Saturday, December 21, 2024

Latest Posts

Hubli News: ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ ಬಂಗಾರದ ಸರ ಕದ್ದ ಕಳ್ಳರು

- Advertisement -

Hubli News: ಹುಬ್ಬಳ್ಳಿ: ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 25 ಗ್ರಾಂ ಬಂಗಾರದ ಸರವನ್ನು ಕದ್ದು ಕಳ್ಳನೊಬ್ಬ ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅಂಬಿಕಾ ನಗರದಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹೌದು, ಇದೇ ತಿಂಗಳು ಸೆ.11 ರಂದು ಸಂಜೆ 7 ಗಂಟೆ ಸುಮಾರಿಗೆ ಪದ್ಮಾವತಿ ಎಸ್, ಶ್ರೀಧರ್ ಎಂಬಾತ ಮಹಿಳೆ ಅಂಬಿಕಾ ನಗರದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬೈಕ್ ‌ಮೂಲಕ ಹಿಂಬಾಲಿಸಿ ಮಹಿಳೆಯ ಕೊರಳದಲ್ಲಿದ್ದ ಬಂಗಾರದ ಸರವನ್ನು ಕದ್ದು ಪರಾರಿಯಾಗಿದ್ದಾನೆ.

ಇನ್ನೂ ಮಹಿಳೆಯ ಕೊರಳಿಗೆ ಕದ್ದಿಮ ಕೈಹಾಕುತ್ತಿದ್ದಂತೆ ಮಹಿಳೆ ಕಿರಚಿದ್ರೂ ಸಹ ಯಾವುದೇ ಪ್ರಯೋಜನವಾಗಿಲ್ಲ, ಅಷ್ಟರಲ್ಲಿ ಕಳ್ಳ ಸರವನ್ನು ಕದ್ದು ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.

ಈ ಕುರಿತು ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳನನ್ನು ಹಿಡಿಯಲು ಇನ್ಸ್ಪೆಕ್ಟರ್ ಕೆ.ಎಸ್ ಹಟ್ಟಿ ವಿಶೇಷ ತಂಡವನ್ನು ರಚಿಸಿ, ಕಳ್ಳನಿಗೆ ಬಲೆ ಬಿಸಿದ್ದಾರೆ.

- Advertisement -

Latest Posts

Don't Miss