Saturday, December 28, 2024

Latest Posts

ಯುವತಿ ಜೊತೆ ಆಟೋ ಚಾಲಕನ ಗಲಾಟೆ ಕೇಸ್: ಜಾಮೀನಿಗಾಗಿ ಹಣ ಹೊಂದಿಸಲು ಡ್ರೈವರ್ ಪರದಾಟ

- Advertisement -

Bengaluru News: ಕಳೆದ ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಆಟೋ ಚಾಲಕನೋರ್ವ ಯುವತಿ ತನ್ನ ಆಟೋಗಾಗಿ ಮಾಡಿದ್ದ ಬುಕಿಂಗ್ ಕ್ಯಾನ್ಸಲ್‌ ಮಾಡಿದ್ದಳೆಂದು, ಕೋಪಗೊಂಡು, ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಅಲ್ಲದೇ ಆಕೆಯೊಂದಿಗೆ ಗಲಾಟೆ ಮಾಡಿ, ಆಕೆಗೆ ಹೊಡೆದಿದ್ದ ಅಂತಲೂ ಆ ಉತ್ತರಭಾರತದ ಯುವತಿ ಆರೋಪ ಮಾಡಿದ್ದಳು.

ಬಳಿಕ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಟೋ ಚಾಲಕನ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿಯೂ ಮಾಡಿದ್ದರು. ಇದಾದ ಬಳಿಕ ಯುವತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು. ಇದೀಗ ಆರೋಪಿ ಆಟೋ ಚಾಲಕ ಮುತ್ತಪ್ಪನನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಜಾಮೀನಿಗಾಗಿ ಆತ ಪರದಾಟ ನಡೆಸಿದ್ದಾನೆ.

ಲಾಯರ್ ಫೀಸ್, ಜಾಮೀನಿನ ಫೀಸ್ ಸೇರಿ 30 ಸಾವಿರ ರೂಪಾಯಿ ಹೊಂದಿಸಬೇಕಾಗಿದ್ದು, ಅಷ್ಟು ದುಡ್ಡು ಮುತ್ತಪ್ಪನ ಬಳಿ ಇಲ್ಲದಾಗಿದೆ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ತಪ್ಪು ಮಾಡಿದೆ ಎಂದು ಆಟೋ ಚಾಲಕನಿಗೆ ಅನ್ನಿಸಿದೆಯಾದರೂ, ಕಾಲ ಮಿಂಚಿ ಹೋಗಿದೆ.

ಆಟೋ ಕ್ಯಾನ್ಸಲ್ ಮಾಡಿದ್ದಕ್ಕೆ ಆಟೋ ಚಾಲಕ, ಯುವತಿಯರ ವಿರುದ್ಧ ಅಸಭ್ಯವಾಗಿ ಮಾತನಾಡಿದ್ದಲ್ಲದೇ, ವೀಡಿಯೋ ಮಾಡುತ್ತಿದ್ದ ಮೊಬೈಲ್ ಶೇಕ್ ಮಾಡಿದ್ದಾನೆ. ಈ ಘಟನೆಯಲ್ಲಿ ಚಾಲಕ ಯುವತಿಯ ಮೇಲೆ ಕೈ ಮಾಡಿದ್ದಾನೆ ಅಂತಾ ಹೇಳಲಾಗಿದೆ.

ಈ ವೀಡಿಯೋದಲ್ಲಿ ನನ್ನ ಆಟೋ ಬುಕ್ ಮಾಡಿ ಯಾಕೆ ಕ್ಯಾನ್ಸಲ್ ಮಾಡಿದ್ದು..? ಗ್ಯಾಸ್ ಯಾರು ನಿನ್ನ ಅಪ್ಪ ಕೊಡ್ತಾನಾ..? ಪೊಲೀಸರಿಗೆ ಕಂಪ್ಲೆಂಟ್ ಕೊಡೋದಾದ್ರೆ, ಕೋಡೋಣ ಇಳಿದು ಬಾ.. ಎಂದು ಆಟೋ ಚಾಲಕ ಜೋರು ಜೋರಾಗಿ ಮಾತನಾಡಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿರುವ ಯುವತಿ, ಯಾಕೆ ನೀವು ನಮ್ಮ ರೈಡ್‌ಗಳನ್ನು ಕ್ಯಾನ್ಸಲ್ ಮಾಡುವುದಿಲ್ಲವೇ..? ನಿಮಗೂ ಕಾರಣಗಳಿರುವುದಿಲ್ಲವೇ..? ಅದೇ ರೀತಿ ನಮಗೂ ಕೆಲವು ಕಾರಣಗಳಿರುತ್ತದೆ. ಹಾಗಾಗಿ ನಾವು ಆಟೋ ಬುಕಿಂಗ್ ಕ್ಯಾನ್ಸಲ್ ಮಾಡಿದ್ದೇವೆ ಎಂದಿದ್ದಾಳೆ.

ಈ ಘಟನೆಯನ್ನು ತನ್ನ ಮೊಬೈಲ್‌ನಲ್ಲಿ ವೀಡಿಯೋ ಮಾಡಿರುವ ಯುವತಿ, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ನಿನ್ನೆ ಬೆಂಗಳೂರಿನಲ್ಲಿ ಆಟೋ ಕ್ಯಾನ್ಸಲ್ ಮಾಡಿದ ಸಣ್ಣ ಕಾರಣಕ್ಕೆ, ಆಟೋ ಚಾಲಕ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಇಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದಳು.

- Advertisement -

Latest Posts

Don't Miss