ಕಣ್ಣಿನ ಸುತ್ತ ಕಪ್ಪಾಗಿದ್ಯಾ! ಈ ಸಮಸ್ಯೆಗೆ ಪರಿಹಾರೇನು?

Health Tips: ಸೌಂದರ್ಯ ಅನ್ನೋದು ಈಗಿನ ಕಾಲದಲ್ಲಿ ತುಂಬಾನೇ ಮುಖ್ಯವಾಗಿರುವ ವಿಷಯ. ಜನ ತಮ್ಮ ಮುಖವನ್ನು ಸುಂದರವಾಗಿ ಇರಿಸಿಕೊಳ್ಳೋಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ರೀತಿಯ ಪ್ರಾಡಕ್ಟ್‌ಗಳನ್ನು ಬಳಸುತ್ತಿದ್ದಾರೆ.

ಅಷ್ಟೇ ಅಲ್ಲದೇ, ಸೋಶಿಯಲ್ ಮೀಡಿಯಾ ಕ್ರೇಜ್ ಹೆಚ್ಚಾಗಿದ್ದು, ರೀಲ್ಸ್ ಮಾಡುವಾಗ ತಾನು ನೋಡೋಕ್ಕೆ ಚೆಂದಗಾಣಿಸಬೇಕು ಅಂತಾ ಸೌಂದರ್ಯವನ್ನು ಮೆಂಟೇನ್ ಮಾಡುತ್ತಾರೆ. ಆದರೆ ಯಾರು ಎಷ್ಟೇ ಮೇಕಪ್ ಮಾಡಿದರೂ, ಕೆಲವರ ಕಣ್ಣಿನ ಸುತ್ತ ಕಪ್ಪುಗಟ್ಟುತ್ತದೆ. ಹಾಗಾದ್ರೆ, ಇದಕ್ಕೆ ಕಾರಣವೇನು..? ಇದಕ್ಕಾಗಿ ಏನು ಪರಿಹಾರ ಮಾಡಿಕೊಳ್ಳಬಹುದು ಅಂತಾ ಪಾರಂಪರಿಕ ವೈದ್ಯರಾದ ಪವಿತ್ರ ಅವರು ವಿವರಿಸಲಿದ್ದಾರೆ.

ಡಾ.ಪವಿತ್ರಾ ಅವರು ಹೇಳುವ ಪ್ರಕಾರ, ಮಲಬದ್ಧತೆ ಸಮಸ್ಯೆ ಯಾರಿಗೆ ಇರುತ್ತದೆಯೋ, ಅಂಥವರಿಗೆ ಕಣ್ಣಿನ ಸುತ್ತಲೂ ಕಪ್ಪುಗಟ್ಟುತ್ತದೆ. ಏಕೆಂದರೆ, ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಮಾತ್ರ, ಮಲಬದ್ಧತೆ ಉಂಟಾಗುತ್ತದೆ. ಆ ವೇಳೆ ಮುಖದ ಕಳೆ ಹೋಗಿ, ಕಣ್ಣಿನ ಸುತ್ತಲೂ ಕಪ್ಪುಗಟ್ಟುತ್ತದೆ. ಹಾಗಾಗಿ ದೇಹವನ್ನು ತಂಪಾಗಿ ಇರಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.

ಇನ್ನು ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದರೆ, ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಂಥವರ ಮುಖದಲ್ಲಿ ಕಣ್ಣಿನ ಸುತ್ತಲೂ ಕಪ್ಪುಗಣ್ಣುತ್ತದೆ. ನಿದ್ರಾಹೀನತೆ ಸಮಸ್ಯೆ, ವಿಪರೀತ ಒತ್ತಡದಿಂದ ಬಲಳುತ್ತಿದ್ದವರಿಗೂ ಕೂಡ ಕಣ್ಣಿನ ಸುತ್ತಲೂ ಕಪ್ಪುಗಟ್ಟುತ್ತದೆ. ಅಷ್ಟೇ ಅಲ್ಲದೇ, ಪ್ರತಿದಿನ ಪ್ರಯಾಣ ಮಾಡುವವರು ಮತ್ತು ಹೆಚ್ಚು ಕಾಫಿ, ಟೀ ಸೇವನೆ ಮಾಡುವವರ ಕಣ್ಣಿನ ಸುತ್ತಲೂ ಕಪ್ಪಾಗುತ್ತದೆ.

ಕಣ್ಣಿನ ಸುತ್ತಲೂ ಈ ರೀತಿ ಆಗಬಾರದು ಅಂದ್ರೆ, ಚೆನ್ನಾಗಿ ನಿದ್ದೆ ಮಾಡಬೇಕು. ಹೆಚ್ಚು ನೀರು ಕುಡಿಯಬೇಕು. ಆರೋಗ್ಯಕರ ಪೇಯವಾದ ಮಜ್ಜಿಗೆ, ಹಣ್ಣಿನ ರಸ, ಎಳನೀರು ಸೇವನೆ ಮಾಡಬೇಕು. ಅಲ್ಲದೇ, ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಮಲಬದ್ಧತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಧೂಮಪಾನ, ಮದ್ಯಪಾನ ಸೇವನೆ ಮಾಡುವವರಾಗಿದ್ದರೆ, ಆ ಚಟ ಬಿಡಬೇಕು. ಅಲ್ಲದೇ, ಟೀ ಕಾಫಿ ಸೇವನೆ ಕಡಿಮೆ ಮಾಡಬೇಕು. ಒಟ್ಟಾರೆಯಾಗಿ ನಿಮ್ಮ ದೇಹವನ್ನು ಆದಷ್ಟು ತಂಪಾಗಿ ಇರಿಸಿದ್ದಲ್ಲಿ, ಈ ಸಮಸ್ಯೆಯಿಂದ ನೀವು ಮುಕ್ತಿ ಪಡೆಯಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ವೀಡಿಯೋ ನೋಡಿ.

About The Author