯಕ್ರಮ ಹಲವೆಡೆ ಇರುತ್ತದೆ. ಈ ಆಟಿ ಕೂಟದಲ್ಲಿ ಹಲಸಿನ ಖಾದ್ಯ, ಕೆಸುವಿನ ಸೊಪ್ಪಿನ ಖಾದ್ಯವನ್ನು ಮಾಡಿ ತರಲಾಗುತ್ತದೆ. ಕೆಲವು ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡಲಾಗುತ್ತದೆ.
ಇದೇ ರೀತಿ ಹಾಲ್ನಲ್ಲಿ ನಡೆದ ಆಟಿ ಕೂಟದಲ್ಲಿ ಓರ್ವ ವ್ಯಕ್ತಿ ಸ್ಟೇಜ್ ಮೇಲೆ ಬಂದು ಹಾಡು ಹಾಡಿದ್ದು, ಓರ್ವ ಹೆಂಗಸು ಈ ಹಾಡಿಗೆ ದೈವ ನರ್ತಕರಂತೆ ಹೆಜ್ಜೆ ಹಾಕಿದ್ದಾರೆ. ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಹಲವರು ಆಕ್ರೋಶ ಹೊರಹಾಕಿದ್ದಾರೆ. ಇದು ದೈವಗಳಿಗೆ, ತುಳುವರ ನಂಬಿಕೆಗೆ ಎಸಗಿದ ಅವಮಾನ. ಇದಕ್ಕಾಗಿ ಕ್ಷಮೆ ಕೇಳಿ ಎಂದು ಹಲವರು ಹೇಳಿದ್ದಾರೆ.