Spiritual: ದೇವರ ಮನೆಯಲ್ಲಿ ಇಡುವ ಕೆಲವು ವಸ್ತುಗಳನ್ನು ಹಾಗೆ ಬಿಡುವಂತಿಲ್ಲ. ಅದಕ್ಕೆ ಪ್ರತಿದಿನ ಪೂಜೆ, ನೈವೇದ್ಯ ಆಗಲೇಬೇಕು. ಅಲ್ಲದೇ ಮಡಿಯಿಂದ ಪೂಜೆ ಸಲ್ಲಿಸಬೇಕು. ಹಾಗಿದ್ದರೆ ಮಾತ್ರ, ಅಂಥ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು. ಹಾಗಾದ್ರೆ ಎಂಥ ವಸ್ತುವನ್ನು ನಿಯಮ ಪಾಲಿಸದೇ ಮನೆಯಲ್ಲಿ ಇರಿಸುವಂತಿಲ್ಲ ಅಂತ ತಿಳಿಯೋಣ ಬನ್ನಿ..
ಸಾಲಿಗ್ರಾಮ: ಸಾಲಿಗ್ರಾಮದಲ್ಲಿ ಎರಡು ವಿಧ. ಶಿವ ಸಾಲಿಗ್ರಾಮ ಮತ್ತು ವಿಷ್ಣು ಸಾಲಿಗ್ರಾಮ. ವಿಷ್ಣು ಸಾಲಿಗ್ರಾಮವನ್ನು ಮಡಿಯಿಂದ ಪೂಜಿಸಿ, ಹಾಲಿನ ಅಭಿಷೇಕ, ನೀರಿನ ಅಭಿಷೇಕ ಮಾಡಿದರೆ ಸಾಕು. ಆದರೆ ಶಿವ ಸಾಲಿಗ್ರಾಮವಿದ್ದಲ್ಲಿ, ಆ ವಸ್ತುವಿರುವ ಜಾಗದಲ್ಲಿ ನಾನ್ವೆಜ್ ತಿನ್ನುವವರು ಇರಬಾರದು. ಆ ಕೋಣೆಗೆ ನಾನ್ವೆಜ್ ತಿಂದವರು ಬರಬಾರದು. ಅಲ್ಲದೇ, ಪ್ರತಿದಿನ ಮಡಿಯಲ್ಲಿ ಅನ್ನ ಮಾಡಿ, ನೈವೇದ್ಯ ಮಾಡಬೇಕು. ಹೆಣ್ಣು ಮಕ್ಕಳು ಆ ಮನೆಯಲ್ಲಿ ಋತುಮತಿಯಾದರೆ, ಮುಟ್ಟಿನ ನಿಯಮಗಳನ್ನು ಪಾಲಿಸಲೇಬೇಕು. ಇಲ್ಲವಾದಲ್ಲಿ, ಆರೋಗ್ಯದಲ್ಲಿ ಏರುಪೇರು, ಮನೆಯಲ್ಲಿ ಸದಾ ಜಗಳ ಸೇರಿ ಹಲವು ಸಮಸ್ಯೆಗಳು ಉದ್ಭವಿಸುತ್ತದೆ.
ರುದ್ರಾಕ್ಷಿ: ರುದ್ರಾಕ್ಷಿಯಲ್ಲಿ ಹಲವು ವಿಧಗಳಿದೆ. ಏಕಮುಖ, ದ್ವಿಮುಖ, ತ್ರಿಮುಖ, ಚತುರ್ಮುಖ, ಪಂಚಮುಖಿ ರುದ್ರಾಕ್ಷಿ. ನೀವು ಪ್ಯೂರ್ ರುದ್ರಾಕ್ಷಿ ಧರಿಸಿದರೆ, ಅದರ ಪಾಲನೆ ಕೂಡ ಮಾಡಬೇಕು. ಹೆಣ್ಣು ಮಕ್ಕಳನ್ನು ಮುಟ್ಟಿಸಿಕೊಳ್ಳಬಾರದು. ನಾನ್ವೆಜ್ ಮುಟ್ಟಬಾರದು, ತಿನ್ನಬಾರದು. ಸಾವಿನ ಮನೆಗೆ ಹೋಗಬಾರದು. ರುದ್ರಾಕ್ಷಿಗೆ ಗಲೀಜು ಸೋಕದ ಹಾಗೆ ನೋಡಿಕೊಳ್ಳಬೇಕು. ಮಲಗುವಾಗ ರುದ್ರಾಕ್ಷಿ ಧರಿಸಬಾರದು. ಹೀಗೆ ಅನೇಕ ನಿಯಮಗಳಿದೆ. ಜೊತೆಗೆ ಏಕಮುಖ ರುದ್ರಾಕ್ಷಿ ಸಿಗುವುದು ತುಂಬಾನೇ ಅಪರೂಪ. ಇದನ್ನು ಮನೆಯಲ್ಲಿರಿಸಿರಬಾರದು. ಇರಿಸಿದರೆ, ಅದಕ್ಕೆ ತಕ್ಕ ಪೂಜೆ ಪುನಸ್ಕಾರ, ನೈವೇದ್ಯ, ಅಭಿಷೇಕವಾಗಲೇಬೇಕು.
ಉಳಿದಂತೆ, ದೊಡ್ಡ ದೊಡ್ಡ ದೇವರ ವಿಗ್ರಹಗಳನ್ನು, ಯಾರೋ ಪೂಜಿಸಿ ಕೊಟ್ಟ ಮೂರ್ತಿ, ಕಲ್ಲುಗಳನ್ನು ನಾವು ಮನೆಗೆ ತಂದು ಪೂಜಿಸಬಾರದು. ದೊಡ್ಡ ದೊಡ್ಡ ವಿಗ್ರಹಗಳಿಗೆ ಪ್ರತಿದಿನ ಅಭಿಷೇಕ, ಪೂಜೆ, ನೈವೇದ್ಯವಾಗುವುದು ತುಂಬಾ ಮುಖ್ಯ. ಅದೇ ರೀತಿ ಬೇರೆಯವರ ಮನೆಯ ದೇವರನ್ನು ನಾವು ತಂದು ಪೂಜಿಸಿದರೆ, ಅದಕ್ಕೆ ತಕ್ಕಂತೆ ಮಡಿ ಪಾಲಿಸಬೇಕು. ಇಲ್ಲವಾದಲ್ಲಿ ಮನೆಯ ನೆಮ್ಮದಿ ಹಾಳಾಗುತ್ತದೆ.