ಸಾಯಲೆಂದು ಬಂದು ರೈಲ್ವೆ ಹಳಿಯ ಮೇಲೆ ನಿದ್ದೆ ಮಾಡಿದ ಯುವತಿ

Bihar News: ಸಾಯಲೆಂದು ರೈಲ್ವೆ ಹಳಿಗೆ ಹೋಗಿದ್ದ ಯುವತಿ, ಅಲ್ಲೇ ನಿದ್ರೆ ಮಾಡಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ನಡೆದಿದೆ. ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಯುವತಿ ಬದುಕುಳಿದಿದ್ದಾಳೆ.

ಕೆಲ ಕಾರಣಗಳಿಂದಾಗ, ಸಾಯಬೇಕು ಎಂದು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಯುವತಿ, ರೈಲು ಬರುವ ಸಮಯ ನೋಡಿಕೊಂಡು, ರೈಲ್ವೆ ಪಟರಿಯ ಮೇಲೆ ಪ್ರಾಣ ಬಿಡಲು ಹೋಗಿ ಮಲಗಿದ್ದಾಳೆ. ಆದರೆ ಎಷ್ಟು ಹೊತ್ತಾದರೂ ರೈಲು ಮಾತ್ರ ಬಂದಿಲ್ಲ. ಹಾಗಾಗಿ ಆಕೆ ಮಲಗಿದಲ್ಲೇ ನಿದ್ರೆಗೆ ಜಾರಿದ್ದಾಳೆ.

ರೈಲು ಬರುವಾಗ, ಲೋಕೋ ಪೈಲಟ್ ದೂರದಿಂದಲೇ ಆಕೆಯನ್ನು ಗಮನಿಸಿ ಎಮರ್ಜೆನ್ಸಿ ಬ್ರೆಕ್ ಹಾಕಿದ್ದಾನೆ. ಹಾಗಾಗಿ ಯುವತಿಯ ಪ್ರಾಣ ಉಳಿದಿದೆ. ಬಳಿಕ ಬೇರೆಯವರ ಸಹಾಯದಿಂದ ಆಕೆಯನ್ನು ಎಬ್ಬಿಸಿ, ರೈಲ್ವೆ ಹಳಿಯ ಪಕ್ಕಕ್ಕೆ ತಂದು ಕೂರಿಸಲಾಗಿದೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣ ತೆಗೆದುಕೊಳ್ಳಲು ಬಂದವಳ ಪ್ರಾಣ ಉಳಿಸಿದ್ದಕ್ಕಾಗಿ, ಆಕೆ ಅವರ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ತನ್ನನ್ನು ಸಾಯಲು ಬಿಡಬೇಕಿತ್ತು. ಬ್ರೇಕ್ ಹಾಕಬಾರದಿತ್ತು ಎಂದು ಸಿಟ್ಟಾಗಿದ್ದಾಳೆ.

ವೀಡಿಯೋಗಳಿಗೆ ಹಲವು ರೀತಿಯ ಕಾಮೆಂಟ್ಸ್‌ ಬಂದಿದೆ. ಲೋಕೋ ಪೈಲಟ್ ಬಗ್ಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮತ್ತು ಯುವತಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಲವರಿಗೆ ಹಠಾತ್ ಆಗಿ ಸಾವು ಬರುತ್ತದೆ. ಆದರೆ ಸಾಯಲೇಬೇಕು ಎಂದು ಬಂದವಳ ಜೀವ ಉಳಿದಿದೆ. ಹಾಗಾಗಿಯೇ ಹಿರಿಯರು ಹೇಳಿದ್ದು, ನಾವಂದುಕೊಂಡ ಹಾಗೆ ಜೀವನ ಸಾಗುವುದಿಲ್ಲ. ಜೀವನ ಸಾಗಿದಂತೆ ನಾವು ಅದರೊಂದಿಗೆ ಮುನ್ನಡೆಯಬೇಕು ಎಂದು.

About The Author