Health Tips: ಬಿಸಿಲು ಹೆಚ್ಚಾದಾಗ ಅಥವಾ ಚಳಿಗಾಲದಲ್ಲಿ ನಮ್ಮ ಚರ್ಮ ಸುಕ್ಕುಗಟ್ಟುತ್ತದೆ. ಆ ಸಮಯದಲ್ಲಿ ನಾವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್, ಲೋಶನ್ ಮೊರೆ ಹೋಗುತ್ತೇವೆ. ಆದರೆ ನಾವು ಬರೀ ಚರ್ಮದ ಮೇಲೆ ಆರೈಕೆ ಮಾಡಿದರೆ, ಸಾಕಾಗುವುದಿಲ್ಲ. ಬದಲಾಗಿ ದೇಹದೊಳಗೆ ನಾವು ಯಾವ ರೀತಿಯ ಬದಲಾವಣೆ ಮಾಡಿಕೊಂಡರೆ, ನಮ್ಮ ಚರ್ಮ ಆರೋಗ್ಯಕರವಾಗಿರುತ್ತದೆ ಅಂತಾ ತಿಳಿಯಬೇಕು.
ನಾವು ನೀರು ಕುಡಿಯುವ ಪ್ರಮಾಣ, ಹಣ್ಣು ಸೇವಿಸುವ ಪ್ರಮಾಣ ಅಥವಾ ಆರೋಗ್ಯಕರ ಆಹಾರ ಸೇವಿಸುವ ಪ್ರಮಾಣ ಕಡಿಮೆಯಾದಾಗ, ಈ ರೀತಿ ನಮ್ಮ ಚರ್ಮ ಸುಕ್ಕುಗಟ್ಟುತ್ತದೆ. ಉದಾಹರಣೆಗೆ ನೀವು ನಟ, ನಟಿಯರನ್ನೇ ತೆಗೆದುಕೊಳ್ಳಿ. ಅವರು 50 ವಯಸ್ಸು ದಾಟಿದರೂ ಯಂಗ್ ಆಗಿ ಇರುತ್ತಾರೆ. ಅವರ ಮುಖ ಚಳಿಗಾಲ, ಬಿಸಿಲು ಹೆಚ್ಚಾದ ಸಮಯ, ಅಥವಾ ವಯಸ್ಸಾದಾಗಲೂ ಸುಕ್ಕುಗಟ್ಟುವುದಿಲ್ಲ.
ಏಕೆಂದರೆ, ಅವರು ಆರೋಗ್ಯದ ಬಗ್ಗೆ ಅಷ್ಟು ಗಮನ ನೀಡುತ್ತಾರೆ. ಮೊಳಕೆ ಕಾಳು, ಹಣ್ಣು, ತರಕಾರಿ, ಸೊಪ್ಪು, ಎಳನೀರು, ಹಣ್ಣಿನ ರಸ, ನೀರು ಈ ಎಲ್ಲದರ ಸೇವನೆಯನ್ನು ಚೆನ್ನಾಗಿ ಮಾಡುತ್ತಾರೆ. ಜೊತೆಗೆ ಚರ್ಮದ ಮೇಲೆಯೂ ಮಾಡಬೇಕಾದ ಆರೈಕೆ ಮಾಡುತ್ತಾರೆ. ಹಾಗಾಗಿ ಅವರ ಚರ್ಮ ಅಷ್ಟು ಚೆಂದವಾಗಿ ಇರುತ್ತದೆ. ಆರೋಗ್ಯಕರ ಆಹಾರ ಸೇವನೆ ಮತ್ತು ಚೈತನ್ಯದಾಯಕ ಜೀವನ ಅವರ ಆರೋಗ್ಯ ಮತ್ತು ಸೌಂದರ್ಯದ ರಕ್ಷಣೆ ಮಾಡುತ್ತದೆ.
ನಮ್ಮ ಚರ್ಮವೂ ಇದೇ ರೀತಿ ಆರೋಗ್ಯವಾಗಿರಬೇಕು ಅಂದ್ರೆ, ನಾವು ಕುಡಿಯುವ ನೀರಿನ ಪ್ರಮಾಣ ಹೆಚ್ಚಾಗಬೇಕು. ಅಲ್ಲದೇ, ಜಂಕ್ ಫುಡ್, ಮಸಾಲೆ ಪದಾರ್ಥ, ಬೀದಿ ಬದಿ ಸಿಗುವ ತಿಂಡಿಗಳ ಸೇವನೆಯ ಪ್ರಮಾಣ ಕಡಿಮೆ ಮಾಡಬೇಕು. ಮನೆಯಲ್ಲೇ ತಯಾರಿಸಿದ ಜ್ಯೂಸ್, ಮಜ್ಜಿಗೆ, ಸ್ಮೂದಿ, ಎಳನೀರು, ನೀರು ಸೇವನೆ ಮಾಡಬೇಕು.
ಇನ್ನು ಕಾಫಿ, ಟೀ ಸೇವನೆ ಮತ್ತೆ ಕೆಲವರು ಮದ್ಯಪಾನ ಸೇವನೆ ಮಾಡುತ್ತಾರೆ. ಇದೆಲ್ಲವೂ ಆರೋಗ್ಯವನ್ನು ಹಾಳುಮಾಡುತ್ತದೆ. ಅಲ್ಲದೇ, ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್‌ಗಳು, ಕೂಲ್ ಡ್ರಿಂಕ್ಸ್‌ಗಳ ಸೇವನೆಯಿಂದ ನಿಮ್ಮ ಆರೋಗ್ಯ ಮತ್ತು ಸೌಂದರ್ಯ ಎಲ್ಲವೂ ಹಾಳಾಗುತ್ತದೆ. ಹಾಗಾಗಿ ಆರೋಗ್ಯಕರ ಪೇಯ ಮತ್ತು ಆಹಾರ ಸೇವನೆ ಅತ್ಯಗತ್ಯ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.