Sunday, October 5, 2025

Latest Posts

ಊಟದೊಂದಿಗೆ ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯದ್ಬುತ ಪ್ರಯೋಜನ

- Advertisement -

Health Tips: ಊಟ ಮಾಡುವಾಗ ಹಸಿ ತರಕಾರಿಗಳನ್ನು ತಿನ್ನುವುದು ಹಿರಿಯರಿಂದ ಬಂದ ಆರೋಗ್ಯ ಪದ್ಧತಿ. ಹಾಗಾಗಿಯೇ ಹಿಂದಿನ ಕಾಲದವರು ವಯಸ್ಸಾದರೂ, ಅದೆಷ್ಟು ಚೈತನ್ಯದಾಯಕವಾಗಿರುವುದನ್ನು ನಾವು ನೋಡುತ್ತೇವೆ. ಅದರಲ್ಲೂ ಊಟ ಮಾಡುವಾಗ ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಹಸಿ ಈರುಳ್ಳಿ ತಿನ್ನುವುದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ನೀವು ತಿಂದ ಆಹಾರ, ಸರಿಯಾಗಿ ಜೀರ್ಣವಾಗದೇ, ಹೊಟ್ಟೆಯ ಸಮಸ್ಯೆ ಆಗುತ್ತಿದ್ದರೆ, ಅಂಥವರು ಹಸಿ ಈರುಳ್ಳಿ ಸೇವನೆ ಮಾಡಬೇಕು. ಇದರಲ್ಲಿ ನಾರಿನಂಶ ಇರುವ ಕಾರಣ, ಈರುಳ್ಳಿ ಸೇವನೆಯಿಂದ ಮಲಬದ್ಧತೆ ಸಮಸ್ಯೆಗೂ ಮುಕ್ತಿ ಸಿಗುತ್ತದೆ.

ಈರುಳ್ಳಿ ಸೇವನೆಯಿಂದ ದೇಹದಲ್ಲಿ ಉಷ್ಣತೆ ಹೆಚ್ಚಿದ್ದರೆ, ಅದು ಕಡಿಮೆಯಾಗಿ, ದೇಹ ತಂಪಾಗುತ್ತದೆ. ಹೊಟ್ಟೆ ಉರಿ, ಉರಿ ಮೂತ್ರ ಸೇರಿ, ಉಷ್ಣತೆ ಹೆಚ್ಚಾದಾಗ, ಯಾವ್ಯಾವ ಆರೋಗ್ಯ ಸಮಸ್ಯೆ ಬರುತ್ತದೆಯೋ, ಅಂಥ ಸಮಸ್ಯೆಗೆಲ್ಲ ಪರಿಹಾರ ಈರುಳ್ಳಿ ಸೇವನೆ.

ಈರುಳ್ಳಿಯಲ್ಲಿ ವಿಟಾಮಿನ್ ಸಿ ವಿಟಾಮಿನ್ ಬಿ6 ಪ್ರಮಾಣ ಹೆಚ್ಚಾಗಿದ್ದು, ಇದರ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನರದ ಆರೋಗ್ಯವೂ ಚೆನ್ನಾಗಿರುತ್ತದೆ.

ಈರುಳ್ಳಿ ಸೇವನೆಯಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಕಂಟ್ರೋಲಿನಲ್ಲಿ ಇರುತ್ತದೆ. ಹಾಗಾಗಿ ಶುಗರ್ ಇದ್ದವರು, ಪ್ರತಿದಿನ ಸಣ್ಣ ತುಂಡು ಈರುಳ್ಳಿಯನ್ನು ಊಟದ ಜೊತೆ ಸೇವಿಸಿದರೆ, ಉತ್ತಮ.

ಇನ್ನು ಪುರುಷತ್ವ ಸಮಸ್ಯೆ, ಲೈಂಗಿಕ ಸಮಸ್ಯೆ ಇದ್ದವರು ಈರುಳ್ಳಿ ಸೇವನೆ ಮಾಡಿದ್ದಲ್ಲಿ, ಆ ಎಲ್ಲ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಮೂಳೆಗಳ ಆರೋಗ್ಯ ಸರಿಯಾಗಿರಿಸಲು ಈರುಳ್ಳಿ ಸಹಕಾರಿಯಾಗಿದೆ.

- Advertisement -

Latest Posts

Don't Miss