ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದಿದ್ದರೆ ಏನಾಗತ್ತೆ..? ಅಜೀರ್ಣತೆ ಕಾಡಲು ಕಾರಣವೇನು..?

Health Tips: ನಮ್ಮ ಆರೋಗ್ಯ ಸರಿಯಾಗಿ ಇರಬೇಕು ಅಂದ್ರೆ, ನಾವು ಉತ್ತಮವಾದ, ಹೆಚ್ಚು ಎಣ್ಣೆ, ಉಪ್ಪು, ಖಾರ, ಮಸಾಲೆ ಬಳಸದ ಪದಾರ್ಥ ಸೇವನೆ ಮಾಡಬೇಕು. ಅಷ್ಟೇ ಅಲ್ಲದೇ, ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸಬೇಕು. ನಾವು ಆಹಾಾರವನ್ನು ಸರಿಯಾದ ಸಮಮಯಕ್ಕೆ ಸೇವಿಸದಿದ್ದಲ್ಲಿ, ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಹಾಗಾದ್ರೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿದ್ದರೆ ಏನಾಗತ್ತೆ ಅಂತಾ ತಿಳಿಯೋಣ ಬನ್ನಿ..

ಮೊದಲನೇಯದಾಗಿ ತಡವಾಗಿ ಊಟ ಮಾಡಿದಾಗ, ನಮ್ಮ ದೇಹದಲ್ಲಿ ಅಜೀರ್ಣ ಸಮಸ್ಯೆ ಕಾಡುತ್ತದೆ. ಆ ನಮ್ಮ ದೇಹದಲ್ಲಿ ಬೇರೆ ಬೇರೆ ರೋಗಗಳು ಉದ್ಭವಿಸುತ್ತದೆ. ನಮ್ಮ ಹೊಟ್ಟೆ ಖಾಲಿ ಇದ್ದಾಗ, ಆ್ಯಸಿಡ್ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಇದೇ ಆ್ಯಸಿಡ್ ನಿಮ್ಮ ಇಡೀ ಜೀರ್ಣಾಂಗವನ್ನು ಸುಡುತ್ತಾ ಬರುತ್ತದೆ. ಆಗ ಜೀರ್ಣಾಂಗ ಜೀರ್ಣಕ್ರಿಯೆ ನಡೆಸಲು ಯೋಗ್ಯವಾಗಿರುವುದಿಲ್ಲ.

ಅಲ್ಲದೇ, ನಾವು ಸೇವಿಸುವ ಆಹಾರ, ನಾವಿರುವ ಪರಿಸರಕ್ಕೆ, ನಾವು ಮಾಡುವ ಕೆಲಸಕ್ಕೆ, ವಿರುದ್ಧವಾಗಿದ್ದರೂ ಕೂಡ ನಾವು ಸೇವಿಸಿದ ಆಹಾರಗಳು ಅಜೀರ್ಣವಾಗುತ್ತ ಹೋಗುತ್ತದೆ. ಉದಾಹರಣೆಗೆ ನಾವು ಮಲೆನಾಡು ಭಾಗದಲ್ಲಿ, ಮಂಗಳೂರು ಭಾಗದಲ್ಲಿ ಇದ್ದು ಉತ್ತರಕರ್ನಾಟಕ ಶೈಲಿ ಊಟ ಮಾಡಿದರೆ, ಅದು ನಮ್ಮ ದೇಹಕ್ಕೆ ಹಿಡಿಸುವುದು ಕಷ್ಟ. ಅದೇ ಉತ್ತರಕರ್ನಾಟಕದಲ್ಲಿದ್ದು, ಮಂಗಳೂರು ಶೈಲಿಯ ಊಟ ಸೇವಿಸಿದರೆ, ಅದು ಸಮವಲ್ಲ. ಹಾಾಗಾಗಿ ಆಯಾ ವಾತಾವರಣದ ಶೈಲಿಗೆ ತಕ್ಕಂತೆ ಊಟ ಮಾಡಬೇಕು.

ಇನ್ನು ಹೊಟ್ಟೆ ತುಂಬ ತಿಂದು, ಕೂತಲ್ಲೇ ಕೂತು ಕೆಲಸ ಮಾಡಿದರೆ, ಅದು ಜೀರ್ಣವಾಗುವುದಿಲ್ಲ. ಕೂತಲ್ಲೇ ಕೂತು ಕೆಲಸ ಮಾಡುವವರು ಲೈಟ್ ಆಗಿ ಆಹಾರ ಸೇವನೆ ಮಾಡಬೇಕು. ಇನ್ನು ಹೊಟ್ಟೆ ತುಂಬ ಊಟ ಮಾಡಿದರೆ, ಅದಕ್ಕೆ ತಕ್ಕ ಹಾಗೆ ಕೆಲಸ ಮಾಡಬೇಕು. ಇಲ್ಲವಾದಲ್ಲಿ ತಿಂದ ಅನ್ನ ಸರಿಯಾಗಿ ಜೀರ್ಣವಾಗದೇ, ಬೊಜ್ಜು ಬೆಳೆಯುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author