Monday, April 14, 2025

Latest Posts

Sports News: ವಿರಾಟ್ ಮಾತಿಗೆ ಸಿಟ್ಟಾದ ನೆಟ್ಟಿಗರು.. ಅಂಥಾದ್ದೇನು ಹೇಳಿದ್ರು ಕೊಹ್ಲಿ..?

- Advertisement -

Sports News: ವಿರಾಟ್ ಕೊಹ್ಲಿ ಅಂದ್ರೆ ಬರೀ ಆರ್‌ಸಿಬಿಗರ ಅಚ್ಚುಮೆಚ್ಚಿನ ಆಟಗಾರನಲ್ಲ. ಬದಲಾಗಿ ಭಾರತದಲ್ಲಿರುವ ಎಲ್ಲ ಕ್ರಿಕೇಟ್ ಪ್ರೇಮಿಗಳ ನೆಚ್ಚಿನ ಕ್ರಿಕೇಟಿಗ. ಅಲ್ಲದೇ, ಎಷ್ಟೇ ಬ್ಯುಸಿ ಇದ್ದರೂ, ಪತ್ನಿ- ಮಕ್ಕಳಿಗೆ ಸಮಯ ಮೀಸಲಿಡುವ ಇವರ ಗುಣವೇ, ಇವರನ್ನು ಇನ್ನಷ್ಟು ಗೌರವಿಸುವಂತೆ, ಪ್ರೀತಿಸುವಂತೆ ಮಾಡೋದು. ಆದ್ರೆ ಇದೀಗ, ಕೊಹ್ಲಿ ಆಡಿತ ಮಾತಿನಿಂದ, ನಿಟ್ಟಿಗರು ಸಿಟ್ಟಾಗಿದ್ದಾರೆ.

ಈ ವೀಡಿಯೋದಲ್ಲಿ ಚೆನ್ನೈನಿಂದ ಕಾನ್ಪುರಕ್ಕೆ ಬಂದಿಳಿದ ಭಾರತೀಯ ಕ್ರಿಕೇಟ್‌ ತಂಡಕ್ಕೆ ಅದ್ಧೂರಿ ಸ್ವಾಗತ ನೀಡಲಾಯಿತು. ಹೊಟೇಲ್ ಸಿಬ್ಬಂದಿ ಎಲ್ಲ ಆಟಗಾರರನ್ನು ಪ್ರೀತಿಯಿಂದಲೇ ಸ್ವಾಗತಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ, ಹೊಟೇಲ್ ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ.

ಹೊಟೇಲ್ ಸಿಬ್ಬಂದಿ ಕ್ರಿಕೇಟಿಗರ ಹಣೆಗೆ ತಿಲಕವನ್ನಿಟ್ಟು, ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ. ಈ ವೇಳೆ ಅಲ್ಲಿದ್ದ ವಿರಾಟ್ ಫ್ಯಾನ್ಸ್, ವಿರಾಟ್ ಅವರೊಂದಿಗೆ ಮಾತನಾಡಬೇಕು, ಸೆಲ್ಫಿ ತೆಗೆದುಕೊಳ್ಳಬೇಕು, ಅವರನ್ನು ನೋಡಬೇಕು ಎಂದು ಆತುರ ಪಟ್ಟಿದ್ದಾರೆ. ಇದರಿಂದ ವಿರಾಟ್‌ಗೆ ಕಿರಿಕಿರಿಯುಂಟಾಗಿದೆ.

ಬಳಿಕ ವಿರಾಟ್ ಹೊಟೇಲ್ ಒಳಗೆ ಆಗಮಿಸಿದಾಗ, ಅವರ ಒಂದು ಕೈಯಲ್ಲಿ ಹೂಗುಚ್ಛ, ಇನ್ನೊಂದು ಕೈಯಲ್ಲಿ ಅವರ ವಸ್ತುವೊಂದು ಇತ್ತು. ಈ ವೇಳೆ ಹೊಟೇಲ್ ಸಿಬ್ಬಂದಿ ಅವರಿಗೆ ಕೈಕುಲುಕಲು ಬಂದಿದ್ದಾರೆ. ಆಗ ಗರಂ ಆದ ಕೊಹ್ಲಿ, ನನಗೆ ಎರಡೇ ಕೈ ಇರೋದು ಸರ್, ಆದರೆ ನಿಮ್ಮ ಪ್ರೀತಿಗೆ ಥ್ಯಾಂಕ್ಸ್ ಅಂತ ಹೇಳಿ, ಗಂಟು ಮುಖ ಹಾಕಿಕೊಂಡೇ ಮುನ್ನಡೆದಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಜನ ಕಾಮೆಂಟ್ ಹಾಕಲು ಶುರು ಮಾಡಿದ್ದಾರೆ. ವಿರಾಟ್ ಇಷ್ಟು ಹಾರ್ಶ್ ಆಗಿ ಮಾತನಾಡಬಾರದಿತ್ತು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

- Advertisement -

Latest Posts

Don't Miss