ಕನ್ನಡ ಚಿತ್ರರಂಗದ ಒಳಿತಿಗಾಗಿ ಕಲಾವಿದರ ಸಂಘದಲ್ಲಿ ಬುಧವಾರವಷ್ಟೇ ಹೋಮ, ಹವನ ಹಾಗೂ ನಾಗರಾಧನೆ ಮಾಡಲಾಗಿತ್ತು. ಇದಾದ ಎರಡು ದಿನದಲ್ಲೇ ಕನ್ನಡ ಚಿತ್ರರಂಗಕ್ಕೆ ಗುಡ್ನ್ಯೂಸ್ ಸಿಕ್ಕಿದೆ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಕನ್ನಡಕ್ಕೆ ಬರೋಬ್ಬರಿ 7 ಪ್ರಶಸ್ತಿಗಳು ಲಭಿಸಿವೆ. ಹೀಗಾಗಿ, ಕನ್ನಡ ಚಿತ್ರರಂಗ ಮಾಡಿದ್ದ ಹೋಮ, ಹಮನ ಹಾಗೂ ನಾಗರಾಧನೆ ಫಲಕೊಟ್ಟಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನರು ಮಾತನಾಡಿಕೊಳ್ತಿದ್ದಾರೆ.
2020ರಲ್ಲಿ ತೆರೆ ಕಂಡಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾಗಳು ಭರ್ಜರಿ ಸೌಂಡ್ ಮಾಡಿತ್ತು. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಕಾಂತಾರ ಸಿನಿಮಾಕ್ಕಾಗಿ ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ, ಹಾಗೂ ರಾಕಿ ಭಾಯ್ ನಟಿಸಿದ್ದ ಕೆಜಿಎಫ್2 ಚಿತ್ರಕ್ಕೂ ಎರಡು ರಾಷ್ಟ್ರೀಯ ಪ್ರಶಸ್ತಿ ದೊರಕಿವೆ.
ಕಾಂತಾರ ಸಿನಿಮಾ ವೀಕ್ಷಿಸಿದಾಗಲೇ ರಿಷಬ್ ಶೆಟ್ಟಿ ನಟನೆಗೆ ಫಿದಾ ಆಗದವರೇ ಇಲ್ಲ. ಸಿನಿಮಾದ ಕ್ಲೈಮ್ಯಾಕ್ಸ್ ಅಂತೂ ವಾವ್ ಅನ್ನೋ ಲೆವೆಲ್ನಲ್ಲಿ ಇತ್ತು. ಸಿನಿಮಾ ವೀಕ್ಷಿಸಿದ್ದ ಪ್ರತಿಯೊಬ್ಬ ಅಭಿಮಾನಿಯೂ ಹೇಳಿದ್ದೊಂದೇ ಮಾತು. ಈ ಸಿನಿಮಾಗಾಗಿ ರಿಷಬ್ಗೆ ನ್ಯಾಷನಲ್ ಅವಾರ್ಡ್ ಬರಲೇಬೇಕು ಅಂತ. ಅಭಿಮಾನಿಗಳು ಅಂದುಕೊಂಡಂತೆ ರಿಷಬ್ ಶೆಟ್ಟಿಗೆ ನ್ಯಾಷನಲ್ ಫಿಲ್ಮ್ ಅವಾರ್ಡ್‌ನಲ್ಲಿ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಜೊತೆಗೆ ಅತ್ಯುತ್ತಮ ಮನರಂಜನಾ ಚಿತ್ರದ ಗರಿಯೂ ಚಿತ್ರತಂಡಕ್ಕೆ ಸಿಕ್ಕಿದೆ. ಬೆಸ್ಟ್ ಆ್ಯಕ್ಟರ್ ಅವಾರ್ಡ್ ರೇಸ್ನಲ್ಲಿ ಭಾರತದ ವಿವಿಧ ಚಿತ್ರರಂಗದ ಹೆಸರಾಂತ ನಟರು ರೇಸ್ನಲ್ಲಿರುತ್ತಾರೆ. ಅವರನ್ನೆಲ್ಲಾ ಹಿಂದಿಕ್ಕಿ ಕಾಂತಾರ ಚಿತ್ರಕ್ಕೆ ಎರಡು ನ್ಯಾಷನಲ್ ಅವಾರ್ಡ್ ಬಂದಿರೋದು ಕನ್ನಡ ಚಿತ್ರರಂಗದ ಜೊತೆಗೆ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಇನ್ನೂ, ಬೆಸ್ಟ್ ಆ್ಯಕ್ಟರ್ ಅವಾರ್ಡ್ ಯಶಸ್ಸನ್ನ, ರಿಷಬ್ ಶೆಟ್ಟಿಯ ಈ ಚಿತ್ರದಲ್ಲಿ ಮೊದಲು ನಟಿಸಬೇಕಿದ್ದ ಪುನೀತ್ ರಾಜ್ಕುಮಾರ್ಗೆ, ದೈವಕ್ಕೆ ಹಾಗೂ ಚಿತ್ರತಂಡಕ್ಕೆ ಅರ್ಪಿಸಿದ್ದಾರೆ.
ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ರಾಕಿಂಗ್ ಸ್ಟಾರ್ ನಟನೆಯ ಕೆಜಿಎಫ್2. ಈ ಚಿತ್ರಕ್ಕೆ ಎರಡು ನ್ಯಾಷನಲ್ ಅವಾರ್ಡ್ಗಳು ಸಿಕ್ಕಿವೆ. ಅತ್ಯುತ್ತಮ ಕನ್ನಡ ಚಿತ್ರ ಹಾಗೂ ಸಾಹಸ ವಿಭಾಗದಲ್ಲಿ ಎರಡು ನ್ಯಾಷನಲ್ ಅವಾರ್ಡ್ ಸಿಕ್ಕಿದೆ.
ನ್ಯಾಷನಲ್ ಫಿಲ್ಮ್ ಅವಾರ್ಡ್‌ನಲ್ಲಿ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಸಿಕ್ಕಿದ್ದಕ್ಕಾಗಿ ರಿಷಭ್ ಶೆಟ್ಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ರಾಕಿಂಗ್ ಸ್ಟಾರ್ ಯಶ್, ಜೂನಿಯರ್ ಎನ್ಟಿಆರ್ ಸೇರಿದಂತೆ ಹಲವಾರು ನಟರು ಶುಭಾಶಯಗಳನ್ನ ಕೋರಿದ್ದಾರೆ. ಒಟ್ನಲ್ಲಿ ಕಾಂತರ, ಕೆಜಿಎಫ್ ಸೇರಿದಂತೆ ಕನ್ನಡ ಚಿತ್ರರಂಗಕ್ಕೆ ಒಟ್ಟು 7 ಪ್ರಶಸ್ತಿಗಳು ಬಂದಿರೋದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.
*ಸ್ವಾತಿ.ಎಸ್.