Sunday, September 22, 2024

Latest Posts

Health Tips: ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ಎಚ್ಚರ!

- Advertisement -

Health Tips: ನಮ್ಮ ದೇಹದ ಮುಖ್ಯವಾದ ಭಾಗಗಳಾದ, ಹೃದಯ, ಕಿಡ್ನಿ, ಲಿವರ್ ಇವೆಲ್ಲವೂ ಆರೋಗ್ಯವಾಗಿದ್ದರೆ, ನಮಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಇದರಲ್ಲಿ ಒಂದು ಭಾಗದ ಆರೋಗ್ಯ ಹಾಳಾದ್ರೂ ಕೂಡ, ನಮ್ಮ ದೇಹಕ್ಕೆ ತೊಂದರೆ ಉಂಟಾಗುತ್ತದೆ. ಹಾಗಾಗಿ ದೇಹದಲ್ಲಿ ಯಾವ ಲಕ್ಷಣ ಕಂಡುಬಂದ್ರೆ, ಆರೋಗ್ಯ ಹಾಳಾಗುತ್ತಿದೆ ಎಂದರ್ಥ, ಅನ್ನೋ ವಿಷಯದ ಬಗ್ಗೆ ಪಾರಂಪರಿಕ ವೈದ್ಯರಾದ ಡಾಾ.ಪವಿತ್ರಾ ವಿವರಿಸಿದ್ದಾರೆ.

ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗಬೇಕು. ಹಾಗಾಗಬೇಕು ಅಂದ್ರೆ, ಅದಕ್ಕೆ ಬೇಕಾದ ಪೌಷ್ಠಿಕಾಂಶವನ್ನು ನಮ್ಮ ದೇಹ ಹೊಂದಿರಬೇಕು. ಕೆಟ್ಟ ಕೊಲೆಸ್ಟ್ರಾಲ್ ಇದ್ದಾಗ, ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಈ ವೇಳೆ ಹೃದಯ, ಲಿವರ್, ಕಿಡ್ನಿಯ ಆರೋಗ್ಯ ಹಾಳಾಗಲು ಶುರುವಾಗುತ್ತದೆ.

ಇನ್ನು ಎರಡನೇಯದಾಗಿ ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗಬೇಕು. ಹಾಗೆ ಜೀರ್ಣವಾಗಬೇಕು ಅಂದ್ರೆ, ನಾರಿನಂಶ ಇರುವ ಪದಾರ್ಥ ಹೆಚ್ಚು ಸೇವಿಸಬೇಕು. ಹೆಚ್ಚು ನೀರು ಕುಡಿಯಬೇಕು. ದೇಹವನ್ನು ತಂಪು ಮಾಡಿಕೊಳ್ಳಬೇಕು. ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಒಮ್ಮೆ ನಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆ ಅಥವಾ ಹೊಟ್ಟೆಯ ಆರೋಗ್ಯದ ಮೇಲೆ ಪೆಟ್ಟು ಬಿದ್ದರೆ, ನಮ್ಮ ಆರೋಗ್ಯ ಹಾಳಾದಂತೆ. ಹಾಗಾಗಿ ತಿಂದ ಆಹಾರ ಸರಿಯಾಗಿ ಜೀರ್ಣವಾಗುವಂತೆ ನೋಡಿಕೊಳ್ಳಬೇಕು.

ಇನ್ನು ಹಾಲಿನ ಉತ್ಪನ್ನ ಬಳಸಿದರೆ, ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಅನ್ನೋ ಮಿಥ್ಯವನ್ನು ಕೆಲ ಜನರು ನಂಬುತ್ತಾರೆ. ಆದರೆ ದೇಹಕ್ಕೆ ಹಾಲಿನ ಪದಾರ್ಥಗಳ ಅವಶ್ಯಕತೆ ಇದೆ. ಆದರೆ ಎಲ್ಲ ರೀತಿಯ ಆಹಾರವೂ ನಮ್ಮ ದೇಹಕ್ಕೆ ಮಿತವಾಗಿಯಾದರೂ ಬೇಕಾಗುತ್ತದೆ. ಹಾಗಾಗಿ ಹಾಲು, ಹಾಲಿನ ಪದಾರ್ಥ ತುಪ್ಪ, ಬೆಣ್ಣೆ, ಮಜ್ಜಿಗೆಯನ್ನು ಸ್ವಲ್ಪವಾದರೂ ೇಸವನೆ ಮಾಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ, ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss