Spiritual: ಮನೆ ಕಟ್ಟಬೇಕು, ಉದ್ಯಮ ಆರರಂಭಿಸಬೇಕು, ಮದುವೆಯಾಗಬೇಕು, ಮನೆಯಲ್ಲಿ ಏನೋ ವಿಶೇಷ ಕಾರ್ಯಕ್ರಮವಿದೆ ಅಂದಾಗ ಕೆಲವರು, ತಿರುಪತಿಗೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದು ಬರುತ್ತಾರೆ. ಹಾಗಾದ್ರೆ ಯಾಕೆ ಶುಭ ಕಾರ್ಯಕ್ಕೂ ಮುನ್ನ ಜನ ತಿರುಪತಿಗೆ ಹೋಗೋದು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಶುಭಕಾರ್ಯಕ್ಕೂ ಮುನ್ನ ಕುಲದೇವರಿಗೆ, ಇಷ್ಟ ದೇವರ ಸನ್ನಿಧಾನಕ್ಕೆ ಭೇಟಿ ನೀಡಬೇಕು ಅಂತಾ ಹಿಂದೂ ಧರ್ಮದಲ್ಲಿ ಪದ್ಧತಿ ಇದೆ. ಹೀಗೆ ಮಾಡಿದ್ದಲ್ಲಿ, ನಾವು ಕೈಗೊಂಡ ಕೆಲಸ ಉತ್ತಮವಾಗಿ ಸಾಗುತ್ತದೆ ಅಂತಾ ನಂಬಿಕೆ ಇದೆ. ಹಾಗಾಗಿಯೇ ಮದುವೆಗೂ ಮುನ್ನ, ಮನೆ ಕಟ್ಟಿಸುವ ಮುನ್ನ, ಗೃಹಪ್ರವೇಶಕ್ಕೂ ಮುನ್ನ, ಶುಭ ಕಾರ್ಯಕ್ಕೂ ಮುನ್ನ ಕುಲದೇವರಿಗೆ ಹೋಗಿ, ದೇವರ ಆಶೀರ್ವಾದ ಪಡೆದು ಬರುತ್ತಾರೆ.
ಇನ್ನು ತಿರುಪತಿಗೆ ಹೋಗಿ, ತಿಮ್ಮಪ್ಪನ ಆಶೀರ್ವಾದ ಪಡೆದರೆ, ಜೊತೆಗೆ ಮಹಾಲಕ್ಷ್ಮೀಯ ಅನುಗ್ರಹವೂ ಸಿಗುತ್ತದೆ. ಇದರಿಂದ ನಾವು ಮಾಡುವ ಶುಭಕಾರ್ಯ ಯಾವುದೇ ವಿಘ್ನವಿಲ್ಲದೇ ನಡೆಯುತ್ತದೆ. ಮತ್ತು ಆರ್ಥಿಕತೆಯ ಕಿರಿಕಿರಿಯುಂಟಾಗುವುದಿಲ್ಲ. ಹಾಗಾಗಿಯೇ ತಿರುಪತಿಗೆ ಹೋದಾಗ, ಬಾಲಾಜಿಯ ಜೊತೆಗೆ ಮಹಾಲಕ್ಷ್ಮೀಯ ದರ್ಶನ ಮಾಡಿ, ಆಶೀರ್ವಾದ ಪಡೆಯಬೇಕು ಅಂತಾ ಹೇಳುವುದು.
ತಿರುಪತಿ ಬಾಲಾಜಿ- ಮಹಾಲಕ್ಷ್ಮೀ ದರ್ಶನ ಪಡೆದರೆ, ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಪತಿ-ಪತ್ನಿ ಸುಖವಾಗಿ, ನೆಮ್ಮದಿಯಾಗಿ ಬಾಳುತ್ತಾರೆ, ಸಂತಾನ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ನೆಮ್ಮದಿ ಇರುತ್ತದೆ ಅನ್ನೋ ನಂಬಿಕೆ ಇದೆ. ಈ ಕಾರಣಕ್ಕೆ ಶುಭ ಕಾರ್ಯಕ್ಕೆ ಮುನ್ನ ಮತ್ತು ವಿವಾಹವಾದ ಹೊಸತರಲ್ಲಿ ಜನ ತಿರುಪತಿ ತಿಮ್ಮಪ್ಪ ಮತ್ತು ಲಕ್ಷ್ಮೀದೇವಿಯ ದರ್ಶನ ಮಾಡೋದು.





