Movie News: 14 ವರ್ಷಗಳ ಹೋರಾಟದ ಜೀವನ ಮಾಡಿ, ಹಲವು ಕಷ್ಟಗಳನ್ನು ಅನುಭವಿಸಿ, ಬಲಗೈಯಿಂದ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಅನ್ನುವ ರೀತಿ ಜೀವಿಸಿ, ಇಂದು ದಿ ರೂಲರ್ಸ್ ಸಿನಿಮಾ ಮೂಲಕ ಸದ್ದು ಮಾಡುತ್ತಿರುವ ಹುಡುಗ ಸಂದೇಶ್. ಸಂದೇಶ್ ತಮ್ಮ ಜೀವನದ ಬಗ್ಗೆ ಮತ್ತು ದಿ ರೂಲರ್ಸ್ ಸಿನಿಮಾ ಬಗ್ಗೆ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ.
ಸಂದೇಶ್ ಅವರ ಅಮ್ಮ, ಸಂದೇಶ್ ಹೊಟ್ಟೆಯಲ್ಲಿ ಇರುವಾಗಲೇ, ತಾನು ಸಾಯಬೇಕು, ಜೊತೆಗೆ ಹೊಟ್ಟೆಯಲ್ಲಿರುವ ಮಗುವನ್ನೂ ತೆಗೆಯಬೇಕು ಎಂದು ಹೊರಟಿದ್ದರಂತೆ. ಯಾಕಂದ್ರೆ ಅವರಿಗೆ ಅಷ್ಟು ಬಡತನ ಕಾಡುತ್ತಿತ್ತು. ಮಕ್ಕಳು ಹುಟ್ಟಿದ ಬಳಿಕವೂ, ತಂದೆ ತಾಯಿ ಕಷ್ಟಪಟ್ಟು ದುಡಿದು ನಮ್ಮನ್ನು ಸಾಕಿದ್ದಾರೆ ಎಂದು, ತಂದೆ ತಾಯಿ ಪಟ್ಟ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ ಸಂದೇಶ್.
ಸಂದೇಶ್ ಅವರ ತಾಯಿ, ನೀನು ದೊಡ್ಡವನಾದ ಮೇಲೆ ನಿನಗಿಂತ ದೊಡ್ಡವರೂ ನಿನಗೆ ಅಣ್ಣ ಎಂದು ಕರೆದು ಮಾತನಾಡಿಸಬೇಕು. ಅಷ್ಟು ಒಳ್ಳೆಯ ಹೆಸರನ್ನು ನೀನು ಗಳಿಸಬೇಕು ಎಂದಿದ್ದರು. ಅದಕ್ಕೆ ಉತ್ತರಿಸಿದ್ದ ಸಂದೇಶ್, ಮುಂದೊಂದು ದಿನ ಇಡೀ ದೇಶ ನಮ್ಮೆಡೆಗೆ ತಿರುಗಿ ನೋಡಬೇಕು. ಹಾಗೆ ಬೆಳೆಯುತ್ತೇನೆ ಅಮ್ಮ ಎಂದಿದ್ದರು. ಅದರಂತೆ ಸಂದೇಶ್ ಇಂದು ದಿ ರೂಲರ್ಸ್ ಸಿನಿಮಾದ ಮೂಲಕ ಮನೆಮಾತಾಗಿದ್ದಾರೆ.
ಬರೀ ಶ್ರೀಮಂತರಷ್ಟೇ ಅಲ್ಲ, ಪರಿಶ್ರಮ, ನಿಯತ್ತು ಇದ್ದಲ್ಲಿ ಬಡವರ ಮಕ್ಕಳೂ ಕೂಡ, ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಬಹುದು ಎನ್ನುವ ಸಂದೇಶ ಸಾರುವ ಚಿತ್ರ, ದಿ ರೂಲರ್ಸ್. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಬೇಕು ಎಂದಲ್ಲಿ ವೀಡಿಯೋ ನೋಡಿ.




