Health Tips: ಕಿಡ್ನಿ ಸಮಸ್ಯೆ ಬಂದಾಗ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬರಬಾರದು ಅಂದ್ರೆ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬಂದಾಗ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು ಅಂತಾ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಇದೀಗ ಕಿಡ್ನಿ ಸಮಸ್ಯೆ ಹೆಣ್ಣು ಮಕ್ಕಳಲ್ಲಿ ಹೆಚ್ಚಾ..? ಗಂಡು ಮಕ್ಕಳಲ್ಲಿ ಹೆಚ್ಚಾ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ಕಿಡ್ನಿ ಪ್ರಾಬ್ಲಮ್ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮೊದಲೆಲ್ಲ ಬರೀ ಪುರುಷರಷ್ಟೇ ದುಡಿಯಲು ಆಫೀಸಿಗೆ ಹೋಗುತ್ತಿದ್ದರು. ಇದೀಗ ಹೆಣ್ಣು ಮಕ್ಕಳು ಕೂಡ ಪುರುಷರಂತೆ, ಹೊರಗೆ ಹೋಗಿ ದುಡಿಯಲು ಶುರು ಮಾಡಿದ್ದಾರೆ. ಹಾಗಾಗಿ ನೀರಿನ ಸೇವನೆ ಕಡಿಮೆಯಾಗಬಹುದು. ಆರೋಗ್ಯಕರ ಆಹಾರ ಸೇವನೆ ಕಡಿಮೆಯಾಗಬಹುದು. ಆದರೂ ಕೂಡ, ಸ್ತ್ರೀಯರಿಗಿಂತ ಪುರುಷರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚು ಅಂತಾರೆ ವೈದ್ಯರು.
ಓರ್ವ ಆರೋಗ್ಯಕರ ಮನುಷ್ಯ ದಿನಕ್ಕೆ 500ಎಂಎಲ್ ಯೂರಿನ್ ಪಾಸ್ ಮಾಡಬೇಕು ಅನ್ನೋ ನಿಯಮವಿದೆ. ಆದರೆ ನೀವು ನೀರು ಕುಿಡದ ತಕ್ಷಣ ನಿಮಗೆ ಮೂತ್ರವಿಸರ್ಜನೆಯಾಗಬೇಕು ಅಂತೇನಿಲ್ಲ. ನೀವು ನೀರು ಕುಡಿದು ಅದು ದೇಹದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿದ ಬಳಿಕ, ಮೂತ್ರವಿಸರ್ಜನೆಯಾಗುತ್ತದೆ. ಆದರೆ ನಿಮಗೆ ನೀರು ಕಡಿಮೆ ಕುಡಿದರೂ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತಿದೆ ಎಂದಲ್ಲಿ, ದೇಹದಲ್ಲಿ ಆರೋಗ್ಯ ಸಮಸ್ಯೆ ಇದೆ ಎಂದರ್ಥ. ಹೀಗಿದ್ದಾಗ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.