Gangavatthi News: ಗಂಗಾವತಿಯಲ್ಲಿ ಬಿಜೆಪಿ ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಹೆಚ್ಚು ಬೆಂಬಲವಿದ್ದರೂ ಕೂಡ ಕಾಂಗ್ರೆಸ್ ಪಕ್ಷ ಸೋಲನಪ್ಪಿದೆ.
ಅಧ್ಯಕ್ಷರಾಗಿ ಬಿಜೆಪಿಯ ಮೌಲಸಾಬ್, ಉಪಾಧ್ಯಕ್ಷರಾಗಿ ಶರಣಬಸವೇಶ್ವರ ಕ್ಯಾಂಪಿನ ಪಾರ್ವತಮ್ಮ ದೊಡ್ಮನಿ ಗೆಲುವು ಸಾಧಿಸಿದ್ದಾರೆ. ಗಾಲಿ ಜನಾರ್ಧನ ರೆಡ್ಡಿಯವರ ಮತ ಸೇರಿ 26 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ನಿಂದ ಗದ್ವಾಲ ಕಾಶಿಂಸಾಬ್, ಉಪಾಧ್ಯಕ್ಷ ಸ್ಥಾನಕ್ಕೆ ಹುಲಿಗೆಮ್ಮ ಸ್ಪರ್ಧಿಸಿ, ಕಡಿಮೆ ಬಹುಮತ ಬಂದ ಕಾರಣ ಸೋಲನ್ನಪ್ಪಿದ್ದಾರೆ. ಇನ್ನು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗಾಲಿ ಜನಾರ್ಧನ ರೆಡ್ಡಿ, ಮಾಜಿ ಸಂಸದ ಶಿವರಾಮ ಗೌಡ ಸೇರಿ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.




