Horoscope: ಮನುಷ್ಯನಿಗೆ ಆಸೆ ಅನ್ನೋದು ಇರಬೇಕು. ಅದು ಮನುಷ್ಯ ಸಹಜ ಗುಣ. ಆದರೆ ದುರಾಸೆ ಇದ್ದರೆ, ಪರಿಸ್ಥಿತಿ ಹದಗೆಡುತ್ತದೆ. ಆದರೆ ಯಾವ ಮನುಷ್ಯ ತನ್ನ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು, ಇದ್ದುದರಲ್ಲೇ ಖುಷಿಯಾಗಿ ಜೀವಿಸುತ್ತಾನೋ, ಅವನನ್ನು ಯಾರೂ ನಿರಾಸೆ ಮಾಡಲು ಸಾಧ್ಯವಿಲ್ಲ. ಅಂಥ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ.
ಮಿಥುನ: ಮಿಥುನ ರಾಶಿಯವರಿಗೆ ಐಷಾರಾಮಿ ಜೀವನ ಅಂದ್ರೆ ಬಲು ಇಷ್ಟ. ಅದು ಅವರ ಅದೃಷ್ಟದಲ್ಲಿದ್ದರೆ, ಖಂಡಿತ ಅವರು ಅದನ್ನು ಅನುಭವಿಸಿಯೇ ಅನುಭವಿಸುತ್ತಾರೆ. ಆದರೆ, ಹಣಕಾಸಿನ ತೊಂದರೆ ಇದ್ದಾಗ, ಅಥವಾ ಯಾವುದೇ ವಿಷಯದಲ್ಲಿ ತೊಂದರೆ ಇದ್ದಾಗ, ಅದನ್ನು ಮನಗಂಡು ಜೀವನ ನಡೆಸಿಕೊಂಡು ಹೋಗುತ್ತಾರೆ. ಅತೀ ಆಸೆ ಮಾಡಲು ಹೋಗುವುದಿಲ್ಲ.
ಕರ್ಕಾಟಕ: ಕರ್ಕಾಟಕ ರಾಶಿಯವರಿಗೆ ಹಲವು ಆಸೆಗಳಿರುತ್ತದೆ. ಬೇರೆ ಬೇರೆ ಊರುಗಳಿಗೆ ಹೋಗಬೇಕು. ಅಲ್ಲಿನ ಆಹಾರ ಸವಿಯಬೇಕು. ಅಲ್ಲಿನ ಪ್ರಕೃತಿ ನೋಡಬೇಕು. ಹೀಗೆ ಹಲವು ಆಸೆ ಇರುತ್ತದೆ. ಆದರೆ ಇವರ ಬಳಿ ಅದೆಲ್ಲ ಆಸೆ ಪೂರೈಸಲು ಹಣವಿಲ್ಲದಿದ್ದಾಗ, ಆ ಬಗ್ಗೆ ಯೋಚಿಸುವುದನ್ನೇ ಕಡಿಮೆ ಮಾಡಿ, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅನ್ನುವ ಮಾತನ್ನು ಅನುಸರಿಸುತ್ತಾರೆ.
ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ತುಪ್ಪದ ಅನ್ನ ತಿಂದೂ ಅಭ್ಯಾಸವಿರುತ್ತದೆ. ತುಪ್ಪವಿಲ್ಲದೇ ಅನ್ನ ತಿನ್ನುವುದೂ ಗೊತ್ತಿರುತ್ತದೆ. ಹಾಗಾಗಿ ಇವರು ಸಾಲ ಮಾಡಿ ತುಪ್ಪ ತಿನ್ನುವವರಲ್ಲ. ತುಪ್ಪ ಖರೀದಿಸಲೆಂದೇ, ಕಷ್ಟ ಪಡುತ್ತಾರೆ. ಮತ್ತು ತಮ್ಮ ಪ್ರಯತ್ನದಿಂದಲೇ, ಜೀವನದಲ್ಲಿ ಬೇಕಾದ್ದನ್ನು ಪಡೆದುಕೊಳ್ಳುತ್ತಾರೆ. ಆದರೆ ತೊಂದರೆ ಬಂದಾಗ, ಇದ್ದುದರಲ್ಲೇ ಜೀವನ ನಡೆಸುವ ಕಲೆಯೂ ಇವರಿಗೆ ಗೊತ್ತಿರುತ್ತದೆ.
ಮೀನ: ಮೀನ ರಾಶಿಯವರಿಗೆ ಜೀವನವನ್ನು ತನ್ನದೇ ರೀತಿಯಲ್ಲಿ ಆನಂದಿಸಬೇಕು. ಕುಟುಂಬಸ್ಥರು, ಸ್ನೇಹಿತರೊಂದಿಗೆ ಜೀವನವನ್ನು ಎಂಜಾಯ್ ಮಾಡಬೇಕು ಅನ್ನೋ ಮನಸ್ಸಿರುತ್ತದೆ. ಜೊತೆಗೆ ಮೌನ, ಪ್ರಶಾಂತತೆ ಎಂದರೆ ಇವರಿಗೆ ಇಷ್ಟ. ಇನ್ನು ತಮ್ಮ ಪ್ರೀತಿ ಪಾತ್ರರು ತೋರಿಸುವ ಪ್ರೀತಿಗೆ ಇವರು ಬೆಲೆ ಕೊಡುವ ಕಾರಣ, ದುರಾಸೆ ಪಡುವ ಮನಸ್ಸು ಇವರಿಗೆ ಇರುವುದಿಲ್ಲ.





