Horoscope: ಸಾಮಾನ್ಯವಾಗಿ ಸಣ್ಣ ಮಕ್ಕಳು ಹಿರಿಯರಿಗೂ ನೀನು ಎಂದು ಮಾತನಾಡಿಸುತ್ತಾರೆ. ಆದರೆ ದಿನಗಳೆದಂತೆ, ತಂದೆ ತಾಯಿ ಹೇಳಿಕೊಟ್ಟಾಗ, ಮಕ್ಕಳು ಗೌರವಿಸುವುದನ್ನು ಕಲಿಯುತ್ತಾರೆ. ಈ ರೀತಿ ಗೌರವಿಸುವುದನ್ನು ಕಲಿತ ಬಳಿಕ, ಮನೆಗೆಲಸದವರಿಂದ ಹಿಡಿದು, ಮನೆ ಹಿರಿಯರ ತನಕ ಎಲ್ಲರಿಗೂ ಗೌರವಿಸಿ, ಮಾತನಾಡುವ ಗುಣ ಬರುವುದು ತುಂಬಾ ಅಪರೂಪ. ಅಂಥ ಅಪರೂಪದ ರಾಶಿಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಮೇಷ ರಾಶಿ : ಮೇಷ ರಾಶಿಯವರು ಬುದ್ಧಿವಂತರು, ತಿಳುವಳಿಕೆ ಇರುವವರು ಆಗಿರುತ್ತಾರೆ. ಎಲ್ಲಿ ಹೇಗೆ ನಡೆದುಕೊಳ್ಳಬೇಕು. ಯಾರೊಂದಿಗೆ ಹೇಗೆ ಮಾತನಾಡಬೇಕು. ಎಷ್ಟು ಮಾತನಾಡಬೇಕು, ಹೇಗೆ ಗೌರವಿಸಬೇಕು ಎಂದು ತಿಳಿದಿರುತ್ತಾರೆ. ಇವರು ಹಿರಿಯರಿಂದ, ಕಿರಿಯರವರೆಗೆ, ಮನೆಗೆಲಸದವರಿಂದ ಮನೆ ಹಿರಿಯರಿಗೆ ಎಲ್ಲರಿಗೂ ಗೌರವ ನೀಡಿ, ಮಾತನಾಡುತ್ತಾರೆ.
ತುಲಾ ರಾಶಿ: ತುಲಾ ರಾಶಿಯವರು ಮಾತಿನಲ್ಲೇ ಮೋಡಿ ಮಾಡುವ ಗುಣ ಹೊಂದಿದವರು. ಮಾತಿನ ಮೂಲಕವೇ ಆಕರ್ಷಿಸುವ ಗುಣ ಹೊಂದಿರುವವರು ಈ ರಾಶಿಯವರು. ಆದರೆ ಹಿರಿಯರಿಗೆ ಗೌರವಿಸುವ ಬುದ್ಧಿ ಇವರದ್ದಾಗಿರುತ್ತದೆ. ಅಣ್ಣ, ಅಕ್ಕ, ಹೋಗಿ, ಬನ್ನಿ ಎಂದು ಎಲ್ಲರನ್ನೂ ಮಾತನಾಡಿಸಿ, ಎಲ್ಲರನ್ನೂ ಗೌರವಿಸುವ ರಾಶಿಯವರು ಇವರು.
ಕಟಕ ರಾಶಿ : ಕಟಕ ರಾಶಿಯವರು ತಾಳ್ಮೆ, ಸಹನೆಯಿಂದ ಇರುವವರು. ಇನ್ನೊಬ್ಬರ ಮನಸ್ಸನ್ನು ಅರಿತು ಬದುಕುವ ಗುಣ ಇವರಿಗಿರುತ್ತದೆ. ದೇವರಲ್ಲಿ ಹೆಚ್ಚಿನ ನಂಬಿಕೆ ಹೊಂದಿರುವ ಇವರು, ಬೇರೆಯವರು ತಮಗೆ ಗೌರವ ನೀಡಲಿ, ಬಿಡಲಿ ಎದುರಿನವರಿಗೆ ಗೌರವಿಸುವ ಸಂಸ್ಕಾರ ಹೊಂದಿರುತ್ತಾರೆ. ಎದುರಿನವರಿಗೆ ಗೌರವ ಪಡೆಯುವ ಯೋಗ್ಯತೆ ಇಲ್ಲದಿದ್ದರೂ, ಗೌರವಿಸುವ ಕರ್ತವ್ಯ ನಮ್ಮದು ಅನ್ನೋ ನಂಬಿಕೆ ಉಳ್ಳವರು ಈ ಕಟಕ ರಾಶಿಯವರು.
ಮೀನ ರಾಶಿ : ಮೀನ ರಾಶಿಯವರು ಮೃದು ಸ್ವಭಾವದವರು. ಮತ್ತು ಇವರಿಗೆ ಆದ ಅವಮಾನವನ್ನು ಸದಾ ನೆನಪಿನಲ್ಲೇ ಇರಿಸಿಕೊಳ್ಳುವವರು. ಹಾಗಾಗಿ ಇವರು ಇನ್ನೊಬ್ಬರಿಗೆ ಅವಮಾನ ಮಾಡುವ ಗುಣ ಹೊಂದಿರುವುದಿಲ್ಲ. ಶಾಂತ ಸ್ವಭಾವದವರಾದ ಇವರು ಎಲ್ಲರಿಗೂ ಗೌರವಿಸುತ್ತಾರೆ. ಎಲ್ಲರನ್ನೂ ಗೌರವದಿಂದ ಮಾತನಾಡಿಸುತ್ತಾರೆ.